Advertisement

ವರೂರು ಕ್ಷೇತ್ರದಲ್ಲಿ ಮುನಿಶ್ರೀ ನೇಮಿಸಾಗರ ಮಹಾರಾಜರ ಸಲ್ಲೇಖನ ವ್ರತ

03:45 PM Mar 16, 2021 | Team Udayavani |

ಹುಬ್ಬಳ್ಳಿ: ತಾಲೂಕಿನ ವರೂರು ನವಗ್ರಹ ತೀರ್ಥ ಕ್ಷೇತ್ರದಲ್ಲಿ ಮುನಿಶ್ರೀ ನೇಮಿಸಾಗರ ಮಹಾರಾಜರು (88) ಸಲ್ಲೇಖನ ವ್ರತ ಸ್ವೀಕರಿಸಿದ್ದು, ಕಳೆದ 22 ದಿನಗಳಿಂದ ವ್ರತ ಆಚರಣೆಯಲ್ಲಿದ್ದಾರೆ.

Advertisement

ಮುನಿಶ್ರೀ ನೇಮಿಸಾಗರ ಮಹಾರಾಜರು ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಳ್ಳೊಳ್ಳಿ ಗ್ರಾಮದವರಾಗಿದ್ದಾರೆ. ಕಳೆದ22 ದಿನದಿಂದ ಕೈಗೊಂಡಿರುವ ಸಲ್ಲೇಖನ ವ್ರತ ಸುದೀರ್ಘವಾಗಿದ್ದು, ನಿತ್ಯ ಒಂದು ಬೊಗಸೆ ನೀರು ಅಥವಾ ಹಣ್ಣಿನ ರಸ ಸ್ವೀಕರಿಸುತ್ತಿದ್ದಾರೆ.

ಇದನ್ನೂ ಓದಿ:‘ಬ್ಲ್ಯಾಕ್ ಮೇಲ್ ಸಂಪುಟ’ ‘ಕಾಂಗ್ರೆಸ್‌ ಹಗೆತನ’: ಮತ್ತೆ ಕಾಂಗ್ರೆಸ್- ಬಿಜೆಪಿ ಟ್ವೀಟ್ ವಾರ್

ಆಚಾರ್ಯ ಗುಣಧರನಂದಿ ಮಹಾರಾಜರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುನಿಶ್ರೀ ನೇಮಿಸಾಗರ ಮಹಾರಾಜರು ಕೈಗೊಂಡಿರುವ ಸಲ್ಲೇಖನ ವ್ರತ ಸುದೀರ್ಘವಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಜನರು ಮುನಿಶ್ರೀಗಳ ದರ್ಶನಕ್ಕೆ ಆಗಮಿಸಬಾರದು. ಈ ಪುಣ್ಯ ಕಾರ್ಯವನ್ನು ಭಕ್ತರಿಗೆ ಮುಟ್ಟಿಸಲು ನೇರಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಜೂಮ್ ಆ್ಯಪ್ ಮೂಲಕ ದರ್ಶನ ಪಡೆಯಬಹುದಾಗಿದ್ದು, ಯೂಸರ್ ಐಡಿ-5709887799, ಪಾಸವರ್ಡ್-1008. ಬೆಳಿಗ್ಗೆ ಹಾಗೂ ಸಂಜೆ 7 ರಿಂದ 8 ಗಂಟೆಗೆ ನೇರ ಪ್ರಸಾರವಿರುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next