Advertisement
ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್‌ನಿಂದ ಎಸ್ಪಿ( ಐಪಿಎಸ್ ಹೊರತುಪಡಿಸಿ)ಹಂತದ ಅಧಿಕಾರಿಗಳ ವೇತನ ಪರಿಷ್ಕರಣೆ ಮಾಡಬೇಕು. ಹುದ್ದೆಯನ್ನುಮೇಲ್ದರ್ಜೆಗೇರಿಸಬೇಕು ಸೇರಿ ಕೆಲವೊಂದು ಅಂಶಗಳ ನ್ನೊಳಗೊಂಡ ವರದಿಯನ್ನು ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ತಂಡ 2017ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದು, ಅದನ್ನು 2019 ಆ.1ರಂದು ಸರ್ಕಾರ ಜಾರಿಗೆ ತಂದಿತ್ತು. ಜತೆಗೆ ಜನವರಿಯಿಂದ ಜುಲೈನೊಳಗೆ ಕರ್ತವ್ಯಕ್ಕೆ ಸೇರಿಕೊಂಡ ಸಿಬ್ಬಂದಿಗೆ ಜನವರಿಯಲ್ಲಿ, ಜುಲೈನಿಂದ ಡಿಸೆಂಬರ್ ಅವಧಿಯಲ್ಲಿ ಕರ್ತವ್ಯಕ್ಕೆ ಸೇರಿಕೊಂಡ ಸಿಬ್ಬಂದಿಗೆ ಜುಲೈನಲ್ಲಿ ವೇತನ ಬಡ್ತಿ ನೀಡಬೇಕು ಎಂದು ವರದಿಯಲ್ಲಿ ಉಲ್ಲೇಖೀಸಿತ್ತು.
Related Articles
Advertisement
ಅದು 2016ನೇ ಬ್ಯಾಚ್‌ನ ಸಿಬ್ಬಂದಿ ಮಾನಸಿಕ ಮುಜುಗರ ಮತ್ತು ಒತ್ತಡಕ್ಕೊಳಗಾಗಿದ್ದಾರೆ. ಹೀಗಾಗಿ ಈ ಹಿಂದೆ ನೀಡುತ್ತಿದ್ದ ಸರಿಸಮಾನ ವೇತನ ನೀಡಬೇಕೆಂದು ಕೆಲ ಸಿಬ್ಬಂದಿ ಹಿರಿಯ ಅಧಿಕಾರಿಗಳ ಮೊರೆಹೋಗಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಕೆಲ ವಿಭಾಗದಲ್ಲಿಔರಾದ್ಕರ್ ವರದಿಯೇ ಅದಕ್ಕೆ ಕಾರಣ ಎಂದು ಉತ್ತರನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಇಲಾಖೆ ಹೇಳುವುದೇನು ?: ಔರಾದ್ಕರ್ ವರದಿ ಪ್ರಕಾರ ಸಿಗಬೇಕಾದ ವೇತನ ಬಡ್ತಿ ಸೌಲಭ್ಯದಲ್ಲಿ ನಗರದ ಕೆಲ ವಿಭಾಗಗಳಲ್ಲಿ ತಾಂತ್ರಿಕ ಕಾರಣಗಳಿಂದಗೊಂದಲ ಉಂಟಾಗಿದೆ. 2021ರ ಜುಲೈ ಬದಲಿಗೆ2021ರ ಜನವರಿಯಲ್ಲಿ ಕೆಲವು ಸಿಬ್ಬಂದಿಗೆ ವೇತನಬಡ್ತಿಯನ್ನು ತಪ್ಪಾಗಿ ನೀಡಲಾಗಿದೆ. ಆದರೆ, ಈಗ ಸಂಬಂಧಪಟ್ಟ ವಿಭಾಗಗಳು ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದು, ವಾರ್ಷಿಕ ವೇತನ ಬಡ್ತಿ ಅವಧಿಯನ್ನು ಸರಿಪಡಿಸುತ್ತಿದ್ದಾರೆ. ಅದರಂತೆ ಈ ನಿರ್ದಿಷ್ಟ ಸಿಬ್ಬಂದಿಗೆ2022ರ ಜುಲೈನಲ್ಲಿ ವಾರ್ಷಿಕ ವೇತನ ಬಡ್ತಿ ಸಿಗಲಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.
ಮತ್ತೂಂದೆಡೆ 2019ರ ಆಗಸ್ಟ್‌ನಲ್ಲಿ ಔರಾದ್ಕರ್ ವರದಿ ಜಾರಿಯಾಗಿದ್ದು, ಕಾನ್‌ಸ್ಟೇಬಲ್‌ನಿಂದ ಎಸ್ಪಿ ಹಂತದ ಅಧಿಕಾರಿಗಳಿಗೆ ಮೂಲ ವೇತನ ಹೆಚ್ಚಳ ಮಾಡಲಾಗಿದೆ. ಅದರಂದೆ ಒಂದು ವರ್ಷದ ಬಳಿಕ ಅಂದರೆ ಜುಲೈನಲ್ಲಿ 2020ರಲ್ಲಿ ವೇತನ ಬಡ್ತಿ ನೀಡಬೇಕಿತ್ತು. ಆದರೆ, ಕೆಲವೊಂದು ತಪ್ಪುಗಳಿಂದ ಕೇವಲ ಆರೇ ತಿಂಗಳಲ್ಲಿ ಅಂದರೆ ಜನವರಿ 2020ರಲ್ಲಿ ವೇತನ ಬಡ್ತಿನೀಡಲಾಗಿತ್ತು. ಆದರೆ, ಇತ್ತೀಚೆಗೆ ಈ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.
ವೇತನ ಬಡ್ತಿ ಹೇಗೆ? :
ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ ತಾಂತ್ರಿಕ ದೋಷ ಉಂಟಾದರೆ ಇಲಾಖೆಯ ಎಲ್ಲ ಸಿಬ್ಬಂದಿಗೆ ಉಂಟಾಗಬೇಕು. ಆದರೆ, 2016ನೇ ಬ್ಯಾಚ್‌ಸಿಬ್ಬಂದಿಗೆ ಮಾತ್ರ ಏಕೆ ಸಮಸ್ಯೆ ಉಂಟಾಗಿದೆ.ಹಾಗಾದರೆ 2017ನೇ ಬ್ಯಾಚ್ ಸಿಬ್ಬಂದಿಗೆ ಏಕೆವೇತನ ಬಡ್ತಿ ನೀಡಲಾಗಿದೆ. ಎರಡು ವರ್ಷಗಳಕಾಲ ಈ ಸಮಸ್ಯೆ ಕಂಡು ಬಂದಿರಲಿಲ್ಲವೇ? ಜುಲೈ ನಲ್ಲಿ ವೇತನ ಬಡ್ತಿ ನೀಡಿದರೆ, ಕಿರಿಯ ಸಹೋದ್ಯೋಗಿಗಳಿಗಿಂತ ಆರು ತಿಂಗಳ ವೇತನ ಬಡ್ತಿಯಲ್ಲಿ ಹಿನ್ನಡೆ ಉಂಟಾಗುತ್ತದೆ. ಜತೆಗೆಕರ್ತವ್ಯದಲ್ಲಿರುವ ಅವಧಿ ಪೂರ್ತಿ ಈ ಸಮಸ್ಯೆಮುಂದುವರಿಯುತ್ತದೆ. ಹೀಗಾಗಿ 2016ನೇಬ್ಯಾಚ್ ಸಿಬ್ಬಂದಿಗೂ ಕೂಡಲೇ ವೇತನ ಬಡ್ತಿ ನೀಡ ಬೇಕು ಎಂದು ಸಿಬ್ಬಂದಿ ಆಗ್ರಹಿಸಿದ್ದಾರೆ.
ಎಲ್ಲೆಲ್ಲಿ ಸಮಸ್ಯೆ? :
ಬೆಂಗಳೂರಿನ ಕಾನೂನು ಸುವ್ಯವಸ್ಥೆಯ ಉತ್ತರ, ಪೂರ್ವ, ಪಶ್ಚಿಮ, ಸಂಚಾರ ವಿಭಾಗದ ಕೇಂದ್ರ,ಉತ್ತರ ಹಾಗೂ ಹಾವೇರಿ, ವಿಜಯಪುರ, ಬಳ್ಳಾರಿ, ಯಾದಗಿರಿ ಸೇರಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2016ನೇ ಬ್ಯಾಚ್‌ನ ಸುಮಾರು 450ಕ್ಕೂ ಅಧಿಕ ಸಿಬ್ಬಂದಿಗೆ ಈ ವರ್ಷದ ವೇತನ ಬಡ್ತಿ ಸಿಕ್ಕಿಲ್ಲ.
ನಮ್ಮ ವಿಭಾಗದ ಕೆಲವು ಸಿಬ್ಬಂದಿಯವೇತನ ನಿಗದಿ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಒಂದು ವಾರದಲ್ಲಿ ಬಗೆಹರಿಸಲಾಗುತ್ತದೆ. – ವಿನಾಯಕ್ ಪಾಟೀಲ್, ಡಿಸಿಪಿ ಉತ್ತರ ವಿಭಾಗ
– ಮೋಹನ್ ಭದ್ರಾವತಿ