Advertisement

ಎಫ್ ಬಿ ಮೂಲಕ 50 ಕೋಟಿ ಜನರ ಮಾಹಿತಿ ಮಾರಾಟಕ್ಕೆ

01:45 AM Jan 27, 2021 | Team Udayavani |

ನವದಿಲ್ಲಿ: ಈಗಾಗಲೇ ಬಳಕೆದಾರರ ಖಾಸಗಿ ಮಾಹಿತಿ ಹಂಚಿಕೆ ಆರೋಪಕ್ಕೆ ಗುರಿಯಾಗಿರುವ ಫೇಸ್‌ಬುಕ್‌ ವಿರುದ್ಧ ಮತ್ತೂಂದು ಆರೋಪ ಕೇಳಿ ಬಂದಿದೆ.

Advertisement

ಭಾರತದ 61,62,450 ಮಂದಿ ಸೇರಿದಂತೆ ಜಗತ್ತಿನ 50 ಕೋಟಿ ಮಂದಿಯ ಫೋನ್‌ ನಂಬರ್‌ ಅನ್ನು ಟೆಲಿಗ್ರಾಂ ಬಾಟ್‌ ಮೂಲಕ ಮಾರಾ ಟಕ್ಕೆ ಇರಿಸಲಾಗಿದೆ ಎಂದು “ಮದರ್‌ಬೋರ್ಡ್‌’ ಎಂಬ ವೆಬ್‌ಸೈಟ್‌ ವರದಿ ಮಾಡಿದೆ. ಸೈಬರ್‌ ಭದ್ರತಾ ಕ್ಷೇತ್ರದ ವಿಶ್ಲೇಷಣೆ ಕಾರ, ಸಂಶೋಧಕ ಅಲೊನ್‌ ಗಾಲ್‌ ಈ ಅಂಶ ವನ್ನು ಮೊದಲು ಪತ್ತೆ ಹಚ್ಚಿ, ಟ್ವೀಟ್‌ ಮಾಡಿ  ದ್ದರು. ಮೊಬೈಲ್‌ ನಂಬರ್‌ ಲಿಂಕ್‌ ಆಗಿರುವ ಫೇಸ್‌ಬುಕ್‌ನ ಮಾಹಿತಿಯನ್ನು ಸುಲಭವಾಗಿ ಕದಿಯಲು ಸಾಧ್ಯವಿದೆ ಎಂಬ ತಾಂತ್ರಿಕ ಅಂಶ ಗಳನ್ನು ಅರಿತು ಈ ಕುಕೃತ್ಯವೆಸಗಲಾಗಿದೆ. ಭಾರತ ಸೇರಿದಂತೆ ಜಗತ್ತಿನ ಹಲವು ದೇಶ ಗಳಲ್ಲಿ  ರುವ ಜನರ ಮಾಹಿತಿ ಬಿಕರಿಯಾಗಿದೆ. 2019  ರಲ್ಲಿಯೂ 41 ಕೋಟಿ ಬಳಕೆದಾರರ ಮೊಬೈಲ್‌, ಖಾಸಗಿ ಮಾಹಿತಿ ಸೋರಿಕೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next