Advertisement

ಥಾಣೆ : ಹಾಡುಹಗಲಲ್ಲೇ ಸೇಲ್ಸ್‌ ಮ್ಯಾನ್‌ನನ್ನು ಇರಿದು ಕೊಲೆ

05:13 PM Aug 27, 2018 | Team Udayavani |

ಥಾಣೆ, ಮಹಾರಾಷ್ಟ್ರ : ಥಾಣೆ ಜಿಲ್ಲೆಯ ಉಲ್ಲಾಸ್‌ನಗರದಲ್ಲಿ ಮೂವರು ದುಷ್ಕರ್ಮಿಗಳು 29 ವರ್ಷ ಪ್ರಾಯದ ಸೇಲ್ಸ್‌ ಮ್ಯಾನ್‌ ಒಬ್ಬರನ್ನು  ಹಾಡುಹಗಲಲ್ಲೇ  ಇರಿದು ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಈ ಘಟನೆ ಆಜಾದ್‌ ನಗರ ಪ್ರದೇಶದಲ್ಲಿ ನಡೆದಿದೆ. ಚಂದ್ರಕಾಂತ್‌ ಮೋರೆ ಅವರು ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಾ ನಿಂತಿದ್ದ ವೇಳೆ ಅಲ್ಲಿಗೆ ಬಂದ ಮೂವರು ಚೂರಿಯಿಂದ ಮೋರೆ ಅವರನ್ನು  ಇರಿದು ಕೊಂದರು.

ಯಾವುದೋ ಹಳೇ ವೈಷಮ್ಯವೇ ಈ ಕೊಲೆಗೆ ಕಾರಣವಿರಬೇಕೆಂದು ಶಂಕಿಸಿರುವ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next