Advertisement

ಮಾದಕ ವಸ್ತು ಮಿಶ್ರಿತ ಚಾಕೊಲೆಟ್‌ ಮಾರಾಟ: ಪೊಲೀಸರಿಂದ ಮುಂದುವರಿದ ಕಾರ್ಯಾಚರಣೆ

12:09 AM Jul 21, 2023 | Team Udayavani |

ಮಂಗಳೂರು: ನಗರದ ರಥಬೀದಿಯ ಮತ್ತು ಫಳ್ನೀರ್‌ನ ಅಂಗಡಿಯಲ್ಲಿ ಸುಮಾರು 100 ಕೆ.ಜಿ ಯಷ್ಟು ಮಾದಕ ವಸ್ತು ಮಿಶ್ರಿತ ಚಾಕಲೇಟ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗುರುವಾರವೂ ಪೊಲೀ ಸರು ಹಲವು ಅಂಗಡಿಗಳಿಗೆ ದಾಳಿ ನಡೆಸಿದ್ದಾರೆ.

Advertisement

ನಗರದ ಬಂದರು, ರಥಬೀದಿ ಸೇರಿದಂತೆ ಸುತ್ತಮುತ್ತಲ ಪ್ರದೇಶದ 60ಕ್ಕೂ ಅಧಿಕ ಅಂಗಡಿಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಬುಧವಾರ ವಶಪಡಿಸಿ ಕೊಂಡ ಚಾಕೊಲೆಟ್‌ಗಳ ಒಟ್ಟು ಮೌಲ್ಯ 53,500 ರೂ. ಎಂದು ಪೊಲೀಸರು ತಿಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳೇ ಟಾರ್ಗೆಟ್‌
ಶಾಲಾ-ಕಾಲೇಜುಗಳ ವಿದ್ಯಾರ್ಥಿ ಗಳನ್ನು ಟಾರ್ಗೆಟ್‌ ಮಾಡಿ ಈ ಚಾಕೊಲೆಟ್‌ಗಳನ್ನು ಏಜೆಂಟ್‌ಗಳು ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next