ಸಕಲೇಶಪುರ : ಒಂಬತ್ತು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾದ ಯುವತಿಯೋರ್ವಳು ಹೇಮಾವತಿ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪೂಜಾ (20 ವರ್ಷ) ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದು ಮೂಲತ:ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ತಾಲೂಕಿನ ಶ್ರವಣಬೆಳಗೋಳ ಹೋಬಳಿ ಚೋಳನಹಳ್ಳಿ ಸಮೀಪದ ಬೆಕ್ಕ ಗ್ರಾಮದ ಕೆಂಪೇಗೌಡ ಹಾಗೂ ಜಯಮ್ಮ ಎಂಬುವರ ಪುತ್ರಿ ಎಂದು ತಿಳಿದು ಬಂದಿದೆ.
ತಾಲೂಕಿನ ರಾಮೇನಹಳ್ಳಿ ಮೂಲದ ಅಶ್ವಥ್ ಎಂಬಾತ ಸುಮಾರು 9 ತಿಂಗಳ ಹಿಂದೆ ನಾನು ಮತ್ತು ಪೂಜಾ ಪ್ರೀತಿಸುತ್ತಿದ್ದೇವೆ ಎಂದು ಹುಡುಗಿಯ ಮನೆಗೆ ಹೋಗಿ ಬೇರೆ ಹುಡುಗನ ಜೊತೆಗೆ ಹುಡುಗಿಗೆ ನಿಶ್ಚಿತಾರ್ಥ ಆಗಿದನ್ನು ರದ್ದು ಮಾಡಿಸಿಕೊಂಡು ಮದುವೆ ಆಗಿದ್ದು ಮದುವೆಯ ನಂತರ ಗಂಡ ಹೆಂಡತಿ ಅನೋನ್ಯವಾಗಿಯೆ ಇದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಸಚಿವ ಸ್ಥಾನಕ್ಕೆ ತೃಪ್ತಿ ಪಟ್ಟ ನಿರಾಣಿ|ಸವದಿ-ದೊಡ್ಡನಗೌಡ-ಚರಂತಿಮಠ ಬೆಂಬಲಿಗರಲ್ಲಿ ನಿರಾಶೆ
ಆದರೆ ಕಳೆದ ಒಂದು ತಿಂಗಳ ಹಿಂದೆ ಗಂಡ ಹಾಗೂ ಹೆಂಡತಿ ನಡುವೆ ಕೆಲವೊಂದು ಮನಸ್ತಾಪಗಳು ಬಂದಿದೆ ಎಂದು ಹೇಳಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ರಾಜೀ ಪಂಚಾಯತಿ ಮಾಡಲು ಯುವತಿಯ ಕುಟುಂಬದವರು ಇಂದು ರಾಮೇನಹಳ್ಳಿ ಗ್ರಾಮದಲ್ಲಿರುವ ಯುವಕನ ಮನೆಗೆ ಬಂದಿದ್ದರು. ಈ ವೇಳೆ ಹುಡುಗಿಯ ಮನೆಯವರು ಹಲ್ಲೆ ಮಾಡುತ್ತಾರೆಂದು ಹೆದರಿ ಆಶ್ವಥ್ ಮನೆಯಿಂದ ಹೊರ ಹೋಗಿದ್ದು ಈಸಂದರ್ಭದಲ್ಲಿ ಪೂಜಾ ಹಲವು ಬಾರಿ ಅಶ್ವಥ್ ಗೆ ದೂರವಾಣಿ ಮುಖಾಂತರ ಕರೆ ಮಾಡಿದರು ಸಹ ಆತ ಸಂಧಾನಕ್ಕೆ ಬರಲು ಒಲ್ಲದ ಕಾರಣ ಅಂತಿಮವಾಗಿ ಮೊಬೈಲ್ ಮುಖಾಂತರ ಇದು ನನ್ನ ಕೊನೆಯ ಸಂದೇಶ ಎಂದು ಪೂಜಾ, ಅಶ್ವಥ್ ಗೆ ಮೆಸೆಜ್ ಕಳುಹಿಸಿ ಪಟ್ಟಣದ ಹೇಮಾವತಿ ನದಿಗೆ ನಿರ್ಮಿಸಲಾಗಿರುವ ಹಳೇ ಸೇತುವೆ ಮುಖಾಂತರ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು, ಈ ವೇಳೆ ಅಶ್ವಥ್ ಸ್ನೇಹಿತನೋರ್ವ ಈಕೆಯನ್ನು ಹಿಂಬಾಲಿಸಿಕೊಂಡು ಬಂದು ಆಕೆಯನ್ನು ಕಾಪಾಡಲು ಯತ್ನಿಸಿದ್ದರು ಸಹ ಆತ ವಿಫಲನಾಗಿದ್ದು ಆಕೆ ಮೊಬೈಲ್ ಬಿಸಾಡಿ ಹೇಮಾವತಿ ನದಿಗೆ ಹಾರಿದ್ದಾಳೆ ಎಂದು ಹೇಳಲಾಗುತ್ತಿದೆ.
ಯುವತಿಯ ಸಂಬಂಧಿಕರು ಯುವಕನ ಕುಟುಂಬದವರು ಯುವತಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಒಟ್ಟಾರೆಯಾಗಿ ಬಾಳಿ ಬದುಕಬೇಕಾಗಿದ್ದು ಯುವತಿ ಆತ್ಮಹತ್ಯೆಗೆ ಶರಣಾಗಿರುವುದು ದುರಂತವಾಗಿದೆ. ಪಟ್ಟಣ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವತಿಯ ಶವ ಹುಡುಕಲು ತಾಲೂಕು ಆಡಳಿತದ ಪರದಾಟ: ಮಳೆಗಾಲವಾಗಿರುವುದರಿಂದ ಹೇಮಾವತಿ ನದಿ ತೀರದಲ್ಲಿ ವ್ಯಾಪಕ ನೀರು ಹರಿಯುತ್ತಿದ್ದು ಇದರಿಂದ ಯುವತಿಯ ಶವ ಸ್ಥಳದಲ್ಲಿ ಇರದೆ ಮುಂದಕ್ಕೆ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದವರು ಯುವತಿಯ ಶವವನ್ನು ಬೋಟ್ ಮುಖಾಂತರ ಹುಡುಕುತ್ತಿದ್ದು ಸುರಿಯುವ ಮಳೆಯಲ್ಲಿ ಶವ ಹುಡುಕಲು ಹರ ಸಾಹಸ ಮಾಡಬೇಕಾಗಿದೆ.
ಇದನ್ನೂ ಓದಿ : Flood:ಗ್ರಾಮಸ್ಥರನ್ನು ರಕ್ಷಿಸಲು ಹೋಗಿ ಅಪಾಯಕ್ಕೆ ಸಿಲುಕಿದ ಸಚಿವ,ಹೆಲಿಕಾಪ್ಟರ್ ಮೂಲಕ ರಕ್ಷಣೆ