ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ದುಬೈನಲ್ಲಿ ಡ್ರೈವಿಂಗ್ ಸ್ಕೂಲ್‌ವೊಂದಕ್ಕೆ ಚಾಲನೆ ನೀಡಿದ್ದು , ಈ ಬಗ್ಗೆ ಟ್ವೀಟರ್‌ನಲ್ಲಿ ಭಾರೀ ಟೀಕೆಗಳು ಹರಿದು ಬಂದಿದವೆ.
ಅಭಿಮಾನಿಗಳ ಒತ್ತಾಯಾದಿಂದ ಸಲ್ಲು ರಿಬ್ಬನ್ ಕತ್ತರಿಸಿದ ಬೆನ್ನಲ್ಲೇ ಟ್ವೀಟರ್‌ನಲ್ಲಿ ನೂರಾರು ಟ್ವೀಟ್‌ಗಳು ಹರಿದು ಬಂದಿದ್ದು ಹಿಟ್&ರನ್ ಪ್ರಕರಣವನ್ನು ನೆನಪಿಸಿದ್ದಾರೆ.
ಕೆಲವರು ‘ಸಲ್ಮಾನ್ ಖಾನ್ ಅವರು ಡ್ರೈವಿಂಗ್ ಸ್ಕೂಲ್ ಉದ್ಘಾಟಿಸಿದರೆ? ಮುಂದೆ ರಾಮ್ ರಹೀಂ ಸಿಂಗ್ ನಾರಿ ನಿಕೇತನ ಉದ್ಘಾಟಿಸಬಹುದು’ ಎಂದು ಬರೆದಿದ್ದಾರೆ. ಇನ್ನೊಂದು ಟ್ವೀಟ್‌ನಲ್ಲಿ ‘ಡ್ರೈವಿಂಗ್ ಸ್ಕೂಲ್ ಆಯ್ತು ಇನ್ನು ಕೃಷ್ಣ ಮೃಗ ಸಂರಕ್ಷಣಾ ಅಭಿಯಾನವೋ’ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ‘ಸಲ್ಮಾನ್ ಉದ್ಘಾಟಿಸಿರುವ ಡ್ರೈವಿಂಗ್ ಸ್ಕೂಲ್‌ನಲ್ಲಿ ನಿರ್ಗತಿಕರು ಬೀದಿ ಬದಿಯಲ್ಲಿ ಮಲಗಿದರೆ ಹೇಗೆ ಕಾರು ಹತ್ತಿಸಬೇಕೆನ್ನುವುದನ್ನು ಕಲಿಸಬಹುದಲ್ಲ’ ಎಂದು ಕಾಲೆಳೆಯಲಾಗಿದೆ.
ಇನ್ನೋರ್ವ..’ಓ ಡ್ರೈವಿಂಗ್ ಸ್ಕೂಲ್ ಉದ್ಘಾಟಿಸಿದರೆ.. ಮುಂದಿನ ದಿನಗಳಲ್ಲಿ ಹಂಟಿಂಗ್ ಸ್ಕೂಲ್ ಉದ್ಘಾಟಿಸುತ್ತಾರೇನೋ’ ಎಂದು ಬರೆಯಲಾಗಿದೆ.
ಅಲ್ ಖ್ವೋಜ್‌ನಲ್ಲಿ ಸಲ್ಮಾನ್ ಖಾನ್ ಅವರು ಉದ್ಯಮಿ ರಶೀದ್ ಒಡೆತನದ ಬೆಲ್‌ಹಾಸಾ ಡ್ರೈವಿಂಗ್ ಸ್ಕೂಲ್‌ಗೆ ಚಾಲನೆ ನೀಡಿದ್ದರು.
2002 ರ ಸಪ್ಟೆಂಬರ್ ತಿಂಗಳಿನಲ್ಲಿ ಪುಟ್‌ಬಾತ್‌ನಲ್ಲಿ ಮಲಗಿದ್ದವರ ಮೇಲೆ ಕಾರು ಹತ್ತಿಸಿ ಓರ್ವ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದ ಆರೋಪ ಇತ್ತು.