Advertisement
ಫೆ. 24ರಂದು ಸಾಕಿನಾಕಾದ ಮೊಹಿಲಿ ವಿಲೇಜ್‌ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಠಾರದಲ್ಲಿ ಜರಗಿದ ಮಂದಿರದ 52ನೇ ವಾರ್ಷಿಕ ಮಹೋತ್ಸವ ಧಾರ್ಮಿಕ ಸಭಾ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕಲಾವಿದರನ್ನು ದೇವರಂತೆ ಪ್ರೀತಿಸುವ ನಮಗೆ ನಮ್ಮೂರಲ್ಲಿ ಗೌರವಿಸುವವರು ಇಲ್ಲ. ಆದರೂ ಮಹಾನಗರದಲ್ಲಿ ಯಕ್ಷಗಾನ ಅಭಿಮಾನಿಗಳ ಪ್ರೀತಿ, ವಿಶ್ವಾಸದಿಂದ ಯಕ್ಷಗಾನ ಕಲೆಗೆ ಎಲ್ಲಿಯೂ ದುರಂತವಾಗದು. ನಾವೆಲ್ಲ ಇಲ್ಲಿ ಕಲೆಗೆ ಗೌರವ ನೀಡುವ ವ್ಯಕ್ತಿಗಳಾಗಬೇಕು ಎಂದರು.
Related Articles
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮೋಹನ್ ಆರ್. ಗುಜರನ್ ಮಾತನಾಡಿ, ಧಾರ್ಮಿಕ ಕ್ಷೇತ್ರದ ಪ್ರಾರಂಭಿಕ ಅರ್ಚಕರ ಪ್ರೇರಣೆಯಿಂದ ಈ ಸಂಸ್ಥೆಯಲ್ಲಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು, ಜತೆಗೆ ಸದಾ ನನ್ನೊಂದಿಗೆ ಸಹಕರಿಸುತ್ತಿರುವ ಸದಸ್ಯರು, ಮಹಿಳಾ ವಿಭಾಗ, ಯುವಕರಿಂದ ಈ ಧಾರ್ಮಿಕ ಕ್ಷೇತ್ರ ಇಷ್ಟೊಂದು ಬೆಳವಣಿಗೆ ಕಾಣಲು ಸಾಧ್ಯವಾಯಿತು. ಮುಂದೆಯೂ ಇಲ್ಲಿ ಯಕ್ಷಗಾನ ಕಲೆ ಸದಾ ಹಸಿರಾಗಿಯೇ ಉಳಿಯಲಿ ಎಂದರು.
Advertisement
ಶ್ರೀ ಮಣಿಕಂಠ ಸೇವಾ ಸಮಿತಿಯ ಗೌರವಾಧ್ಯಕ್ಷ ಕರ್ನೂರು ಶಂಕರ ಆಳ್ವ, ವಸಾಯಿ ಕರ್ನಾಟಕ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ, ಉಪಾಧ್ಯಕ್ಷರಾದ ದೇವೇಂದ್ರ ಬುನ್ನನ್, ಮಾಜಿ ಅಧ್ಯಕ್ಷ ಓ. ಪಿ. ಪೂಜಾರಿ, ಶಾರದಾ ಹೈಸ್ಕೂಲ್ ಸಾಕಿನಾಕಾದ ಪ್ರಾಂಶುಪಾಲೆ ವನಿತಾ ಎಸ್. ಕುಮಾರ್ ಶುಭ ಹಾರೈಸಿದರು.
ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಬಾಲಚಂದ್ರ ಆರ್. ಶೆಟ್ಟಿ, ಚಂದ್ರಹಾಸ್ ಶೆಟ್ಟಿ ಉಜಿರೆ, ಶೇಖರ ವಿ. ಪೂಜಾರಿ, ಸುರೇಶ್ ಮಾರ್ಲ, ರಾಜೇಶ್ ಮೊಲಿ, ಮಹೇಶ್ ಶೆಟ್ಟಿ, ಸುನಿಲ್ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸ್ವರೂಪ್ ಆರ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಹೇಮಾ ಎಲ್. ಕೋಟ್ಯಾನ್ ಅವರು ಅತಿಥಿಗಳನ್ನು ಗೌರವಿಸಿದರು.
ವೇದಿಕೆಯಲ್ಲಿ ಕಲಾಪೋಷಕ ಜಗನ್ನಾಥ ಶೆಟ್ಟಿ, ಪ್ರಕಾಶ್ ಟಿ. ಆಳ್ವ, ಪ್ರಸಾದ್ ವಿ. ಶೆಟ್ಟಿ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಪ್ರಫುಲ್ಲಾ ಸುವರ್ಣ ಬಳಗದವರು ಪ್ರಾರ್ಥನೆಗೈದರು. ಸಮಾರಂಭದಲ್ಲಿ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಯ್ಯಪ್ಪ ಭಕ್ತ ಸುನಿಲ್ ಅಂಚನ್ ಸ್ವಾಮಿ ಹಾಗೂ ಕಳೆದ 18 ವರ್ಷಗಳಿಂದ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿರುವ ಮಂಜುನಾಥ ಶೆಟ್ಟಿ ದಂಪತಿಗಳನ್ನು ಸಮ್ಮಾನಿಸಲಾಯಿತು.
ಟ್ರಸ್ಟಿ, ಯಕ್ಷ ಗುರು ಕಟೀಲು ಸದಾನಂದ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಪ್ರಾರಂಭದಲ್ಲಿ ಇತ್ತೀಚೆಗೆ ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ಕಲಾವಿದರಿಂದ ರುಕಾ¾ಂಗದ ಚರಿತ್ರೆ ಯಕ್ಷಗಾನ ಪ್ರದರ್ಶನಗೊಂಡಿತು.
ಚಿತ್ರ-ವರದಿ: ರಮೇಶ್ ಉದ್ಯಾವರ