Advertisement

ಸಾಲಿಗ್ರಾಮ ಪ.ಪಂಚಾಯತ್ ಅಧ್ಯಕ್ಷರಾಗಿ ಸುಲತಾ ಹೆಗ್ಡೆ, ಉಪಾಧ್ಯಕ್ಷರಾಗಿ ಅನುಸೂಯ ಹೇರ್ಳೆ ಆಯ್ಕೆ

03:43 PM Nov 02, 2020 | sudhir |

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ಆಡಳಿತ ಮಂಡಳಿಗೆ ನ.2ರಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಿಜೆಪಿಯ ದೊಡ್ಮನೆಬೆಟ್ಟು ವಾರ್ಡ್ ಸದಸ್ಯೆ ಸುಲತಾ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಿಜೆಪಿಯ ವಿಷ್ಣುಮೂರ್ತಿ ವಾರ್ಡ್ ಸದಸ್ಯೆ ಅನುಸೂಯ ಹೇರ್ಳೆ ಆಯ್ಕೆಯಾಗಿದ್ದಾರೆ.

Advertisement

ಅಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆ ನಡೆದಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಝಹಿರಾ ಸ್ಪರ್ಧೆ ನಡೆಸಿದ್ದು ಅನುಸೂಯ ಹೇರ್ಳೆ ಪರವಾಗಿ ಸಂಸದರು, ಶಾಸಕರು ಸೇರಿದಂತೆ ಪಕ್ಷದ 12ಮತಗಳು, ಝಹಿರಾ ಪರವಾಗಿ ಕಾಂಗ್ರೆಸ್‌ನ 5ಮತಗಳು ಚಲಾವಣೆಗೊಂಡಿದೆ. ಪಕ್ಷೇತರ ಸದಸ್ಯೆ ರತ್ನಾ ನಾಗರಾಜ್ ಗಾಣಿಗ ಈ ಪ್ರಕ್ರೀಯೆಯಲ್ಲಿ ತಟಸ್ಥತೆ ಕಾಯ್ದುಕೊಂಡರು.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಇದನ್ನೂ ಓದಿ:ಕಳೆದ 2 ವರ್ಷದಿಂದ ನೆನಗುದಿಗೆ ಬಿದ್ದಿದ್ದ ಮಂಡ್ಯ ನಗರಸಭೆ ಆಡಳಿತ ಜೆಡಿಎಸ್ ತೆಕ್ಕೆಗೆ

Advertisement

Udayavani is now on Telegram. Click here to join our channel and stay updated with the latest news.

Next