Advertisement
ಮಾನ್ಸೂನ್ ಮಳೆ ಅಂದರೆ ಜೂನ್‌ನಿಂದ ಆ.24 ರವರೆಗೆ ವಾಡಿಕೆ ಮಳೆ587 ಮಿ.ಮೀ. ಆಗಬೇಕಾಗಿತ್ತಾದರೂ 496 ಮಿ.ಮೀ. ಮಳೆಯಾಗಿದ್ದು, ಶೇ.15 ಮಳೆಕೊರತೆಯಾಗಿದೆ. ಆಗಸ್ಟ್‌ನಲ್ಲಿ ವಾಡಿಕೆ ಮಳೆ166 ಮಿ.ಮೀ. ಮಳೆಯಾಗ ಬೇಕಾಗಿದ್ದು,ಕೇವಲ 89 ಮಿ.ಮೀ. ಮಳೆಯಾಗಿದ್ದು, ಶೇ.46 ರಷ್ಟು ಮಳೆ ಕೊರತೆಯಾಗಿದೆ.
ಮಳೆ ದಾಖಲಾಗಿದೆ. ಜೂನ್‌ನಿಂದ ಆ.24 ರವರೆಗೆ ಆಲೂರು ತಾಲೂಕಿನಲ್ಲಿ ವಾಡಿಕೆಗಿಂತ ಶೇ.5ರಷ್ಟು ಮಳೆಕೊರತೆಯಾಗಿದ್ದರೆ, ಅರಕಲಗೂಡು ತಾಲೂಕಿನಲ್ಲಿ ಶೇ.17 ರಷ್ಟು, ಬೇಲೂರಿನಲ್ಲಿ ಶೇ.11 ರಷ್ಟು, ಹಾಸನ ತಾಲೂಕಿನಲ್ಲಿ ಶೇ.15 ರಷ್ಟು ಮಳೆ ಕೊರತೆಯಾಗಿದೆ. ಸಹಜವಾಗಿ ಮಲೆನಾಡು ಸಕಲೇಶಪುರ ತಾಲೂಕಿನಲ್ಲಿ ವಾಡಿಕೆಗಿಂತ ಶೇ.7 ರಷ್ಟು ಹೆಚ್ಚು ಮಳೆಯಾಗಿದ್ದರೆ, ಬಯಲುಸೀಮೆ ತಾಲೂಕುಗಳಾದ ಅರಸೀಕೆರೆಯಲ್ಲಿ ವಾಡಿಕೆಗಿಂತ ಶೇ.24 ರಷ್ಟು ಹೆಚ್ಚು ಮಳೆಯಾಗಿದೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಶೇ.13 ರಷ್ಟು ಹೊಳೆನರಸೀಪುರ ತಾಲೂಕಿನಲ್ಲಿಯೂ ವಾಡಿಕೆಗಿಂತ ಶೇ.9 ರಷ್ಟು ಮಳೆಯಾಗಿದೆ. ಆಗಸ್ಟ್ ತಿಂಗಳಲ್ಲಿನಲ್ಲಿಯೂ ಬಯಲು ಸೀಮೆ ತಾಲೂಕುಗಳಾದ ಅರಸೀಕೆರೆ ತಾಲೂಕಿನಲ್ಲಿ ವಾಡಿಕೆಗಿಂತ ಶೇ.10ರಷ್ಟು ಹೆಚ್ಚು ಮಳೆಯಾಗಿದ್ದರೆ, ಚನ್ನರಾಯಪಟ್ಟಣ ತಾಲೂಕಿನಲ್ಲಿಯೂ ಶೇ.14 ರಷ್ಟು ಹೆಚ್ಚು ಮಳೆಯಾಗಿದೆ. ಆಲೂರು ತಾಲೂಕಿನಲ್ಲಿ ಶೇ.57 ರಷ್ಟು ಮಳೆಕೊರತೆಯಾಗಿದ್ದು,
ಅರಕಲಗೂಡು – ಶೇ. 49, ಬೇಲೂರು – ಶೇ.35, ಹಾಸನ -ಶೇ.33, ಹೊಳೆನರಸೀಪುರ – ಶೇ.48 ಹಾಗೂ ಸಕಲೇಶಪುರ ತಾಲೂಕಿನಲ್ಲಿ ಶೇ.32 ರಷ್ಟು ಮಳೆಕೊರತೆ ದಾಖಲಾಗಿದೆ. ಒಟ್ಟಾರೆ ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಶೇ.46 ರಷ್ಟು ಮಳೆಕೊರತೆ ದಾಖಲಾಗಿದೆ.
Related Articles
Advertisement
ಮುಸುಕಿನ ಜೋಳಕ್ಕೆಹಾನಿ ಸಂಭವ: ಜಿಲ್ಲೆಯಲ್ಲಿ ಮುಸುಕಿನ ಜೋಳ ಈಗ ತೆನೆ ಬಿಡುವ ಸಮಯ. ಈಗ ಮಳೆಕೈ ಕೊಟ್ಟಿರುವುದರಿಂದ ಜೋಳಕಾಳುಕಟ್ಟದೆ ಹಾನಿ ಸಂಭವಿಸುವ ಆತಂಕ ಬೆಳೆಗಾರರನ್ನುಕಾಡುತ್ತಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಮಳೆ ಬಾರದಿದ್ದರೆ ಮುಸುಕಿನ ಜೋಳದ ಇಳುವರಿಯಲ್ಲಿ ಭಾರೀ ನಷ್ಟವುಂಟಾಗುವ ಸಾಧ್ಯತೆ ಇದೆ. ರಾಗಿ ಬಿತ್ತನೆಗೂ ಈಗ ಮಳೆಯ ಅಗತ್ಯವಿದೆ. ಬಿತ್ತನೆಯಾಗಿರುವ ರಾಗಿ ಬೆಳವಣಿಗೆಗೂ ಈಗ ಮಳೆಯ ಅಗತ್ಯವಿದ್ದು, ಮಳೆಗಾಗಿ ರೈತರು ಮುಗಿಲು ನೋಡುವಂತಾಗಿದೆ.ಕಳೆದೆರಡು ದಿನಗಳ ಹಿಂದೆ ಜಿಲ್ಲೆಯಲ್ಲಿಚದುರಿದಂತೆ ಮಳೆಯಾಗಿ ಅಶಾಭಾವ ಮೂಡಿಸಿತ್ತು. ಆದರೆ ಎರಡು ದಿನಗಳಿಂದೀಚೆಗೆ ಬಿರು ಬಿಸುಲಿನ ವಾತಾವರಣವಿದ್ದು, ಸದ್ಯಕ್ಕೆ ಮಳೆ ಬಾರದೇನೋ ಎಂಬ ಆತಂಕಕಾಡುತ್ತಿದೆ. ಈ ವಾರದೊಳಗೆ ಮಳೆಯಾದರೆ ಹಾನಿಯಿಲ್ಲ
ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಶೇ. 45 ಕ್ಕೂ ಹೆಚ್ಚು ಮಳೆ ಕೊರತೆ ಕಾಡಿದೆ.ಬೆಳೆಗಳು ಒಣಗುತ್ತಿಲ್ಲ. ಈ ವಾರದೊಳಗೆ ಮಳೆಯಾದರೆ ಬೆಳೆಗಳು ಚೇತರಿಸಿಕೊಳ್ಳತ್ತವೆ. ಹಾನಿಯೇನೂ ಆಗುವುದಿಲ್ಲ. ಮುಂದಿನ ವಾರವೂ ಮಳೆ ಬಾರದಿದ್ದರೆ ಬೆಳೆಗಳಿಗೆ ಹಾನಿಯಾಗುತ್ತದೆ. ಜಿಲ್ಲೆಯಲ್ಲಿ ಸರಾಸರಿ ಶೇ. 90ಬಿತ್ತನೆಯಾಗಿದೆ. ಬೆಳೆಗಳ ಸ್ಥಿತಿಯೂ ಉತ್ತಮವಾಗಿದೆ. ರಸಗೊಬ್ಬರದ ಕೊರತೆ ಇದುವರೆಗೂ ಎದುರಾಗಿಲ್ಲ. ಹೆಚ್ಚು ಪ್ರಮಾಣದಲ್ಲಿ ಯೂರಿಯಾರಸಗೊಬ್ಬರ ಅಗತ್ಯವಿದೆ. ಮುಂದಿನ ತಿಂಗಳಿಗೆ ಬೇಕಾಗುವಷ್ಟು ಗೊಬ್ಬರ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಎಂದು ಜಂಟಿಕೃಷಿ ನಿರ್ದೇಶಕ ಕೆ.ಎಚ್.ರವಿ ತಿಳಿಸಿದರು ಈವರೆಗೆ ಜಿಲ್ಲೆಯಲ್ಲಿ ಒಟ್ಟು ಶೇ.90 ಬಿತ್ತನೆ
ಜಿಲ್ಲೆಯಲ್ಲಿ ಈ ವರ್ಷ ಆ.24 ವರೆಗೆ ಶೇ.89.79 ರಷ್ಟು ಬಿತ್ತನೆಯಾಗಿದೆ. ಒಟ್ಟು 2,08,564 ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿದ್ದು, ಈವರೆಗೆ1,87,259 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.ಕಳೆದ ವರ್ಷದಂತೆ ಈ ವರ್ಷವೂ ಮೆಕ್ಕೆ ಜೋಳ ಬೆಳೆ ಗುರಿ ಮೀರಿ ಬಿತ್ತನೆಯಾಗಿದೆ. ಈ ವರ್ಷ 76000 ಹೆಕ್ಟೇರ್ ಬಿತ್ತನೆ ಗುರಿಗೆ ಬದಲಾಗಿ 85,540 ಹೆಕ್ಟೇರ್ ಬಿತ್ತನೆಯಾಗಿದೆ. ಭತ್ತದ34,000 ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಈವರೆಗೆ 22,580 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಬಿಳಿಜೋಳ10160 ಹೆಕ್ಟೇರ್ ಬಿತ್ತನೆ ಗಿರಿಯಿದ್ದರೂ ಕೇವಲ 369 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆಯಾಗಿದೆ. ರಾಗಿ 68,417 ಹೆಕ್ಟೇರ್ ಬಿತ್ತನೆ ಗುರಿದ್ದು, ಈವರೆಗೆ49,976 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು,ಕಿರುಧಾನ್ಯಗಳು220 ಹೆಕ್ಟೇರ್ ಗುರಿಗೆ ಬದಲಾಗಿ ಕೇಲವ25 ಹೆಕ್ಟೇರ್ ಬಿತ್ತನೆಯಾಗಿವೆ.ಒಟ್ಟು ಏಕದಳ ಧ್ಯಾನ್ಯಗಳ ಬಿತ್ತನೆ ಗುರಿ 1,88,787 ಹೆಕ್ಟೇರ್ ಇದ್ದು, ಈವರೆಗೆ1,58,490 ಹೆಕ್ಟೇರ್ ಬಿತ್ತನೆಯಾಗಿದೆ . ವಾಣಿಜ್ಯ ಬೆಳೆಗಳು6549 ಹೆಕ್ಟೇರ್ ಬಿತ್ತನೆ ಗುರಿಯಿದ್ದು,10,541 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಒಟ್ಟು2,08,564 ಹೆಕ್ಟೇರ್ ಬಿತ್ತಗೆ ಗುರಿಯಿದ್ದು, ಈವರೆಗೆ1,87,259 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.89.79 ರಷ್ಟು ಬಿತ್ತನೆಯಾಗಿದೆ ಎಂದುಕೃಷಿ ಇಲಾಖೆ ಮಾಹಿತಿ ನೀಡಿದೆ. -ಎನ್. ನಂಜುಂಡೇಗೌಡ