ಮಹಾರಾಷ್ಟ್ರ: ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ ನಂತರ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸುಮಾರು 300 ಜನರು ಅಸ್ವಸ್ಥರಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಬುಲ್ಧಾನಾದಲ್ಲಿ ನಡೆಯುತ್ತಿದ್ದ ಒಂದು ವಾರದ ಧಾರ್ಮಿಕ ಕಾರ್ಯಕ್ರಮದ ಕೊನೆಯ ದಿನದಂದು ಆಹಾರ ಸೇವಿಸಿದ ನಂತರ ಜನರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಕೂಡಲೇ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಕರೆತಂದರೂ ಅಲ್ಲಿ ರೋಗಿಗಳಿಗೆ ಸಾಕಷ್ಟು ಬೆಡ್ ನ ವ್ಯವಸ್ಥೆ ಇರದೇ ಆಸ್ಪತ್ರೆಯ ಹೊರಭಾಗದಲ್ಲೇ ಮಲಗಿಸಿ ಚಿಕಿತ್ಸೆ ಕೊಡಲಾಯಿತು.
ಆಸ್ಪತ್ರೆಯ ಹೊರಭಾಗದಲ್ಲಿ ರೋಗಿಗಗಳನ್ನು ಸಾಲಾಗಿ ಮಲಗಿಸಿ ಅವರಿಗೆ ಗ್ಲುಕೋಸ್ ನೀಡಲಾಯಿತು ಅದಕ್ಕಾಗಿ ಉದ್ದದ ದಾರವನ್ನು ಕಟ್ಟಿ ಅದಕ್ಕೆ ಗ್ಲುಕೋಸ್ ಬಾಟಲ್ ಗಳನ್ನು ನೇತು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಮುನ್ನೂರು ಜನರಲ್ಲಿ ಮೂವತ್ತು ಮಂದಿಯ ಅರೋಗ್ಯ ಚಿಂತಾಜನಕವಾಗಿದ್ದು ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ, ಆದರೆ ಕೆಲ ರೋಗಿಗಳ ಮಾಹಿತಿ ಪ್ರಕಾರ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾದ ವೇಳೆ ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಕರ್ತವ್ಯದಲ್ಲಿ ಇರಲಿಲ್ಲ ಬಳಿಕ ಖಾಸಗಿ ವೈದ್ಯರನ್ನು ಸ್ಥಳಕ್ಕೆ ಕರೆಸಲಾಯಿತು ಎಂದು ಗ್ರಾಮಸ್ಥರು ದೂರಿದ್ದಾರೆ.
ಸದ್ಯ ಉಳಿದವರ ಅರೋಗ್ಯ ಸುಧಾರಿಸುತ್ತಿದ್ದು ದೇವಸ್ತಾನದಲ್ಲಿ ಭಕ್ತರಿಗೆ ನೀಡಿದ ಆಹಾರವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು ವರದಿ ಇನ್ನಷ್ಟೇ ಬರಬೇಕಾಗಿದೆ ಎಂದಿದ್ದಾರೆ.
ಇದನ್ನೂ ಓದಿ: CT Ravi: ಮುನಿಯಪ್ಪನವರೇ ನಿಮ್ಮ ಅನ್ನಭಾಗ್ಯದ ಅಕ್ಕಿ ಎಲ್ಲಿ? ಸಚಿವ ಸಿ.ಟಿ.ರವಿ ಪ್ರಶ್ನೆ