Advertisement

Sakhi Kendra: “ಸಖಿ’ʼ ಕೇಂದ್ರದಲ್ಲಿ ಕೌಟುಂಬಿಕ ದೌರ್ಜನ್ಯದ್ದೇ ಸಿಂಹಪಾಲು

09:31 AM Mar 23, 2024 | Team Udayavani |

ಬೆಂಗಳೂರು: ಕೌಟುಂಬಿಕ ಕಲಹ, ಮಾನಸಿಕ ಹಿಂಸೆ, ವರದಕ್ಷಿಣೆ, ಅಪಹರಣ ಸೇರಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಆಶ್ರಯವಾಗಿರುವ “ಸಖಿ’ ಒನ್‌ ಸ್ಟಾಪ್‌ ಕೇಂದ್ರದಲ್ಲಿ ಕೌಂಟುಂಬಿಕ ದೌರ್ಜನ್ಯ ಪ್ರಕರಣಗಳೇ ಹೆಚ್ಚು ದಾಖಲಾಗಿವೆ.

Advertisement

ಮಕ್ಕಳ ಮೇಲಿನ ದೌರ್ಜನ್ಯ (ಪೋಕ್ಸೋ), ಕೌಟುಂಬಿಕ ದೌರ್ಜ ನ್ಯ, ಬಾಲ್ಯ ವಿವಾಹ, ಸೈಬರ್‌ ಕ್ರೈಂ, ಸುಡುವ ಪ್ರಕರಣ, ಅಪಹರಣ, ಲೈಂಗಿಕ ಕಿರುಕುಳ, ಆ್ಯಸಿಡ್‌ ದಾಳಿ ಹೀಗೆ ಹಲವು ಪ್ರಕರಣಗಳು ದಾಖ ಲಾಗುತ್ತಿವೆ. ಇದರಲ್ಲಿ ವರದಕ್ಷಿಣೆ, ಆಸ್ತಿ ಹಾಗೂ ಕುಟುಂಬ ದಲ್ಲಿ ಹೊಂದಾಣಿಕೆ ಸೇರಿ ವಿವಿಧ ಕಾರಣಗಳಾಗಿ ಮಾನಸಿಕ, ದೈಹಿಕ, ಹಣಕಾಸು ಹಾಗೂ ಲೈಂಗಿಕ ದೌರ್ಜ ನ್ಯಗಳಿಗೆ ಒಳಗಾದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕಳೆದ ಡಿಸೆಂಬರ್‌ನಿಂದ ಫೆಬ್ರವರಿ ತಿಂಗಳವರೆಗೆ ಒಟ್ಟು 90 ದಿನಗಳಲ್ಲಿ 85 ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿರುವ ಪ್ರಕರಣಗಳು ದಾಖ ಲಾಗಿವೆ. ಕುಟುಂಬ ಕಲಹ ಪ್ರಕರಣ ಗಳನ್ನು ಹೊರತು ಪಡಿಸಿದರೆ, 21 ಮಕ್ಕಳ ಮೇಲಿನ ದೌರ್ಜನ್ಯ (ಪೋಕೊÕà), ಒಂದು ಬಾಲ್ಯ ವಿವಾ ಹ, ಎರಡು ಸೈಬರ್‌ ಕ್ರೈಂ, ಒಂದು ವರದಕ್ಷಿಣೆ, ಒಂದು ಸುಟ್ಟಿರುವ ಪ್ರಕರಣ, 26 ಅಪಹರಣ ಹಾಗೂ 18 ಇತರೆ ಪ್ರಕರಣ ಸೇರಿ 155 ಪ್ರಕರಣಗಳು ಮೂರು ತಿಂಗಳಲ್ಲಿ ವರದಿಯಾಗಿವೆ. ನಿರ್ಭಯಾ ನಿಧಿ ಯೋಜನೆ ಯಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಬೆಂಗ ಳೂರು ನಗರ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಸ್ಥಾಪಿಸಿರುವ ನಿರ್ಭಯ ಕೇಂದ್ರ “ಸಖಿ’ ಒನ್‌ ಸ್ಟಾಪ್‌ ಸೆಂಟರ್‌ನಲ್ಲಿ ನಿತ್ಯ ಎರಡ ರಿಂದ 5 ಪ್ರಕರಣಗಳು ದಾಖಲಾಗುತ್ತಿವೆ. ಈ ಕೇಂದ್ರಕ್ಕೆ ಬರುವವರಲ್ಲಿ ಕೌಟುಂಬಿಕ ಹಿಂಸೆಯಿಂದ ಬಳಲು ತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿ ವಸತಿ ಕೋರಿ ಬಂದವರಿಗೆ 5 ದಿನಗಳ ಕಾಲ ಊಟ ಹಾಗೂ ವೈದ್ಯಕೀಯ ವ್ಯವಸ್ಥೆ ಸಹಿತ ಉಳಿದು ಕೊಳ್ಳುವ ಅವಕಾಶ ಕಲ್ಪಿಸಲಾ ಗುತ್ತಿದೆ. ಕೌನ್ಸೆಲಿಂಗ್‌ ಮಾಡಿದ ನಂತರ ಮನೆಗೆ ಹೋಗಲು ಇಚ್ಛಿಸಿದರೆ ಕಳುಹಿಸಲಾಗುತ್ತದೆ. ಇಲ್ಲದಿದ್ದರೆ ಅವರ ಸಮಸ್ಯೆಗಳಿಗೆ ಅನುಗುಣ ವಾಗಿ ಮತ್ತು ರಕ್ಷಣೆಗಾಗಿ ಸಂತ್ರಸ್ತರ ನ್ನು ಸ್ವಾಧಾರ ಗೃಹಗಳಿಗೆ ಕಳುಹಿಸಿ ಕೊಡಲಾಗುತ್ತದೆ ಎಂದು “ಸಖಿ’ ಒನ್‌ ಸ್ಟಾಪ್‌ ಕೇಂದ್ರದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಕಾನೂನು ಸಲಹೆ, ವೈದ್ಯಕೀಯ ಚಿಕಿತ್ಸೆ, ಪೊಲೀಸ್‌ ನೆರವು, ಆಪ್ತಸಮಾಲೋಚನೆ, ತಾತ್ಕಾಲಿಕ ಆಶ್ರಯ ಮತ್ತು ರಕ್ಷಣೆ ನೀಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಕುಟುಂಬ ಕಲಹಕ್ಕೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚು ದಾಖಲಾಗಿವೆ. ಅದರಲ್ಲೂ ಮಾನಸಿಕ ಹಿಂಸೆಗೆ ಒಳಗಾದವರ ಸಂಖ್ಯೆ ಅತ್ಯಧಿಕವಾಗಿದೆ. ಬಹುತೇಕ ಪ್ರಕರಣಗಳಿಗೆ ಪರಿಹಾರ ನೀಡಿ, ಕುಟುಂಬಸ್ಥರೊಂದಿಗೆ ಕಳುಹಿಸಿಕೊಡಲಾಗಿದೆ. ಕೇವಲ ಶೇ.1 ಮಹಿಳೆಯರನ್ನು ಸ್ವಾಧಾರ ಗೃಹಗಳಿಗೆ ಕಳುಹಿಸಿಕೊಡಲಾಗಿದೆ.-ಎಚ್‌.ಆರ್‌.ಅಮಿತಾ ಆತ್ರೇಶ್‌, ಘಟಕ ಆಡಳಿತಾಧಿಕಾರಿ, “ಸಖಿ’ ಒನ್‌ ಸ್ಟಾಪ್‌ ಸೆಂಟರ್‌.

– ಭಾರತಿ ಸಜ್ಜನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next