ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಪ್ರೋತ್ಸಾಹಿಸುವ ಹಾಗೂ ಭಾರತದ ಸಮೃದ್ಧ ಪರಂಪರೆಯನ್ನು ಸಾರುವ ವಸ್ತುಪ್ರದರ್ಶನವೊಂದು ನಗರದಲ್ಲಿ ನಡೆಯುತ್ತಿದೆ. ಭಾರತ ಸರ್ಕಾರ ಸ್ವಾಮ್ಯದ ಜವಳಿ ಇಲಾಖೆಯ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕಾರ್ಪೊàರೇಷನ್ ಆಫ್ ಇಂಡಿಯಾ(ಸಿಸಿಐಸಿಐ)ವು ಉತ್ತರಪ್ರದೇಶದ ಸಹಾರನ್‌ಪುರದ ಪ್ರತ್ಯೇಕ ಪೀಠೊಪಕರಣಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಂಡಿದೆ. ಅಷ್ಟೇ ಅಲ್ಲದೆ, ದಿಲ್ಲಿ, ಜೋಧ್‌ಪುರ್‌ನ ಪೀಠೊಪಕರಣಗಳೂ ಇಲ್ಲಿವೆ. ಕಂಚು, ಹಿತ್ತಾಳೆ ಲೋಹದ ಕರಕುಶಲ ಕಲಾಕೃತಿಗಳು, ಬಸ್ತರ್ ಕಲೆ, ಜೈಪುರ್, ತಮಿಳುನಾಡುಗಳ ಕೆತ್ತನೆಗಳು, ಕಾಶ್ಮೀರದ ಪೇಪೀರ್ ಮಾಶೆ ಅಲ್ಲದೇ ಆಗ್ರಾದ ಅಮೃತಶಿಲೆಯ ವಸ್ತುಗಳೂ ಇವೆ. ಜೈಪುರ, ಪಶ್ಚಿಮ ಬಂಗಾಳಗಳ ಕೈಮಗ್ಗ, ಕಾಟನ್ ಸೀರೆಗಳು, ಡ್ರೆಸ್ ಮೆಟೀರಿಯಲ್ಸ್, ಲಖೌ°ದ ಶಿಕನ್ ಕಸೂತಿ ಕುರ್ತಾಗಳು, ಜೈಪುರ, ಜೋಧ್‌ಪುರ್, ಬನಾರಸ್‌ಗಳ ಟೇಬಲ್ ಲಿನೆನ್ ಮತ್ತು ಬೆಡ್‌ಸ್ಪ್ರೆಡ್‌ಗಳು, ಕಾಶ್ಮೀರದ ಸಿಲ್ಕ್ ಕುರ್ತಾಗಳು, ಜಾಕೆಟ್‌ಗಳು, ಸಿಲ್ಕ್ಸ್ಕಾಫ್ìಗಳು, ಪಶ್ಮೀನಾ ಶಾಲ್‌ಗಳು ಮುಂತಾದ ನೇಯ್ಗೆ ಪರಂಪರೆಯ ಜವಳಿಗಳು ಕೂಡ ಇಲ್ಲಿವೆ. ಈ ಪ್ರದರ್ಶನ ಇಂದೇ ಕೊನೆಗೊಳ್ಳಲಿದೆ.
ಎಲ್ಲಿ?: ಸಿಸಿಐಸಿಐ ಶೋರೂಂ, ಎಂ.ಜಿ ರಸ್ತೆ,
ಯಾವಾಗ?: ಮಾ.3, ಶನಿವಾರ
ಹೆಚ್ಚಿನ ಮಾಹಿತಿಗೆ: 94480 71867