Advertisement

“ದಬಾಂಗ್‌ 3′ಕನ್ನಡ ಅವತರಣಿಕೆಗೆ ಸಲ್ಮಾನ್ ಧ್ವನಿ

10:08 AM Oct 13, 2019 | Lakshmi GovindaRaju |

ಬಾಲಿವುಡ್‌ ನಟ ಸಲ್ಮಾನ್‌ಖಾನ್‌ ಅಭಿನಯದ “ದಬಾಂಗ್‌-3′ ಸಿನಿಮಾ ಇನ್ನೇನು ಬಿಡುಗಡೆಗೆ ಸಜ್ಜಾಗುತ್ತಿರುವುದು ಗೊತ್ತೇ ಇದೆ. ಆ ಚಿತ್ರದಲ್ಲಿ ಸುದೀಪ್‌ ಕೂಡ ನಟಿಸಿದ್ದಾರೆ. ಇದೇ ಮೊದಲ ಸಲ ಸುದೀಪ್‌ ಅವರು ಸಲ್ಮಾನ್‌ ಖಾನ್‌ ಕಾಂಬಿನೇಶನ್‌ನಲ್ಲಿ ಅಭಿನಯಿಸಿರುವುದು ವಿಶೇಷ. ಈಗ ಈ ಚಿತ್ರದ ಮತ್ತೊಂದು ಹೊಸ ಸುದ್ದಿ ಹೊರಬಂದಿದೆ.

Advertisement

“ದಬಾಂಗ್‌-3′ ಕನ್ನಡ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ ಎಂಬ ವಿಷಯ ಗೊತ್ತು. ಕನ್ನಡದಲ್ಲಿ ಬಿಡುಗಡೆಯಾಗುವ ಚಿತ್ರಕ್ಕೆ ಸ್ವತಃ ಸಲ್ಮಾನ್‌ ಖಾನ್‌ ಅವರೇ, ತಮ್ಮ ಪಾತ್ರಕ್ಕೆ ಡಬ್‌ ಮಾಡಲು ಒಪ್ಪಿದ್ದಾರೆ. ಹೌದು, ಟ್ರೇಲರ್‌ಗೆ ಡಬ್‌ ಮಾಡಿದ್ದ ಅವರನ್ನು, ಸುದೀಪ್‌ ಅವರು, “ನೀವೇ ಕನ್ನಡದಲ್ಲೂ ಡಬ್‌ ಮಾಡಿದರೆ ಅದಕ್ಕೊಂದು ವ್ಯಾಲ್ಯು ಬರುತ್ತೆ.

ಏನಾದರೂ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ, ಸರಿಪಡಿಸಿಕೊಳ್ಳೋಣ’ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ, ಸಲ್ಮಾನ್‌ಖಾನ್‌ ಅವರು ಇಂಟ್ರೆಸ್ಟ್‌ ತೋರಿಸಿ ಒಪ್ಪಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ಡೈಲಾಗ್‌ ಹೇಳಿಕೊಡಲು ಒಬ್ಬರನ್ನು ನೇಮಿಸಿದ್ದು, ಅವರೊಂದಿಗೆ ಈಗಾಗಲೇ ಮಾತುಕತೆ ಕೂಡ ನಡೆಸಲಾಗಿದೆ’ ಎಂಬುದು ಜಾಕ್‌ ಮಂಜು ಅವರ ಮಾತು. ಅಂದಹಾಗೆ, “ದಬಾಂಗ್‌-3′ ಚಿತ್ರವನ್ನು ಕನ್ನಡದಲ್ಲಿ ಜಾಕ್‌ ಮಂಜು ಅವರು ವಿತರಣೆ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next