Advertisement

ಸಾಲಬಾಧೆ: ಉಡುಪಿ ಮೂಲದ ತಾಯಿ, ಅವಳಿ ಮಕ್ಕಳು ಆತ್ಮಹತ್ಯೆ

01:00 AM Mar 21, 2024 | Team Udayavani |

ಬೆಂಗಳೂರು: ಸಾಲಬಾಧೆ ಹಾಗೂ ಆರೋಗ್ಯ ಸಮಸ್ಯೆಯಿಂದ ಉಡುಪಿ ಮೂಲದ ತಾಯಿ ಹಾಗೂ ಅವಳಿ ಮಕ್ಕಳು ಪೆಟ್ರೋಲ್‌ ಸುರಿದುಕೊಂಡು ಸಜೀವ ದಹನವಾಗಿರುವ ದಾರುಣ ಘಟನೆ ಜೆ.ಪಿ. ನಗರದಲ್ಲಿ ನಡೆದಿದೆ.

Advertisement

ಜೆ.ಪಿ. ನಗರದ 3ನೇ ಹಂತದ ನಿವಾಸಿಗಳಾದ ಸುಕನ್ಯಾ (48), ಅವರ ಪುತ್ರರಾದ ನಿಖೀಲ್‌ (27) ಮತ್ತು ನಿಶ್ಚಿತ್‌(27) ಮೃತರು. ಜೆ.ಪಿ.ನಗರದ 3ನೇ ಹಂತದಲ್ಲಿ ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ಘಟನೆ ನಡೆದಿದೆ. ಸುಕನ್ಯಾ ಪತಿ ಜಯಾನಂದ್‌ ಅವರು ನೀಡಿದ ದೂರಿನ ಮೇರೆಗೆ ಜೆ.ಪಿ. ನಗರ ಠಾಣೆ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಉಡುಪಿಯ ಅಂಬಲಪಾಡಿ ಮೂಲದ ಜಯಾನಂದ್‌ ಕುಟುಂಬ ಹತ್ತಾರು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ನಗರದಲ್ಲಿ ವಾಸವಾಗಿದೆ. ಜಯಾನಂದ್‌, ಜೆ.ಪಿ. ನಗರದಲ್ಲೇ ವುಡನ್‌ ಡೈ ಮೇಕಿಂಗ್‌ ಮಳಿಗೆ ನಡೆಸುತ್ತಿದ್ದರು. ಪುತ್ರರ ಪೈಕಿ ನಿಖೀಲ್‌ ಎಂಸಿಎ ವ್ಯಾಸಂಗ ಮಾಡಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಿಶ್ಚಿತ್‌ ಕೂಡ ಅನಿಮೇಷನ್‌ ಸಂಬಂಧಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಸುಕನ್ಯಾ ಮನೆಯಲ್ಲೇ ಮಕ್ಕಳಿಗೆ ಪಾಠ ಮಾಡುತ್ತಿದ್ದರು.

ವ್ಯಾಪಾರದಲ್ಲಿ ನಷ್ಟ, 15 ಲಕ್ಷ ರೂ. ಸಾಲ
ಈ ಮೊದಲು ವುಡನ್‌ ಡೈ ಮೇಕಿಂಗ್‌ ವ್ಯಾಪಾರದಲ್ಲಿ ಉತ್ತಮ ಲಾಭ ಬರುತ್ತಿತ್ತು. ಆದರೆ, 2020ರ ಕೊರೊನಾ ಸಂದರ್ಭ ಭಾರೀ ನಷ್ಟ ಉಂಟಾಗಿತ್ತು. ಜತೆಗೆ ಕೆಲ ಆರೋಗ್ಯ ಸಮಸ್ಯೆಯಿಂದ ಜಯಾನಂದ್‌ ಹಾಗೂ ಕುಟುಂಬ ಸದಸ್ಯರು ಬಳಲುತ್ತಿದ್ದರು. ಹೀಗಾಗಿ ಅಂದಾಜು 15 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಪ್ರತಿ ತಿಂಗಳು ಲಕ್ಷಾಂತರ ರೂ.ಗೆ ಬಡ್ಡಿ ಕಟ್ಟುತ್ತಿದ್ದರು. ಜತೆಗೆ ಸುಕನ್ಯಾ ಕೂಡ ಸ್ಥಳೀಯವಾಗಿ ಕೆಲವರ ಬಳಿ ಸಾವಿರಾರು ರೂ. ಸಾಲ ಮಾಡಿದ್ದರು. ಈ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಘಟನೆಯ ಸಂದರ್ಭ ಪತಿಯೂ ಮನೆಯಲ್ಲಿದ್ದು, ಕೋಣೆಯ ಹೊರಗಡೆ ಇದ್ದರು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next