Advertisement

Hamas: ಇಸ್ರೇಲ್‌ನಿಂದ ಹಮಾಸ್‌ನ ನಂ.2 ನಾಯಕ ಸಲೇಹ್‌ ಅರೋರಿ ಹತ್ಯೆ

12:08 AM Jan 04, 2024 | Team Udayavani |

ಬೇರೂತ್‌: ಹಮಾಸ್‌ ಉಗ್ರ­ರನ್ನು ಮಟ್ಟ ಹಾಕಲೇಬೇಕು ಎಂದು ತೀರ್ಮಾನಿಸಿರುವ ಇಸ್ರೇಲ್‌ ಸೇನಾ ಪಡೆ ಈಗ ಗಾಜಾದಾಚೆಗೂ ಹೆಜ್ಜೆಯಿಟ್ಟಿದ್ದು, ಲೆಬನಾನ್‌ನಲ್ಲಿ ಕೂಡ ಕಾರ್ಯಾಚರಣೆ ಶುರು ಮಾಡಿದೆ. ಲೆಬನಾನ್‌ ರಾಜಧಾನಿ ಬೇರೂತ್‌ನಲ್ಲಿ ಇಸ್ರೇಲ್‌ ಸೇನೆ ಮಂಗಳವಾರ ರಾತ್ರಿ ವೈಮಾನಿಕ ದಾಳಿ ನಡೆಸಿ, ಹಮಾಸ್‌ ಉಗ್ರ ಸಂಘಟನೆಯ ನಂ.2 ನಾಯಕ ಸಲೇಹ್‌ ಅರೋರಿಯನ್ನು ಹತ್ಯೆಗೈದಿದೆ.

Advertisement

ಅ.7ರಂದು ಇಸ್ರೇಲ್‌-ಹಮಾಸ್‌ ಯುದ್ಧ ಆರಂಭವಾದ ಬಳಿಕ ಹತರಾದ ಹಮಾಸ್‌ ಸಂಘಟನೆಯ ಅತ್ಯುನ್ನತ ನಾಯಕರಲ್ಲಿ ಈತನೂ ಒಬ್ಬ. ಘಾತಕ ಕಾರ್ಯಾಚರಣೆ ನಡೆಸುವ ಮಿಲಿಟರಿ ಘಟಕ ಸ್ಥಾಪನೆಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ ಎಂದು ಹೇಳಲಾಗುತ್ತಿದೆ. ಈ ಹಿಂದೆಯೇ ಉಗ್ರ ಅರೋರಿಯ ಬಂಧಿಸಲು ನೆರವಾದವರಿಗೆ ಇಸ್ರೇಲ್‌ ಮತ್ತು ಅಮೆರಿಕ ಸರ್ಕಾರಗಳು 5 ಮಿಲಿಯನ್‌ ಡಾಲರ್‌ ಬಹು­ಮಾನ­­ವನ್ನೂ ಪ್ರಕಟಿಸಿ­ದ್ದವು.  ಮಂಗಳವಾರ ರಾತ್ರಿ ಬೇರೂತ್‌ ಸಮೀಪದ ಶಿಟೆ ಎಂಬಲ್ಲಿರುವ ವಸತಿ ಸಮುಚ್ಚಯದಲ್ಲಿ ಅರೋರಿ ಇದ್ದಾನೆ ಎಂಬ ಸುಳಿವಿನ ಮೇರೆಗೆ ಇಸ್ರೇಲ್‌ ದಾಳಿ ನಡೆಸಿತ್ತು.

ಮಧ್ಯಪ್ರಾಚ್ಯಕ್ಕೂ ವಿಸ್ತರಿಸಲಿದೆಯೇ ಸಂಘರ್ಷ?: ಅರೋರಿ ಸಾವಿನ ಬೆನ್ನಲ್ಲೇ ಇಸ್ರೇಲ್‌-ಹಮಾಸ್‌ ಸಂಘರ್ಷ ಮಧ್ಯ­ಪ್ರಾಚ್ಯವನ್ನು ಮೀರಿ ವಿಸ್ತರಿಸಲಿದೆ ಎಂಬ ಆತಂಕ ಈಗ ವೇದ್ಯವಾಗತೊಡಗಿದೆ. ಲೆಬನಾನ್‌ ಮೂಲದ ಹೆಜ್ಬುಲ್ಲಾ, ಹಮಾಸ್‌ ಮತ್ತು ಇತರೆ ಉಗ್ರ ಸಂಘಟನೆಗಳು ಕ್ರುದ್ಧಗೊಂಡಿದ್ದು, ಇಸ್ರೇಲ್‌ ವಿರುದ್ಧ ಪ್ರತೀಕಾರದ ಶಪಥ ಮಾಡಿವೆ. ಮತ್ತೂಂದೆಡೆ, “ನಾವು ಎಲ್ಲದಕ್ಕೂ ಸಿದ್ಧ’ ಎಂದು ಇಸ್ರೇಲ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next