ಜೋಧಪುರ: ನಟ ಸಲ್ಮಾನ್ ಖಾನ್ ಆರೋಪಿಯಾಗಿರುವ 1998ರಲ್ಲಿ ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣವೊಂದರ ತೀರ್ಪನ್ನು ಜೋಧಪುರ ಸ್ಥಳೀಯ ನ್ಯಾಯಾಲಯ ಬುಧವಾರ ಪ್ರಕಟಿಸಲಿದೆ.
1998ರ ಅ.1ರಂದು “ಹಮ್ ಸಾಥ್ ಸಾಥ್ ಹೈ’ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಅವರು ಅಳಿವಿನಂಚಿನಲ್ಲಿರುವ ಕೃಷ್ಣಮೃಗವನ್ನು ಬೇಟೆಯಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಬೇಟೆಗೆ ಅಕ್ರಮ ಶಸ್ತ್ರಾಸ್ತ್ರ ಬಳಸಿದ ಆರೋಪವೂ ಸಲ್ಮಾನ್ ಖಾನ್ ಮೇಲಿದ್ದು, ಅಕ್ರಮ ಶಸ್ತ್ರಾಸ್ತ್ರ ಕುರಿತ ತೀರ್ಪು ಜ.18ರಂದು ಹೊರಬೀಳಲಿದೆ. ಅಂದು ವಿಚಾರಣೆ ವಿಚಾರಣೆಗೆ ಹಾಜರಾಗುವಂತೆ ಸಲ್ಮಾನ್ ಅವರಿಗೆ ಕೋರ್ಟ್ ಸೂಚನೆ ನೀಡಿದ್ದು, ಆ ಪ್ರಕಾರ ಮಂಗಳವಾರ ಸಂಜೆಯೇ ಜೋಧಪುರಕ್ಕೆ ಸಲ್ಲು ಆಗಮಿಸಿದ್ದಾರೆ.
ನ್ಯಾಯಾಲಯದ ಆವರಣದಲ್ಲಿ ಭಾರೀ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.