Advertisement

ಮೂರು ಮಕ್ಕಳ ಹಸಿವು ನೀಗಿಸಲು ತನ್ನ ತಲೆಗೂದಲನ್ನೇ ಮಾರಾಟ ಮಾಡಿದ ‘ಮಹಾತಾಯಿ’!

10:07 AM Jan 12, 2020 | Hari Prasad |

ಸೇಲಂ: ಸಾಲದ ಸುಳಿ ಯಲ್ಲಿ ಸಿಲುಕಿರುವ 31 ವರ್ಷದ ಮಹಿಳೆಯೊಬ್ಬರು ತನ್ನ ಮಕ್ಕಳ ಹೊಟ್ಟೆ ತುಂಬಿಸಲು ತನ್ನ ತಲೆಗೂದಲನ್ನೇ ಮಾರಾಟ ಮಾಡಿದ್ದಾರೆ. ಆಹಾರ ತಂದು ಉಳಿದ ಹಣದಲ್ಲಿ ಕೀಟನಾಶಕ ಕೊಂಡು, ಅದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲೂ ಪ್ರಯತ್ನಿಸಿದ್ದಾರೆ. ಈ ಘಟನೆ ತಮಿಳುನಾಡಿನ ಪೊನ್ನಂಪೇಟೆಯಲ್ಲಿ ನಡೆದಿದೆ.

Advertisement

ಮಹಿಳೆ ಪ್ರೇಮಾ (31)ರ ಪತಿ ಸೆಲ್ವಂ ಸಾಲ ಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂವರು ಮಕ್ಕಳಿಗೆ ಆಹಾರ ಒದಗಿಸಲು ಕಂಡಕಂಡವರ ಬಳಿ ಪ್ರೇಮಾ ಹಣಕ್ಕಾಗಿ ಅಂಗಲಾಚುತ್ತಿದ್ದರು. ಆದರೆ ಶುಕ್ರವಾರವಾದ ಕಾರಣ ಎಲ್ಲರೂ ಹಣ ನೀಡಲು ನಿರಾಕರಿಸಿದರು.

ಕೊನೆಗೆ, ಕೂದಲು ಮಾರುವವರೊಬ್ಬರು ತಲೆ ಬೋಳಿಸಿ ಕೂದಲು ನೀಡಿದರೆ 150 ರೂ. ನೀಡುವುದಾಗಿ ಹೇಳಿದ್ದರು. ಕೂಡಲೇ ಪ್ರೇಮಾ ತಮ್ಮ ಕೂದಲು ಬೋಳಿಸಿಕೊಂಡು, ಅದರ ಹಣದಿಂದ ಮಕ್ಕಳ ಹಸಿವನ್ನು ನೀಗಿಸಿದ್ದಾರೆ. ಅನಂತರ ಆತ್ಮಹತ್ಯೆಗೆ ಯತ್ನಿಸಿದ ಆಕೆಯನ್ನು ಸ್ಥಳೀಯರು ಕಾಪಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next