Advertisement

ರಾಯಲ್ ಎನ್ ಫೀಲ್ಡ್ ಮಾರಾಟದಲ್ಲಿ ಭಾರೀ ಕುಸಿತ

09:55 AM Oct 22, 2019 | Hari Prasad |

ನವದೆಹಲಿ: ಕಳೆದ ಹಲವು ತಿಂಗಳುಗಳಿಂದ ದ್ವಿಚಕ್ರ ವಾಹನ ಉದ್ಯಮ ಕುಸಿತ ಕಾಣುತ್ತಿದ್ದು, ವಾಹನ ತಯಾರಕರು ಹಬ್ಬದ ವೇಳೆಯಲ್ಲಿ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ವ್ಯಾಪಾರ ಮಟ್ಟ ಕುಸಿದ ಹಲವಾರು ಹೆಸರಾಂತ ಕಂಪೆನಿಗಳ ಪಟ್ಟಿಗೆ ದೇಶಿಯ ಮಾರುಕಟ್ಟೆಯ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ರಾಯಲ್‌ ಎನ್ಫೀಲ್ಡ್ ಸಹ ಸೇರಿದ್ದು, ಕಳೆದ ತಿಂಗಳಿನ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ.

Advertisement

ಕಳೆದ ಕೆಲವು ತಿಂಗಳುಗಳಿಂದ ಮಾರಾಟದಲ್ಲಿ ಗಮನಾರ್ಹವಾದ ಕುಸಿತ ಕಾಣುತ್ತಿರುವ ರಾಯಲ್‌ ಎನ್ಫೀಲ್ಡ್ ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಒಟ್ಟು 54,858 ಯುನಿಟ್‌ ಗಳು ಮಾರಾಟವಾಗಿದ್ದು, ರಾಯಲ್‌ ಎನ್ಫೀಲ್ಡ್ ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ 70,065 ಯುನಿಟ್‌ ಗಳು ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟದ ಮಟ್ಟ ಶೇ.21.70 ರಷ್ಟು ಕುಸಿತ ಕಂಡಿದೆ.

ರಾಯಲ್‌ ಎನ್ಫೀಲ್ಡ್‌ ಶ್ರೇಣಿಯ ಪ್ರಮುಖ ಮಾದರಿಯ ಬೈಕ್‌ ಗಳ ಮಾರಾಟದಲ್ಲಿ ಅಧಿಕ ಮಟ್ಟದ ಕುಸಿತ ಕಂಡು ಬಂದರೂ, ರಫ್ತು ಗಣನೀಯವಾಗಿ ಹೆಚ್ಚಾಗಿದೆ. 2018ರ ಸೆಪ್ಟೆಂಬರ್‌ ತಿಂಗಳಲ್ಲಿ 1,597 ಯುನಿಟ್‌ ಗಳು ರಫ್ತಾಗಿದ್ದು, ಪ್ರಸಕ್ತ ಸಾಲಿನ ಸೆಪ್ಟೆಂಬರ್‌ ತಿಂಗಳಲ್ಲಿ 4,642 ಯುನಿಟ್‌ ಗಳಷ್ಟು  ಮಾರಾಟವಾಗಿದ್ದು, ಶೇ.191 ರಷ್ಟು ಹೆಚ್ಚಳವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next