Advertisement
ಸಕ್ಷಮ ಸಂಸ್ಥೆಯ ಉತ್ತರ ಕರ್ನಾಟಕ ಪ್ರಾಂತದ ಉಪಾಧ್ಯಕ್ಷರಾಗಿರುವ ಡಾ| ಸುನೀಲ್ ಗೋಖಲೆ ಶಾಲಾ-ಕಾಲೇಜುಗಳಿಗೆ ತೆರಳಿ ಉಪನ್ಯಾಸ ಮೂಲಕ ನೇತ್ರದಾನ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ. ಉಪನ್ಯಾಸಕರಾಗಿರುವ ಡಾ| ಗೋಖಲೆ ಅವರಿಗೆ ಯುವಜನರಿಗೆ ಮನವರಿಕೆ ಮಾಡಿಕೊಡುವ ಜಾಣ್ಮೆಯಿದೆ. ಇದರಿಂದಾಗಿ ಅವರ ಉಪನ್ಯಾಸಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳ ಮನ ಮುಟ್ಟುತ್ತವೆ. ಅನೇಕರು ಇವರ ಮಾತಿನ ಮೋಡಿಯಿಂದ ನೇತ್ರದಾನ ಮಾಡುವುದಾಗಿ ಶಪಥ ಪತ್ರ ಬರೆದುಕೊಟ್ಟಿದ್ದಾರೆ.
Related Articles
Advertisement
ಎಂಬಿಬಿಎಸ್ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಅಕಸ್ಮಾತ್ ಆಗಿ ಕಣ್ಣಿನಲ್ಲಿ ರಾಸಾಯನಿಕ ದ್ರವ ಹೋಗಿ ಕಣ್ಣು ಕಳೆದುಕೊಂಡಿರುವ ಡಾ| ಸುನೀಲ್ ಗೋಖಲೆ ಅವರು ತಮ್ಮ ವೃತ್ತಿಯೊಂದಿಗೆ ಕಣ್ಣಿಲ್ಲದವರ ಬಾಳು ಬೆಳಗುವ ದಿಸೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನ ಪ್ರಶಂಸನೀಯವಾಗಿದ್ದು, ನಮ್ಮೊಂದಿಗೆ ನಮ್ಮ ಕಣ್ಣುಗಳು ನಾಶವಾಗಲು ಅವಕಾಶ ನೀಡದೇ ನೇತ್ರದಾನ ಮಾಡುವ ಜನರ ಸಂಖ್ಯೆ ಹೆಚ್ಚಾದರೆ ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ. ನಮ್ಮ ದೇಶ ಕಾರ್ನಿಯಾ ಅಂಧತ್ವ ಮುಕ್ತವಾಗಲು ಸಾಧ್ಯವಾಗುವುದು.
ನೇತ್ರದಾನ ಮಾಡೋದು ಹೇಗೆ?ನೇತ್ರದಾನ ಸಂಪ್ರದಾಯವಾಗಬೇಕು. ನೇತ್ರದಾನ ಮಹಾದಾನವಾಗಿದ್ದು, ಮೃತ ವ್ಯಕ್ತಿಯ ಕಣ್ಣುಗಳನ್ನು 6 ಗಂಟೆಗಳಲ್ಲಿ ತೆಗೆದುಕೊಳ್ಳುವುದು ಮುಖ್ಯ. ವ್ಯಕ್ತಿ ಮೃತಪಟ್ಟ ನಂತರ ವ್ಯಕ್ತಿಯ ತಲೆ ಕೆಳಗೆ ದಿಂಬನ್ನಿಟ್ಟು, ರೆಪ್ಪೆ ಮುಚ್ಚಿ, ಕಣ್ಣಿನ ಮೇಲೆ ತಂಪು ಬಟ್ಟೆ ಇಡಬೇಕು. ಫ್ಯಾನ್, ಎಸಿ ಬಂದ್ ಮಾಡಬೇಕು. ಕೂಡಲೇ ಹತ್ತಿರದ ನೇತ್ರ ಬ್ಯಾಂಕ್‌ಗೆ ಕರೆ ಮಾಡಿದರೆ ಅವರು ಬಂದು 20 ನಿಮಿಷಗಳಲ್ಲಿ ಕಣ್ಣಿನ ಕಾರ್ನಿಯಾ ತೆಗೆದುಕೊಂಡು ಹೋಗುತ್ತಾರೆ. ಮತ್ತೆ ರೆಪ್ಪೆ ಮುಚ್ಚುವುದರಿಂದ ನೇತ್ರ ಪಡೆದಿರುವುದು ಗೊತ್ತಾಗುವುದಿಲ್ಲ. ಮೂರು ತಿಂಗಳ ಶಿಶುವಿನಿಂದ ವಯೋವೃದ್ಧರವರೆಗೆ ಯಾರಾದರೂ ನೇತ್ರದಾನ ಮಾಡಬಹುದು. ಒಬ್ಬ ವ್ಯಕ್ತಿಯ ಕಣ್ಣುಗಳು ಇಬ್ಬರು ಕಾರ್ನಿಯಾ ಅಂಧರ ಬಾಳಿಗೆ ಬೆಳಕು ನೀಡಬಲ್ಲವು. ಶ್ರೀಲಂಕಾದಲ್ಲಿ ಮೃತಪಟ್ಟ ವ್ಯಕ್ತಿಗಳಲ್ಲಿ ಶೇ.80 ಜನರ ಕಣ್ಣುಗಳನ್ನು ದಾನ ಮಾಡಲಾಗುತ್ತಿದೆ. ಬೌದ್ಧ ಸಂಪ್ರದಾಯ ನೇತ್ರದಾನಕ್ಕೆ ಆದ್ಯತೆ ನೀಡುವುದೇ ಇದಕ್ಕೆ ಕಾರಣ. ಪುಟ್ಟ ದೇಶ ಶ್ರೀಲಂಕಾದಿಂದ ಕಣ್ಣುಗಳನ್ನು ರಪು¤ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿ ನೇತ್ರದಾನ ಕುರಿತು ಅರಿವು ಮೂಡಿಸಬೇಕು. ಶಾಲಾ-ಕಾಲೇಜು ಮಕ್ಕಳಿಗೆ ತಿಳಿವಳಿಕೆ ನೀಡುವುದು ಮುಖ್ಯ. ಈ ದಿಸೆಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಕ್ಷಮ ಸಂಸ್ಥೆ ವತಿಯಿಂದ ಮಾಡಲಾಗುತ್ತಿದೆ. ನೇತ್ರದಾನ ಕುಟುಂಬದ ಸಂಪ್ರದಾಯವಾಗಬೇಕು.
. ಡಾ| ಸುನೀಲ್ ಗೋಖಲೆ, ಸಕ್ಷಮ ಸಂಸ್ಥೆಯ ಉತ್ತರ ಕರ್ನಾಟಕ ಪ್ರಾಂತದ ಉಪಾಧ್ಯಕ್ಷ ವಿಶ್ವನಾಥ ಕೋಟಿ