Advertisement

ಬಚ್ಚನ್‌ ಫ್ಯಾಮಿಲಿ ಜೊತೆ ಗೈರಾಗಿ ಸಲ್ಮಾನ್‌ ಜತೆ ಫೋಟೋಗೆ ನಿಂತ ಐಶ್ವರ್ಯಾ! ಏನಿದರ ಅಸಲಿಯತ್ತು

06:56 PM Jul 13, 2024 | Team Udayavani |

ಮುಂಬಯಿ: ಅನಂತ್‌ – ರಾಧಿಕಾ(Anant Ambani wedding)ಮದುವೆ ಸಂಭ್ರಮದಲ್ಲಿ ವಿಶ್ವದ ಸಿರಿವಂತರು, ಬಿಟೌನ್‌ ತಾರೆಯರು ಸೇರಿದಂತೆ ನಾನಾ ಕ್ಷೇತ್ರದ ಗಣ್ಯರು ಭಾಗಿಯಾಗಿ ಸಂಭ್ರಮಿಸಿದ್ದಾರೆ.

Advertisement

ಬಿಟೌನ್‌ ಹಾಗೂ ಕ್ರೀಡಾ ಸೆಲೆಬ್ರಿಟಿಗಳು ಕುಣಿದು ಕುಪ್ಪಳಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಾಲಿವುಡ್‌ ನಟಿ ಐಶ್ವರ್ಯಾ ರೈ (Aishwarya Rai) ತನ್ನ ಪತಿಯ ಕುಟುಂಬದ ಜೊತೆ ಕಾಣಿಸಿಕೊಂಡಿಲ್ಲ ಎನ್ನುವ ಮಾತು ಎಲ್ಲೆಡೆ ಚರ್ಚೆ ಆಗುತ್ತಿದೆ. ಇಬ್ಬರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ.

ಇನ್ನೊಂದೆಡೆ ಐಶ್ವರ್ಯಾ ರೈ ಸಲ್ಮಾನ್‌ ಖಾನ್‌ (Salman Khan) ಅವರೊಂದಿಗೆ ನಿಂತು ಪೋಸ್‌ ಕೊಟ್ಟಿರುವ ಫೋಟೋವೊಂದು ವೈರಲ್‌ ಆಗಿದೆ.  ಆದರೆ ನಿಜವಾಗಿಯೂ ಹೀಗೆ ಆಗಿದ್ದರೆ ಇಬ್ಬರ ಅಭಿಮಾನಿಗಳು ಖುಷ್‌ ಆಗುತ್ತಿದ್ದರು.

ಸಲ್ಮಾನ್‌ ಖಾನ್‌ ತನ್ನ ಸಹೋದರಿ ಅರ್ಪಿತಾ ಹಾಗೂ  ಐಶ್ವರ್ಯಾ ರೈ ನಿಂತಿರುವ ಎಐ ರಚಿತ ಫೋಟೋ ವೈರಲ್‌ ಆಗಿದೆ.

Advertisement

“ಐಶ್ವರ್ಯಾ ರೈ ಬಚ್ಚನ್‌ ಫ್ಯಾಮಿಲಿ ಜೊತೆ ಕಾಣಿಸಿಕೊಳ್ಳದೆ, ಸಲ್ಮಾನ್‌ ಖಾನ್‌ ಜೊತೆ ಕಾಣಿಸಿಕೊಂಡಿದ್ದಾರೆ. ಇದು ಹುಚ್ಚುತನ” ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಮತ್ತೊಬ್ಬರು “ಹಮ್ ದಿಲ್ ದೇ ಚುಕೆ ಸನಮ್ 2” ಎಂದಿದ್ದಾರೆ. “ಎಐ ಎಲ್ಲವನ್ನೂ ಹಾಳು ಮಾಡುತ್ತದೆ, ನಕಲಿ ಫೋಟೋ ಎಚ್ಚರ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

1999ರಲ್ಲಿ ಬಂದ ಸಂಜಯ್‌ ಲೀಲಾ ಬನ್ಸಾಲಿ ಅವರ ʼ ಹಮ್ ದಿಲ್ ದೇ ಚುಕೇ ಸನಮ್ʼ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಂಡ ಬಳಿಕ ಸಲ್ಮಾನ್‌ – ಐಶ್ವರ್ಯಾ ಇಬ್ಬರು ಪ್ರೇಮ ಸಂಬಂಧದಲ್ಲಿದ್ದರು ಎನ್ನುವ ಮಾತುಗಳು ಅಂದು ಹರಿದಾಡಿತ್ತು.

ಆದರೆ ಸಲ್ಮಾನ್ ಅವರ ಅನುಚಿತ ವರ್ತನೆ, ಕೆಟ್ಟ ನಡವಳಿಕೆಯಿಂದ ಇಬ್ಬರ ನಡುವಿನ ಸಂಬಂಧ 2002ರಲ್ಲಿ ಅಂತ್ಯವಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next