Advertisement
ಮಹಿಳಾ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ವರದಿಯಾಗುತ್ತಿರುವ ಜತೆಗೆ “ಸಖಿ’ಯ ನೆರವು ಪಡೆಯುವವರ ಸಂಖ್ಯೆಯೂ ಹೆಚ್ಚಳಗೊಂಡಿದೆ. ನೆರವು ಪಡೆದವರಲ್ಲಿ ಶೇ.65ರಷ್ಟು ಮಂದಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ವಯಸ್ಸಿನ ಯುವತಿಯರು.
ಮಂದಿಗೆ ನೆರವು
ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ವಯಸ್ಸಿನ ಯುವತಿಯರು ಅತ್ಯಧಿಕ ಸಂಖೆಯಲ್ಲಿ ಸಖಿಯ ನೆರವು ಪಡೆದಿದ್ದಾರೆ. ಉಳಿದಂತೆ ಕೌಟುಂಬಿಕ ಕಲಹಗಳಲ್ಲಿ ಹಾಗೂ ಇತರ ರೀತಿಯಲ್ಲಿ ದೌರ್ಜನ್ಯಕ್ಕೊಳಗಾಗಿ ನೊಂದವರಿಗೆ ನೆರವು ಒದಗಿಸಲಾಗಿದೆ. ಕೇಂದ್ರದಲ್ಲಿ ಒಟ್ಟು 2019ರ ಎಪ್ರಿಲ್‌ನಿಂದ 2020ರ ಮಾರ್ಚ್‌ವರೆಗೆ 121 ಮಹಿಳೆಯರಿಗೆ ವೈದ್ಯಕೀಯ, 42 ಮಹಿಳೆಯರಿಗೆ ಪೊಲೀಸ್, 87 ಮಹಿಳೆಯರಿಗೆ ಆಪ್ತ ಸಮಾಲೋಚನೆ, 38 ಮಹಿಳೆಯರಿಗೆ ಕಾನೂನು ನೆರವು, 5 ಮಂದಿಗೆ ತಾತ್ಕಾಲಿಕ ವಸತಿ ಒದಗಿಸಲಾಗಿದೆ. 2020ರ ಎಪ್ರಿಲ್‌ನಿಂದ 2021ರ ಮಾರ್ಚ್‌ವರೆಗೆ 129 ಮಹಿಳೆಯರಿಗೆ ವೈದ್ಯಕೀಯ, 9 ಮಹಿಳೆಯರಿಗೆ ಪೊಲೀಸ್, 128 ಮಹಿಳೆಯರಿಗೆ ಆಪ್ತ ಸಮಾಲೋಚನೆ, 71 ಮಹಿಳೆಯರಿಗೆ ಕಾನೂನು ನೆರವು, 11 ಮಂದಿಗೆ ತಾತ್ಕಾಲಿಕ ವಸತಿ ಒದಗಿಸಲಾಗಿದೆ. 2021ರ ಎಪ್ರಿಲ್‌ನಿಂದ 2021ರ ಡಿಸೆಂಬರ್‌ವರೆಗೆ 99 ಮಹಿಳೆಯರಿಗೆ ವೈದ್ಯಕೀಯ, 8 ಮಹಿಳೆಯರಿಗೆ ಪೊಲೀಸ್ ನೆರವು, 145 ಮಹಿಳೆಯರಿಗೆ ಆಪ್ತ ಸಮಾಲೋಚನೆ, 81 ಮಹಿಳೆಯರಿಗೆ ಕಾನೂನು ನೆರವು, 10 ಮಹಿಳೆಯರಿಗೆ ವಸತಿ ಒದಗಿಸಲಾಗಿದೆ.
Related Articles
“ಸಖಿ’ ಕೇಂದ್ರದಲ್ಲಿ ಓರ್ವ ಸೆಂಟರ್ ಅಡ್ಮಿನಿಸ್ಟ್ರೇಟರ್, ಓರ್ವ ಆಪ್ತ ಸಮಾಲೋಚಕಿ, ಓರ್ವ ಮಹಿಳಾ ಪೊಲೀಸ್ ಸಿಬಂದಿ, ಇಬ್ಬರು ಸಮಾಜ ಸೇವಾ ಕಾರ್ಯಕರ್ತರು, ಇಬ್ಬರು ಕಾನೂನು ಸಮಾಲೋಚಕರಿದ್ದು, ದಿನದ 24 ಗಂಟೆಯೂ ಸೇವೆ ದೊರೆಯುತ್ತದೆ. ದೌರ್ಜನ್ಯಕ್ಕೊಳಗಾದ ಮಹಿಳೆಗೆ ವೈದ್ಯಕೀಯ ತುರ್ತುಸೇವೆಗಳ ಅಗತ್ಯವಿದ್ದರೆ ತತ್‌ಕ್ಷಣ ವೈದ್ಯಕೀಯ ಪರೀಕ್ಷೆ, ಸಮಾಲೋಚನೆ ಮಾಡಲಾಗುತ್ತದೆ. ಪ್ರಥಮ ವರ್ತಮಾನ ವರದಿ ಬಗ್ಗೆ ಮಾಹಿತಿ, ಸಹಾಯ ನೀಡಲಾಗುತ್ತದೆ. 5 ದಿನಗಳವರೆಗೆ ತಾತ್ಕಾಲಿಕ ಆಶ್ರಯ ನೀಡಲಾಗುತ್ತದೆ. ಮಹಿಳೆಯ ಬಗ್ಗೆ ಗೌಪ್ಯತೆಯನ್ನು ಕಾಪಾಡಲಾಗುತ್ತದೆ. ನೆರವಿಗಾಗಿ ಮಹಿಳಾ ಸಹಾಯವಾಣಿ 181 ಅಥವಾ 7259107284 ಸಂಪರ್ಕಿಸಬಹುದಾಗಿದೆ.
Advertisement
ನೆರವು ಪಡೆಯುವವರ ಸಂಖ್ಯೆ ಹೆಚ್ಚಳ“ಸಖಿ’ ಸೆಂಟರ್‌ನಿಂದ ನೆರವು ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ಅಧಿಕವಾಗಿದೆ. ಒಂದೇ ಸೂರಿನಡಿ ದಿನದ 24 ಗಂಟೆಯೂ ವಿವಿಧ ರೀತಿಯ ನೆರವು ಒದಗಿಸಲಾಗುತ್ತಿದೆ..
-ಪಾಪ ಬೋವಿ,
ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ತುರ್ತು ನೆರವು ಅತ್ಯಗತ್ಯ
ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯುವುದು ಅಗತ್ಯ. ಒಂದು ವೇಳೆ ದೌರ್ಜನ್ಯಕ್ಕೊಳಗಾದರೆ ಅವರಿಗೆ ಸಕಾಲದಲ್ಲಿ ಅಗತ್ಯ ನೆರವು ಒದಗಿಸುವುದು ಕೂಡ ಅಷ್ಟೇ ಅಗತ್ಯ. ಈ ನಿಟ್ಟಿನಲ್ಲಿ “ಸಖಿ” ನೊಂದವರಲ್ಲಿ ಹೊಸ ಭರವಸೆ, ಧೈರ್ಯ ಮೂಡಿಸುವ ಕೆಲಸ ಮಾಡುತ್ತಿದೆ.
–ಡಾ| ದುರ್ಗಾಪ್ರಸಾದ್,
ವೈದ್ಯಕೀಯ ಅಧೀಕ್ಷಕರು, ಲೇಡಿಗೋಶನ್ ಆಸ್ಪತ್ರೆ - ಸಂತೋಷ್ ಬೊಳ್ಳೆಟ್ಟು