Advertisement

ಮಲೇಷಿಯಾ ರ‍್ಯಾಪರ್‌ ಕಂಠದಲ್ಲಿ “ಸಲಗ’ಟೈಟಲ್‌ ಟ್ರ್ಯಾಕ್

10:22 AM Mar 02, 2020 | Lakshmi GovindaRaj |

ದುನಿಯಾ ವಿಜಯ್‌ ನಟಿಸಿ, ನಿರ್ದೇಶಿಸುತ್ತಿರುವ “ಸಲಗ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಯುಗಾದಿಗೆ ಚಿತ್ರ ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರತಂಡ. ಈಗ ಚಿತ್ರದ ಟೈಟಲ್‌ ಟ್ರ‍್ಯಾಕ್‌ ಹಾಡಲು ದೂರದ ಮಲೇಷಿಯಾದಿಂದ ಖ್ಯಾತ ರ‍್ಯಾಪರ್‌ ಬಂದಿದ್ದಾರೆ. ಸಖತ್‌ ಜೋಶ್‌ ಆಗಿರುವ “ಸಲಗ’ ಟೈಟಲ್‌ ಟ್ರ್ಯಾಕ್‌ಗೆ ಮಲೇಷಿಯಾದ ಯೋಗಿ ಬಿ ಧ್ವನಿಯಾಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಯೋಗಿ ಕನ್ನಡ ಚಿತ್ರವೊಂದರಲ್ಲಿ ಹಾಡಿದಂತಾಗಿದೆ.

Advertisement

ಯೋಗಿ ರ‍್ಯಾಪರ್‌ ಆಗಿ ತಮ್ಮದೇ ಆದ ಹಲವು ಆಲ್ಬಂಗಳನ್ನು ಮಾಡಿದ್ದು, ಆ ನಂತರ ತಮಿಳಿನ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ಪ್ರತಿಭೆ ಕಂಡ ಚಿತ್ರತಂಡ ಈಗ “ಸಲಗ’ ಚಿತ್ರದ ಟೈಟಲ್‌ ಟ್ರ್ಯಾಕ್‌ ಹಾಡಿಸಿದೆ. ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತವಿದೆ. ವಿಜಯ್‌ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು, ಇದೊಂದು ಔಟ್‌ ಅಂಡ್‌ ಔಟ್‌ ಮಾಸ್‌ ಸಿನಿಮಾವಾಗಿದೆ.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌, “ಸೂರಿಯಣ್ಣಾ…’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು, ಚಿತ್ರವನ್ನು ಕೂಡಾ ಜನ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಈಗಾಗಲೇ ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಧನಂಜಯ್‌ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಉಳಿದಂತೆ ಸಂಜನಾ, ಸುಧಿ, ಯಶ್‌ ಶೆಟ್ಟಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರವನ್ನು ಕೆ.ಪಿ.ಶ್ರೀಕಾಂತ್‌ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next