Advertisement

ಸಂಪನ್ಮೂಲ ಸಂಗ್ರಹಕ್ಕೆ”ಮಾರಾಟ’ನಿರ್ಧಾರ; ಆರ್ಥಿಕ ಸಂಕಟ ನಿವಾರಣೆಗೆ ಹೊಸ ತಂತ್ರ

01:28 AM Jun 26, 2020 | Sriram |

ಬೆಂಗಳೂರು: ರಾಜ್ಯ ಸರಕಾರವು ಸಂಪನ್ಮೂಲ ಕ್ರೋಡೀಕರಣಕ್ಕೆ ಮತ್ತೂಂದು ಮಾರ್ಗ ಹುಡುಕಿಕೊಂಡಿದ್ದು, ಖಾಸಗಿ ಸಂಘ ಸಂಸ್ಥೆ ಗಳಿಗೆ ಗುತ್ತಿಗೆ ಕೊಟ್ಟಿರುವ ಸರಕಾರಿ ಭೂಮಿ ಯನ್ನು ಅದೇ ಸಂಸ್ಥೆಗಳಿಗೆ ಮಾರಾಟ ಮಾಡಲು ತೀರ್ಮಾನಿಸಿದೆ.

Advertisement

ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಬೇಸಾಯ, ಕೈಗಾರಿಕೆ, ಧಾರ್ಮಿಕ, ಶಿಕ್ಷಣ ಸಂಸ್ಥೆಗಳಿಗೆ ಗುತ್ತಿಗೆಗೆ ಕೊಟ್ಟಿರುವ ಭೂಮಿಯನ್ನು ಖರೀದಿ ನಡೆಸಲು ಅವುಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಹಾಲಿ ಗುತ್ತಿಗೆ ಪಡೆದಿರುವ ಖಾಸಗಿ ಸಂಘ-ಸಂಸ್ಥೆಗಳಿಗೆ ಮಾರುಕಟ್ಟೆ ದರ ದಲ್ಲಿ ಭೂಮಿ ಖರೀದಿಗೆ ಇದರಿಂದ ಅವ ಕಾಶ ಸಿಗಲಿದೆ. ಗುತ್ತಿಗೆ ನವೀಕರಣ ಇಲ್ಲ, ಸಂಘ-ಸಂಸ್ಥೆಗಳು ಖರೀದಿ ಮಾಡುವು ದಿಲ್ಲ ಎಂದು ಹೇಳಿದರೆ ಸರಕಾರ ಭೂಮಿ ವಾಪಸ್‌ ಪಡೆಯಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧು ಸ್ವಾಮಿ ಸಂಪುಟ ಸಭೆ ಬಳಿಕ ಹೇಳಿದರು.

ಕೊರೊನಾ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿ ತೀರ್ಮಾನಕ್ಕೂ ಸಂಪುಟ ಒಪ್ಪಿಗೆ ನೀಡಿದೆ.

9.74 ಲಕ್ಷ ಮನೆ ನಿರ್ಮಾಣ
ರಾಜ್ಯದಲ್ಲಿ 8 ವರ್ಷಗಳಿಂದ ವಿವಿಧ ವಸತಿ ಯೋಜನೆಗಳಡಿ ಬಾಕಿ ಇರುವ 9.74 ಲಕ್ಷ ಮನೆ ನಿರ್ಮಾಣಕ್ಕೆ 10,194 ಕೋ.ರೂ. ಬಿಡುಗಡೆಗೆ ಸಂಪುಟ ಸಭೆ ಒಪ್ಪಿದೆ.

Advertisement

2012ರಿಂದ ಬಾಕಿ ಇರುವ ಬಸವ, ಬಿ.ಆರ್‌. ಅಂಬೇಡ್ಕರ್‌, ವಾಜಪೇಯಿ, ದೇವರಾಜ ಅರಸು ವಸತಿ ಯೋಜನೆಯ ಮನೆಗಳ ನಿರ್ಮಾಣ ಕಾಮಗಾರಿಗೆ ಇದರಿಂದ ಚಾಲನೆ ಸಿಗಲಿದೆ. ಆದಿವಾಸಿ ವಸತಿ ಹೊರತುಪಡಿಸಿ ಈ ಯೋಜನೆ ಪೂರ್ಣ ಗೊಳ್ಳುವವರೆಗೂ ಇತರ ಯಾವುದೇ ವಸತಿ ಯೋಜನೆ ಕೈಗೆತ್ತಿ ಕೊಳ್ಳುವುದಿಲ್ಲ. ವಿವಿಧ ವಸತಿ ಯೋಜನೆ ಗಳಡಿ ಇದುವರೆಗೆ 18 ಲಕ್ಷ ಮನೆಗಳ ನಿರ್ಮಾಣ ಆಗ ಬೇಕಾಗಿತ್ತು. ಇನ್ನೂ 9.74 ಲಕ್ಷ ಮನೆಗಳನ್ನು ನಿರ್ಮಿಸಲು ಬಾಕಿ ಇದೆ. ಹೀಗಾಗಿ ಒಂದೇ ಕಂತಿನಲ್ಲಿ ಎಲ್ಲ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next