Advertisement

ಹಾಡುಗಳಲ್ಲಿ ಸಾಲ್ಟ್ ಟೆಸ್ಟ್

03:51 PM Feb 24, 2021 | Team Udayavani |

ಸಿನಿಮಾ ಚಿತ್ರೀಕರಣದ ಕೊನೆಯ ದಿನ 16 ಕೆ.ಜಿ ತೂಕದ ಕುಂಬಳಕಾಯಿ ಒಡೆದು ಸುದ್ದಿಯಾಗಿದ್ದ ಹೊಸಬರ “ಸಾಲ್ಟ್’ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರರಂಗದ ಗಣ್ಯರೆಲ್ಲಾ ಸೇರಿ ಹೊಸಬರ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.

Advertisement

ಅಡುಗೆಯಲ್ಲಿ ಉಪ್ಪು ಎಷ್ಟು ರುಚಿ ಹೆಚ್ಚಿಸುತ್ತದೆಯೋ, ಹಾಗೇ ಜೀವನದಲ್ಲೂ ಉಪ್ಪಿನಂಥ ಅಂಶಗಳಿದ್ದರೆ ಬದುಕಿನ ರುಚಿಯೂ ಹೆಚ್ಚುತ್ತದೆ ಎನ್ನುವ ಅಂಶಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗುತ್ತಿದೆಯಂತೆ. ಹಾಗಾಗಿ ಚಿತ್ರಕ್ಕೆ “ಸಾಲ್ಟ್’ ಎನ್ನುವ ಟೈಟಲ್‌ ಇಟ್ಟಿದೆ ಚಿತ್ರತಂಡ.

ಇದನ್ನೂ ಓದಿ:ನಟಿ ಪ್ರಿಯಾಂಕಾ ನ್ಯೂ ಲುಕ್ ಡ್ರೆಸ್ ವೈರಲ್…ಕಾಲೆಳೆದ ಟ್ರೋಲಿಗರು!

ಈ ಚಿತ್ರಕ್ಕೆ ಭರತ್‌ ನಂದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಭರತ್‌ ನಂದ ಅವರೊಂದಿಗೆ ಚೇತನ್‌ ಕುಮಾರ್‌, ಚಂದ್ರು ಛತ್ರಪತಿ, ಸತೀಶ್‌ ಮಳವಳ್ಳಿ ಚಿತ್ರದಲ್ಲಿ ನಾಲ್ವರು ನಾಯಕರುಗಳಾಗಿ ಅಭಿನಯಿಸಿದ್ದಾರೆ.

ಉಳಿದಂತೆ ಬಾಲರಾಜವಾಡಿ, ಸಂದೀಪ್‌, ವಿಜಯಶ್ರೀ ಕಲಬುರಗಿ, ಯಶಸ್ವಿನಿ ಶೆಟ್ಟಿ, ರಶ್ಮಿತಾ ಗೌಡ, ಸುರ್ಯೋದಯ್‌ ಪೆರಂಪಳ್ಳಿ, ಚಕ್ರವರ್ತಿ ದಾವಣಗೆರೆ, ಹರ್ಷ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಈ ಚಿತ್ರದ ಶೂಟಿಂಗ್‌ ನಡೆಸಲಾಗಿದೆ. ಚಿತ್ರತಂಡದವರು ತಮ್ಮ ಅನಿಸಿಕೆ ಹಂಚಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next