Advertisement

ಉಪ ಚುನಾವಣೆಯ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ: ಸಲೀಂ ಅಹ್ಮದ್

05:54 PM Oct 05, 2021 | Team Udayavani |

ಹಾವೇರಿ: ಹಾನಗಲ್ಲ, ಸಿಂದಗಿ ಎರಡೂ ಕಡೆ ಕಾಂಗ್ರೆಸ್ ಗೆಲುವು ನಿಶ್ಚಿತ. ಅಭ್ಯರ್ಥಿ ಯಾರೇ ಆದರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.

Advertisement

ನಗರದಲ್ಲಿ ಗೋಷ್ಠಿಯಲ್ಲಿ  ಮಾತಾನಾಡಿದ ಅವರು, ಅ. 7 ರಂದು ಹಾನಗಲ್ಲನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ರಾಜ್ಯ ಉಸ್ತುವಾರಿ ರಣದೀಪ ಸರ್ಜೇವಾಲಾ, ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ, ಮುನಿಯಪ್ಪ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ರಾಜ್ಯದ ಜನರು ಬಿಜೆಪಿ ಸರಕಾರದಿಂದ ಭ್ರಮನಿರಶನಗೊಂಡಿದ್ದಾರೆ. ಎರಡು ಸರಕಾರಗಳು ವಿಫಲವಾಗಿವೆ. ಕೇಂದ್ರ ಸರಕಾರ 7 ವರ್ಷದಿಂದ ಸುಳ್ಳು ಭರವಸೆ ನೀಡಿ ಮೋಸ ಮಾಡಿದ್ದಾರೆ. ಕೇಂದ್ರದವರು ಸ್ವರ್ಗ ತೋರಸಲಿಲ್ಲಾ, ನರಕ ತೋರಸಿದ್ದಾರೆ. ಕೊರೊನಾದಿಂದ ಜನರ ಸಾವನ್ನು ಕೊಡುಗೆಯಾಗಿ ‌ನೀಡಿದೆ. ಈ ಸರಕಾರದ ಅಧಿಕಾರದ ಕುರ್ಚಿಗಾಗಿ ಬಡಿದಾಡಿದೆ. ಮೊದಲ ಅಲೆಯಲ್ಲಿ 2 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. ರಾಜ್ಯಕ್ಕೆ ತರುವ ಫಂಡ್ ತರಲು ಸಂಸದರು,ಸಚಿವರು ವಿಫಲವಾಗಿದ್ದರೆ. 56 ಸಾವಿರ ಕೋಟಿಯಲ್ಲಿ 2560 ಕೋಟಿ ಬಂದಿದೆ. ಜಿಎಸ್ ಟಿಯಲ್ಲಿ ರಾಜ್ಯದ ಪಾಲು ನೀಡಿಲ್ಲ.ಜನಾರ್ಶಿವಾದ ಯಾತ್ರೆ ಬದಲು ಕ್ಷೇಮೆ ಯಾತ್ರೆ ಮಾಡಲಿ ಎಂದರು.

ಈ ಚುನಾವಣೆಯಲ್ಲಿ ಜನರು ನಮ್ಮ ಪರವಾಗಿ ಇದ್ದಾರೆ. ರಾಜ್ಯದ ಜನರು ಯಾತಕ್ಕಾಗಿ ಓಟು ನೀಡಬೇಕೆಂದ ಪ್ರಶ್ನೆ ಮಾಡಿದ್ದಾರೆ. ತೈಲೆ ಏರಿಕೆ ಮಾಡಿಕ್ಕೆ, ಬೆಲೆ ಏರಿಕೆ ‌ಮಾಡಿದ್ದಕ್ಕೆ ಮತ‌ ನೀಡಬೇಕಾ.. ಉದ್ಯೋಗ ಕಳೆದದ್ದಕ್ಕೆ ಓಟ ನೀಡಬೇಕಾ ಎಂದು ತರಾಟೆ ತೆಗೆದುಕೊಂಡರು.

ಯುಪಿಯಲ್ಲಿ ಕೇಂದ್ರ ಮಂತ್ರಿ ನಾಲ್ಕು ರೈತರನ್ನು ಕೊಲೆ ಮಾಡಿದೆ. ರಾಮ ರಾಜ್ಯವನ್ನು ರಾವಣ ರಾಜ್ಯ ‌ಮಾಡಿದ್ದಾರೆ. ಬಿಜೆಪಿಯಲ್ಲಿ ಹಿರಿಯರನ್ನು ಕಸದ  ತೊಟ್ಟಿಗೆ ಹಾಕುವ ಸಂಸ್ಕ್ರತಿಯಾಗಿದೆ.ಕೇಂದ್ರದ ನಾಯಕರು ನಮಗೆ ಕಣ್ಣಿರಿನ ಕೋಡಿ ಹರಿಸುವಂತೆ ಮಾಡಿದ್ದಾರೆ. ಬಿ ಎಸ್ ವೈ ಕಣ್ಣಿರಿನ ಕಥೆ ರಾಜ್ಯ ದ ಜನರಿಗೆ ಗೊತ್ತಾಗಬೇಕಿದೆ ಎಂದರು.

Advertisement

ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ದವಳಗಿರಿ, ಮಾಜಿ ಸಿಎಂ, ಇಂದಿನ ಕ್ಯಾಬಿನೆಟ್, ಕೇಂದ್ರ ಮಧ್ಯ ಬೊಮ್ಮಾಯಿ‌ ತಗಲು ಹಾಕಿಕೊಂಡಿದ್ದಾರೆ ಎಂದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಜನರಿದ್ದಾರೆ. ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬಳಿಕ ಎಲ್ಲ ವೈಮನಸ್ಸು ದೂರವಾಗಲಿದೆ. ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡಲಿದೆ.ಅವರ ಅಭ್ಯರ್ಥಿ ಬಿಜೆಪಿಗೆ ಲಾಭ ತಂದುಕೊಡುವ ಲಾಭವಿದೆ ಎಂದರು

ಇದರ ಬಗ್ಗೆ ನಾ‌ನು ದೇವೆಗೌಡ್ರಯೊಂದಿಗೆ ಮಾತನಾಡಿದ್ದೇ‌ನೆ. ಜೆಡಿಎಸ್ ನವರ ಬಣ್ಣವನ್ನು ಮುಸ್ಲಿಂ ಬಾಂಧವರು‌ ನೋಡಿದ್ದಾರೆ. ಹಾನಗಲ್ಲನಲ್ಲಿ ಜೆಡಿಎಸ್ ಕುತಂತ್ರದ ನಡೆಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next