Advertisement

ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಲುಗೆ ಹುಡುಗಿ ಸಿಕ್ಕಳು!

04:15 PM Feb 07, 2018 | Sharanya Alva |

ನವದೆಹಲಿ: ಅವಿವಾಹಿತರಾಗಿಯೇ ಉಳಿದಿರುವ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌, ಮಂಗಳವಾರ ಇದ್ದಕ್ಕಿದ್ದಂತೆ “ನನಗೆ ಹುಡುಗಿ ಸಿಕ್ಕಳು’ ಎಂದು ಟ್ವೀಟ್‌ ಮಾಡಿರುವುದು ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿತ್ತು. ಆದರೆ, ಅದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸಲ್ಮಾನ್‌ ಈ ಸಂಚಲನವನ್ನು ಕ್ಷಣಗಳಲ್ಲೇ ತಣ್ಣಗಾಗಿಸಿದರು. 

Advertisement

ವಿಚಾರ ಇಷ್ಟೇ. ಅವರ ಸಂಬಂಧಿ ಆಯುಷ್‌ ಶರ್ಮಾ ಅವರ “ಲವ್‌ ರಾತ್ರಿ’ಗೆ ಸೂಕ್ತ ನಾಯಕಿಗಾಗಿ ತುಂಬಾ ದಿನಗಳಿಂದ ಹುಡುಕಾಟ ನಡೆಸಲಾಗುತ್ತಿತ್ತು. ಇದೀಗ, ಆ ಚಿತ್ರಕ್ಕೆ ವರಿನಾ ಎಂಬ ಸುಂದರಿ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಇದನ್ನೇ ಸಲ್ಲು ಮಿಯಾ ಬೇರೆ ರೀತಿ ಹೇಳಿ ಎಲ್ಲರನ್ನೂ ದಂಗಾಗಿಸಿದ್ದು.

Advertisement

Udayavani is now on Telegram. Click here to join our channel and stay updated with the latest news.

Next