ಸಿಡ್ನಿ: ಅಭ್ಯಾಸ ಪಂದ್ಯದ ಮೊದಲ ದಿನ ಚೆಂಡಿನ ಹೊಡೆತವೊಂದಕ್ಕೆ ಕ್ಯಾಮರಾನ್ ಗ್ರೀನ್ ಕುಸಿದು ಬಿದ್ದಾಗ ಬ್ಯಾಟ್ ಎಸೆದು ಉಪಚರಿಸಲು ಧಾವಿಸಿದ ಮೊಹಮ್ಮದ್ ಸಿರಾಜ್ ಅವರ ಕ್ರೀಡಾಸ್ಫೂರ್ತಿ ಹಾಗೂ ಮಾನವೀಯ ನಡೆಯನ್ನು ಆಸ್ಟ್ರೇಲಿಯದ ಮಾಧ್ಯಮಗಳು ಶ್ಲಾಘಿಸಿವೆ.
9 ನ್ಯೂಸ್ ಆಸ್ಟ್ರೇಲಿಯ, ಎಬಿಸಿ.ನೆಟ್.ಎಯು, ಕ್ರಿಕೆಟ್. ಕಾಮ್.ಎಯು ಮೊದಲಾದ ಮಾಧ್ಯಮಗಳು, ಸಾಮಾಜಿಕ ಜಾಲತಾಣಿಗರು ಸಿರಾಜ್ ಅವರ ಕ್ರೀಡಾಸ್ಫೂರ್ತಿಯನ್ನು ಕೊಂಡಾಡಿದ್ದಾರೆ. ಬಿಸಿಸಿಐ ಕೂಡ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಸಿರಾಜ್ ನಡೆಯನ್ನು ಪ್ರಶಂಸಿಸಿದೆ
ಹಾರ್ದಿಕ್ ಪಾಂಡ್ಯ… ಈಗ ಫಾದರ್ ಡ್ಯೂಟಿ!
ಆಸ್ಟ್ರೇಲಿಯ ವಿರುದ್ಧದ ಸೀಮಿತ ಓವರ್‌ಗಳ ಸರಣಿಯನ್ನು ಯಶಸ್ವಿಯಾಗಿ ಪೂರೈಸಿದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಭಾರತಕ್ಕೆ ವಾಪಸಾಗಿದ್ದಾರೆ. ಕುಟುಂಬದೊಂದಿಗೆ ಸಂಭ್ರಮದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇದಕ್ಕೆ ಶನಿವಾರ ಅವರ ಟ್ವಿಟರ್ ಖಾತೆಯಲ್ಲಿ ಉತ್ತಮ ನಿದರ್ಶನವೊಂದು ಕಾಣಸಿಕ್ಕಿತು. ಮಗ ಅಗಸ್ತ್ಯನಿಗೆ ಬಾಟಲಿ ಹಾಲುಣಿಸುತ್ತಿರುವ ಚಿತ್ರವೊಂದನ್ನು ಪಾಂಡ್ಯ ಪೋಸ್ಟ್ ಮಾಡಿದ್ದಾರೆ. ಇದಕ್ಕೆ “ಫ್ರಮ್ ನ್ಯಾಶನಲ್ ಡ್ಯೂಟಿ ಟು ಫಾದರ್ ಡ್ನೂಟಿ’ ಎಂಬ ಶೀರ್ಷಿಕೆಯನ್ನೂ ನೀಡಿದ್ದಾರೆ.
Related Articles
ವೈವಾಹಿಕ ಬದುಕಿನತ್ತ ಆರ್‌ಸಿಬಿಯ ದಾನಿಶ್ ಶೇಠ್
ಆರ್‌ಸಿಬಿ ಅಭಿಮಾನಿಗಳಿಗೆ “ಮಿಸ್ಟರ್ ನ್ಯಾಗ್ಸ್’ ಖ್ಯಾತಿಯ ದಾನಿಶ್ ಶೇಠ್ ಬಹಳ ಅಚ್ಚುಮೆಚ್ಚು. ಅವರು “ಇನ್‌ಸೈಡ್ ಆರ್‌ಸಿಬಿ’ ಸಂದರ್ಶನದ ಮೂಲಕ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಇದೀಗ ದಾನಿಶ್ ಶೇಠ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿದ್ದು, ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ಅವರು ಯಸ್ ಅಂದಿದ್ದಾರೆ, ತುಂಬ ಸಂತೋಷಗೊಂಡಿದ್ದೇನೆ. ನಿಮ್ಮ ಜೀವನವನ್ನು ನನ್ನ ಜತೆಗೆ ಕಳೆಯಲು ತೀರ್ಮಾನಿಸಿದ್ದಕ್ಕೆ ಧನ್ಯವಾದಗಳು ಅನ್ಯಾ ರಂಗಸ್ವಾಮಿ’ ಎಂದಿದ್ದಾರೆ ದಾನಿಶ್ ಶೇಠ್