Advertisement
ಸೇಲ್ಸ್ ಕೆರಿಯರ್ ಭವಿಷ್ಯತಾಂತ್ರಿಕ ಅಥವಾ ಆಡಳಿತ ವರ್ಗಗಳಿಗಿಂತ ಹೆಚ್ಚು ಹಣ ತಂದುಕೊಡುವುದು ಸೇಲ್ಸ್ ವಿಭಾಗ. ಕಂಪನಿಯ ಆಯುಷ್ಯ, ಉಳಿಗಾಲಗಳು ಸೇಲ್ಸ್ ಅನ್ನು ಅವಲಂಬಿಸಿರುತ್ತವಾದ್ದರಿಂದ ಸೇಲ್ಸ್‌ನಲ್ಲಿ ಯಶಸ್ಸು ಪಡೆದ ಕೆಲಸಗಾರರಿಗೆ ಇಲ್ಲಿ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಜೊತೆಗೆ, ಅವರು ತಮ್ಮಲ್ಲಿಯೇ ಸೇವೆ ಮುಂದುವರಿಸಲಿ ಎಂಬ ಆಶಯದಿಂದ ಕಂಪನಿಗಳು ಇಂತಹ ಯಶಸ್ವಿ ಸೇಲ್ಸ್ ತಂಡಗಳಿಗೆ ಹೆಚ್ಚಿನ ಸಂಬಳ, ಭತ್ಯೆ, ಸಂಸ್ಥೆಯಿಂದ ಪ್ರಯಾಣ ವ್ಯವಸ್ಥೆ ಮುಂತಾದ ಸವಲತ್ತುಗಳನ್ನು ನೀಡುತ್ತವೆ. ಈ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಪರಿಣತಿ ಸಾಧಿಸಿದಂತೆಲ್ಲ ಗಳಿಕೆಯೂ ಹೆಚ್ಚುತ್ತ ಹೋಗುವುದು. ಈ ಕಾರಣದಿಂದಾಗಿಯೇ ಅನೇಕರು ಸೇಲ್ಸ್ ಕರಿಯರ್‌ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ದೇಶಿ ಕಂಪನಿ ಇರಲಿ, ವಿದೇಶಿ ಕಂಪನಿಯೇ ಇರಲಿ ಅದರ ಆಡಳಿತ ವರ್ಗವನ್ನು ಗಮನಿಸಿದರೆ ಉನ್ನತ ಸ್ಥಾನ ಅಲಂಕರಿಸಿರುವ ಬಹುತೇಕರು ಸೇಲ್ಸ್ ಹಿನ್ನೆಲೆಯಿಂದ ಬಂದಿರುವುದು ತಿಳಿಯುತ್ತದೆ. ಬಹುತೇಕ ಕಂಪೆನಿಗಳ ಚೀಫ್ ಎಕ್ಸಿಕ್ಯುಟಿವ್‌ಗಳು ಅಥವಾ ಸೀನಿಯರ್ ಮ್ಯಾನೇಜರ್‌ಗಳು ಸೇಲ್ಸ್‌ನಿಂದಲೇ ತಮ್ಮ ವೃತ್ತಿಜೀವನವನ್ನು ಆರಂಭಿಸಿರುತ್ತಾರೆ ಅಥವಾ ಅಲ್ಪ ಕಾಲವಾದರೂ ಅದರಲ್ಲಿ ಅನುಭವ ಪಡೆದಿರುತ್ತಾರೆ. ಇದರಿಂದ ಅವರಿಗೆ ತಳ ಮಟ್ಟದಿಂದಲೇ ಕಂಪನಿಯ ಕಾರ್ಯ ವಿಧಾನ, ಮಾರುಕಟ್ಟೆಯ ಸ್ಥಿತಿಗತಿಗಳ ನೈಜ ಪರಿಚಯ ಸಿಕ್ಕಿರುತ್ತದೆ. ಹೀಗಾಗಿ ಆತ ಕಂಪನಿಯನ್ನು ಮುನ್ನಡೆಸಬಲ್ಲ ಸಾಮರ್ಥ್ಯವನ್ನು ಪಡೆದಿರುತ್ತಾನೆ. ಹೀಗಾಗಿ ಅಂಥವರು ವೃತ್ತಿಜೀವನದಲ್ಲಿ ಬಹಳ ಬೇಗನೆ ಮೇಲಕ್ಕೇರುತ್ತಾರೆ. ಸೇಲ್ಸ್ ಕರಿಯರ್‌ಗಾಗಿ ವಿದ್ಯಾಭ್ಯಾಸ
ಸೇಲ್ಸ್ ಮ್ಯಾನೇಜರ್‌ಗಳು ಬಿಝಿನೆಸ್ ಅಡ್ಮಿನಿಸ್ಟ್ರೇಷನ್, ಸ್ಟಾಟಿಸ್ಟಿಕ್ಸ್, ಗಣಿತ ವಿಷಯಗಳಲ್ಲಿ ಪದವಿ ಪಡೆದಿರುತ್ತಾರೆ. ಸಾಮಾನ್ಯವಾಗಿ ಬ್ಯಾಚುಲರ್ ಡಿಗ್ರಿ ಇದ್ದರೆ ಸಾಕಾಗುತ್ತದಾದರೂ ಕೆಲ ಸಂಸ್ಥೆಗಳು ಉದ್ಯೋಗಾಕಾಂಕ್ಷಿಗಳಿಂದ ಬಿಝಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಮಾಸ್ಟರ್ ಪದವಿಯನ್ನು ಅಪೇಕ್ಷಿಸುತ್ತವೆ. ಕಾಮರ್ಸ್ ಹಿನ್ನೆಲೆ ಇಲ್ಲದವರು/ ಬಿ.ಇ- ಬಿ.ಟೆಕ್ ಪದವಿ ಪಡೆದವರು ಎಂ.ಬಿ.ಎ ಓದುವುದರ ಮೂಲಕ ಸೇಲ್ಸ್ ಕ್ಷೇತ್ರವನ್ನು ಪ್ರವೇಶಿಸಬಹುದು. ಇದಲ್ಲದೆ ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದವರಿಗೂ ಸೇಲ್ಸ್ ಕ್ಷೇತ್ರದಲ್ಲಿ ಅನೇಕ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸುವ ಅವಕಾಶವಿದೆ.
Related Articles
ಇಂದು ಬಹುತೇಕ ಕಂಪನಿಗಳು ತಮ್ಮದೇ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತವೆ. 1ರಿಂದ 3 ತಿಂಗಳವರೆಗಿನ ಈ ಅವಧಿಯಲ್ಲಿ ಸ್ಟೈಪೆಂಡ್ ಕೊಡುವ ಕಂಪೆನಿಗಳೂ ಉಂಟು. ದೇಶದಲ್ಲಿ ಅತ್ಯಧಿಕ ಮಾರಾಟ ಜಾಲ ಹೊಂದಿರುವ ಮಾರುತಿ ಸುಜುಕಿಯ ಟ್ರೇನಿಂಗ್ ಭಾಗದ ರಾಷ್ಟ್ರೀಯ ಮುಖ್ಯಸ್ಥರಾದ ಅಜಿತ್ ಸಿಂಗ್ ಹೇಳುವಂತೆ ಅವರ ಉದ್ಯೋಗಿಗಳಲ್ಲಿ ಶೇ. 32ರಷ್ಟು ಸಿಬ್ಬಂದಿ ವರ್ಗ ಸೇಲ್ಸ್ ಡಿಪಾರ್ಟ್‌ಮೆಂಟಿನದು. ಅಭ್ಯರ್ಥಿಗಳು ಆಯ್ಕೆಯಾದ ಬಳಿಕ 3 ತಿಂಗಳ ಸ್ಟೈಪೆಂಡ್ ಸಹಿತ ತರಬೇತಿ ನೀಡಲಾಗುತ್ತದೆ. ಅನಂತರ ಸೇಲ್ಸ್ ಸಹಾಯಕರಾಗಿ ಉದ್ಯೋಗಾರಂಭ. ಇಲ್ಲಿ ಸಂಬಳಕ್ಕಿಂತ ಭತ್ಯೆಯೇ ಹೆಚ್ಚು. ಹಂತ ಹಂತವಾಗಿ ಬೆಳೆದು ಅವರು ಕಂಪೆನಿಯ ಸೇಲ್ಸ್ ಮ್ಯಾನೇಜರ್ ಕೂಡ ಆಗಬಹುದು.
ಮಾರುತಿಯ ಟ್ರೇನಿಂಗ್ ಪಾಟ್ನರ್ NTTFನ ಪ್ರಶಾಂತ್ (ಸಂಪರ್ಕ: 9535553168) ಹೇಳುತ್ತಾರೆ.
ಕೋಟ್- ಸೇಲ್ಸ್ ಒಂದು ಕಲೆ. ಅದನ್ನು ಬೆಳೆಸಿಕೊಂಡರೆ ಅಭ್ಯರ್ಥಿ ಬಹಳ ಯಶಸ್ಸು ಕಾಣುತ್ತಾನೆ. ತರಬೇತಿ ನೀಡಲು ಸಂಸ್ಥೆ ಸದಾ ಸಿದ್ಧ. ಇಂದು ಸೇಲ್ಸ್ ಕ್ಷೇತ್ರ ವ್ಯಾಪಕವಾಗಿ ಬೆಳವಣಿಗೆ ಕಾಣುತ್ತಿದೆ. ಯುವಜನರು ಸೇಲ್ಸ್ ಕ್ಷೇತ್ರಕ್ಕೆ ಧುಮಕಲು ಇದು ಸಕಾಲ.
ಹೆಚ್ಚಿನ ಮಾಹಿತಿಗೆ: www.marutisuzuki.com/corporate/careers/training-academyNTTF
Advertisement
– ರಘು