Advertisement
ಸ್ಥಳೀಯರಿಗೆ ಸಮಸ್ಯೆಹಳೆಕೋಟೆ ಮೈದಾನವು ಜನ ನಿಬಿಡ ಪ್ರದೇಶ ಹಾಗೂ ಕ್ರೀಡಾಂಗಣವಾಗಿದ್ದು ಸುತ್ತ 100ಕ್ಕೂ ಹೆಚ್ಚು ಮನೆಗಳಿದೆ ಹಾಗೂ ಎರಡು ಕಲ್ಯಾಣ ಮಂಟಪ, ಯಕ್ಷಗಾನ ಕಲಾಕೇಂದ್ರ ಕೂಡ ಇದೆ. ಇಲ್ಲಿ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾಟಗಳು ಸಂಘಟಿತಗೊಳ್ಳುತ್ತದೆ ಹಾಗೂ ಪ್ರತಿ ನಿತ್ಯ ಕ್ರೀಡಾಪಟುಗಳು ಅಭ್ಯಾಸ ನಡೆಸುತ್ತಾರೆ. ಹೀಗಾಗಿ ಇಲ್ಲಿ ಕಸ ವಿಲೇವಾರಿ ಮಾಡಲು ಸ್ಥಳೀಯರು ಮೊದಲೇ ವಿರೋಧ ವ್ಯಕ್ತಪಡಿಸಿದ್ದರು. ಆಗ ತಾತ್ಕಾಲಿಕ ಡಂಪಿಂಗ್‌ಯಾರ್ಡ್ ಎಂದು ಮನವೊಲಿಸಲಾಗಿತ್ತು. ಆದರೆ ಒಂದೆರಡು ವರ್ಷವಾದರೂ ಬೇರೆ ವ್ಯವಸ್ಥೆಯಾಗದಿರುವುದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಡಂಪಿಂಗ್‌ಯಾರ್ಡ್‌ನ ಐದಾರು ಅಡಿ ದೂರದಲ್ಲೇ ಕುಡಿಯುವ ನೀರು ಸರಬರಾಜು ಮಾಡುವ ಸರಕಾರಿ ಬಾವಿ ಇದ್ದು ಸ್ಥಳೀಯ ಪಾರಂಪಳ್ಳಿ ವಾರ್ಡ್‌ನ 650 ಮನೆಗಳಿಗೆ ಇಲ್ಲಿನ ನೀರು ಸರಬರಾಜು ಆಗುತ್ತದೆ. ಈ ಬಾರಿ ಮಳೆಗಾಲದಲ್ಲಿ ಡಂಪಿಂಗ್‌ಯಾರ್ಡ್‌ನಲ್ಲಿ ನಿಂತ ಕೊಳಚೆ ನೀರು ಈ ಬಾವಿ ಸೇರುವ ಎಲ್ಲಾ ಸಾಧ್ಯತೆ ಇದೆ. ಶಾಶ್ವತ ಪರಿಹಾರಕ್ಕೆ ಹಿನ್ನಡೆ
ಪ.ಪಂ. ವತಿಯಿಂದ ಈ ಹಿಂದೆ ಉಳೂ¤ರಿನಲ್ಲಿ ಜಾಗವೊಂದನ್ನು ಖರೀದಿಸಿ ಡಂಪಿಂಗ್‌ಯಾರ್ಡ್ ನಿರ್ಮಿಸಲು ಪ್ರಯತ್ನಿಸಲಾಗಿತ್ತು. ಆದರೆ ಅಲ್ಲಿನ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅದು ಸಾಧ್ಯವಾಗಲಿಲ್ಲ. ಅನಂತರ ಹಳೆಕೋಟೆ ಮೈದಾನದಲ್ಲಿ ಕಸವನ್ನು ರಾಶಿ ಹಾಕಿ ಅಲ್ಲಿಂದ ಉಡುಪಿಯ ಡಂಪಿಂಗ್‌ಯಾರ್ಡ್‌ಗೆ ಸಾಗಿಸಲಾಗುತಿತ್ತು. ಇದೀಗ ಆದಷ್ಟು ಶೀಘ್ರ ಈ ತಾತ್ಕಾಲಿಕ ಡಂಪಿಂಗ್‌ಯಾರ್ಡ್ ಸ್ಥಳಾಂತರಿಸಬೇಕು ಎನ್ನುವುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.
Related Articles
ಹಳೆಕೋಟೆಯ ಜನಬಿಡಿದ ಹಾಗೂ ಕ್ರೀಡಾಚಟುವಟಿಕೆಗಳು ನಡೆಯುವ ಸ್ಥಳವನ್ನು ಡಂಪಿಂಗ್‌ಯಾರ್ಡ್‌ಗೆ ಆಯ್ಕೆ ಮಾಡಿಕೊಂಡಿದ್ದು ತೀರಾ ಅವೈಜ್ಞಾನಿಕ. ಇದೀಗ ಕುಡಿಯುವ ನೀರಿನ ಬಾವಿಯೊಂದನ್ನು ಇದರ ಪಕ್ಕದಲ್ಲೇ ನಿರ್ಮಿಸಿದ್ದು ಈ ಬಾರಿ ಡಂಪಿಂಗ್‌ಯಾರ್ಡ್‌ನ ಕಲುಷಿತ ನೀರು ಬಾವಿ ಸೇರುವುದು ಖಂಡಿತ ಹಾಗೂ ಸ್ಥಳೀಯ ಪ್ರದೇಶದಲ್ಲೂ ದುರ್ವಾಸನೆ ಹರಡುತ್ತಿದೆ.
– ರಾಮಚಂದ್ರ ಐತಾಳ ಗುಂಡ್ಮಿ, ಸ್ಥಳೀಯ ನಿವಾಸಿ
Advertisement
ಸೂಕ್ತ ಸ್ಥಳವಿಲ್ಲ ಸ್ಥಳಾವಕಾಶವಿಲ್ಲದ ಕಾರಣ ಈ ಹಿಂದೆ ಉಳೂ¤ರಿನಲ್ಲಿ ಜಾಗ ಖರೀದಿಸಿ ಡಂಪಿಂಗ್‌ಯಾರ್ಡ್ ನಿರ್ಮಿಸಲು ಪ್ರಯತ್ನಿಸಲಾಗಿತ್ತು. ಆದರೆ ವಿರೋಧ ವ್ಯಕ್ತವಾದ್ದರಿಂದ ತಾತ್ಕಾಲಿಕವಾಗಿ ಕಸ ರಾಶಿ ಹಾಕಲು ಹಳೇಕೋಟೆ ಮೈದಾನ ಬಳಸಿಕೊಂಡು ಅಲ್ಲಿಂದ ಉಡುಪಿ ಡಂಪಿಂಗ್‌ಯಾರ್ಡ್ ಗೆ ರವಾನಿಸಲಾಗುತ್ತಿದೆ. ಈಗ ಇದದರಿಂದ ಕೂಡ ಸಮಸ್ಯೆ ಯಾಗುತ್ತಿದ್ದು ಕಸವನ್ನು ಶೀಘ್ರ ವಿಲೇವಾರಿ ಮಾಡಲಾಗುತ್ತಿದೆ.– ಶ್ರೀಪಾದ್ ಪುರೋಹಿತ್,
ಮುಖ್ಯಾಧಿಕಾರಿಗಳು,ಸಾಲಿಗ್ರಾಮ ಪ.ಪಂ.