Advertisement

ಐತಿಹಾಸಿಕ ಸಕಲೇಶ್ವರಸ್ವಾಮಿ ರಥೋತ್ಸವ ವೈಭವ

04:15 PM Mar 21, 2022 | Team Udayavani |

ಸಕಲೇಶಪುರ: ಸಕಲೇಶ್ವರಸ್ವಾಮಿ ದಿವ್ಯ ರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿ ಯಾಗಿ ಜರುಗಿತು. ರಾಜ್ಯದ ಅತ್ಯಂತ ಹಳೆಯ ದೇಗುಲಗಳಲ್ಲಿ ಒಂದಾಗಿರುವ ಸಕಲೇಶ್ವರಸ್ವಾಮಿ ದೇವರಿಗೆ ಪ್ರತಿ ವರ್ಷ ರಥೋತ್ಸವ ಫೆಬ್ರವರಿ ತಿಂಗಳಿನಲ್ಲಿ ನಡೆಯುವುದು ವಾಡಿಕೆಯಾಗಿದ್ದು, ಆದರೆ, ಕೋವಿಡ್‌ ಹಿನ್ನೆಲೆ ಈ ಬಾರಿ ರಥೋತ್ಸವ ಒಂದು ತಿಂಗಳು ತಡವಾಗಿ ನಡೆಯಿತು.

Advertisement

ಸಕಲೇಶ್ವರಸ್ವಾಮಿ ಜಾತ್ರೋತ್ಸವದ ಅಂಗವಾಗಿ ಬುಧವಾರ ದಿಂದಲೇ ಸಕಲೇಶ್ವರಸ್ವಾಮಿ ದೇವಸ್ಥಾನ ದಲ್ಲಿ ವಿವಿಧ ಪೂಜೆ ಕೈಂಕರ್ಯ ಆರಂಭಗೊ ಂಡಿದ್ದು, ಗುರುವಾರ ದೇವಸ್ಥಾನದಲ್ಲಿ ಗಿರಿಜಾ ಕಲ್ಯಾಣ ಕಾರ್ಯಕ್ರಮ ನಡೆದಿದೆ. ಶುಕ್ರವಾರ ಸಕಲೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಬ್ರಾಹ್ಮಣರ ಬೀದಿಯಲ್ಲಿ ಮೆರವಣಿಗೆ ನಡೆಸಿದರು.

ನಂತರ ಘಳಿಗೆ ತೇರನ್ನು ಎಳೆಯಲಾಗಿತ್ತು. ರಥೋತ್ಸವ ಸಂಭ್ರಮ: ಶನಿವಾರ ನಡೆದ ವಿವಿಧ ಪೂಜೆ ಕಾರ್ಯಗಳ ನಂತರ 12 ಗಂಟೆಗೆ ಸರಿಯಾಗಿ ದಿವ್ಯ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬ್ರಾಹ್ಮಣರ ಬೀದಿ ಮೂಲಕ ಮುಖ್ಯರಸ್ತೆಯಲ್ಲಿ ಪುರಸಭೆ ತೇರನ್ನು ಎಳೆದು ನಂತರ ಸಂಜೆ ಏಳು ಗಂಟೆಗೆ ಹೊತ್ತಿಗೆ ರಥವನ್ನು ದೇವಸ್ಥಾನಕ್ಕೆ ಹಿಂತಿರುಗಿದರು. ಎಳೆದು ತಂದು ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ ಸಾವಿರಾರು ಭಕ್ತಾಧಿಗಳು ಹಣ್ಣುಕಾಯಿ, ಇಡುಗಾಯಿ ಒಡೆದು ಪುನೀತರಾದರೆ, ಮುಖ್ಯ ಬೀದಿಯ ಹಲವರು ರಥಕ್ಕೆ ಆರತಿ ಬೆಳಗುವ ಮೂಲಕ ಸ್ವಾಗತಿಸಿದರು.

ಯುವಕರು ರಥದ ಮೇಲೆ ಬಾಳೆಹಣ್ಣು ಬೀರಿ ಸಂತ ಪಟ್ಟರು. ಅನ್ನಸಂತರ್ಪಣೆ ಮಾಡಲಾಯಿತು: ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಪುರಸಭೆಯವರಗೆ ಹಲವೆಡೆ ವಿವಿಧ ಸಂಘ- ಸಂಸ್ಥೆಗಳಿಂದ ಅನ್ನಸಂತರ್ಪಣೆ, ಮಜ್ಜಿಗೆ, ಐಸ್‌ಕ್ರೀಮ್‌, ಕೇಸರಿ ಬಾತ್‌ ಹಾಗೂ ತಂಪು ಪಾನೀಯ ವಿತರಣೆ ಮಾಡಲಾಯಿತು. ಒಂದು ವಾರದಿಂದ ಸುಡುಬಿಸಿಲಿದ್ದು ಜನತೆ ತತ್ತರಿಸಿದ್ದರು. ಆದರೆ ಶನಿವಾರ ಮುಂಜಾನೆಯೆ ಮಳೆ ಸುರಿದಿದ್ದರಿಂದ ವಾತಾವರಣ ತುಸು ತಂಪಾಗಿತ್ತು. ಇದರಿಂದ ರಥೋತ್ಸವದಲ್ಲಿ ಜನ ಉತ್ಸಾಹದಿಂದ ಪಾಲ್ಗೊಂಡಿದ್ದರು.

ದೇಗುಲಕ್ಕೆ ಆಕರ್ಷಕ ಅಲಂಕಾರ: ದೇವಸ್ಥಾನವನ್ನು ಕಳೆದ ಒಂದುವಾರದಿಂದ ವಿದ್ಯುತ್‌ ದೀಪಗಳಿಂದ ಸಿಂಗಾರ ಭಕ್ತರನ್ನು ಆಕರ್ಷಿಸಿತು. ಡ್ರೋನ್‌ ಕ್ಯಾಮೆರದ ಮುಖಾಂತರ ರಥೋತ್ಸವದ ಚಿತ್ರೀಕರಣ ಮಾಡುತ್ತಿರುವುದು ಅಲ್ಲಲ್ಲಿ ಕಂಡು ಬಂದರೆ, ರಥದ ಜೊತೆ ಸೆಲ್ಫಿ ಹಾಗೂ ಪೋಟೋ ತೆಗೆಸಿಕೊಳ್ಳಲು ಭಕ್ತಾಧಿಗಳು ಮುಗಿ ಬೀಳುತ್ತಿರುವುದು ಕಂಡು ಬರುತ್ತಿತ್ತು. ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಪಟ್ಟಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Advertisement

ಲಾಡು ಪ್ರಸಾದ ವಿತರಣೆ: ಕಾಂಗ್ರೆಸ್‌ ಮುಖಂಡರಾದ ಡಾ.ಪುಷ್ಪಾ ಅಮರ್‌ನಾಥ್‌ ಭಕ್ತಾದಿಗಳಿಗೆ ಲಾಡು ಹಂಚುವ ಮುಖಾಂ ತರ ಗಮನ ಸೆಳೆದರೆ, ಮತ್ತೋರ್ವ ಕಾಂಗ್ರೆಸ್‌ ಮುಖಂಡ ಭಕ್ತಾದಿಗಳಿಗೆ ಸಕಲೇಶ್ವರಸ್ವಾಮಿ ಜೊತೆಗೆ ತಮ್ಮ ಫೋಟೋ ಇರುವ ಕ್ಯಾಲೆಂಡರ್‌ ಹಂಚುವ ಮುಖಾಂತರ ಗಮನ ಸೆಳೆದರು. ತಾಲೂಕಿನಿಂದ ಹೊರ ಹೋಗಿ ಹೊರ ಊರುಗಳಲ್ಲಿ ನೆಲೆಸಿರುವ ಊರಿನ ಮೂಲನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಥೋತ್ಸವವನ್ನು ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next