ಸಕಲೇಶಪುರ: ಜನಸಾಮಾನ್ಯರು ತಿರುಗಾಡುವ ಕಚೇರಿಗಳನ್ನು ಸ್ವಚ್ಛತವಾಗಿಟ್ಟುಕೊಳ್ಳುವುದು ಅಧಿಕಾರಿ ಗಳ ಕರ್ತವ್ಯ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಹೇಳಿದರು.
ಮಿನಿ ವಿಧಾನಸೌಧ, ಉಪವಿಭಾಗಾಧಿಕಾರಿ ಕಚೇರಿ, ಪುರಸಭಾ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದ ನಂತರ ಮಾತನಾಡಿದರು.
ಮೂಲ ಸೌಕರ್ಯ ಕಲ್ಪಿಸಿ: ನಾನು ಹಾಸನ ಜಿಲ್ಲಾಧಿ ಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ತಾಲೂ ಕಿಗೆ ಪ್ರಪ್ರಥಮವಾಗಿ ಭೇಟಿ ನೀಡಿದ್ದೇನೆ. ಸರ್ಕಾರಿ ಕಚೇರಿಗಳು ಜನ ಸ್ನೇಹಿಯಾಗಿರಬೇಕು ಹಾಗೂ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಹೊಂದಿರ ಬೇಕು ಇದರಿಂದ ಮಾತ್ರ ಆಡಳಿತಕ್ಕೆ ವೇಗ ನೀಡಲು ಸಾಧ್ಯ ಎಂದರು.
ಮಿನಿ ವಿಧಾನಸೌಧ ಕಟ್ಟಡ ವಿಸ್ತರಣೆ: ಈ ಹಿನ್ನೆಲೆ ಯಲ್ಲಿ ಪ್ರಮುಖ 3 ಸರ್ಕಾರಿ ಕಚೇರಿಗಳನ್ನು ನಾನು ಪರಿಶೀಲಿಸಿದ್ದೇನೆ. ಮಿನಿವಿಧಾನಸೌಧ ಕಟ್ಟಡ ಸುಸಜ್ಜಿತ ವಾಗಿದೆ ಆದರೆ ರೆಕಾರ್ಡ್ ರೂಮ್, ಮೀಟಿಂಗ್ ಹಾಲ್ ಸೇರಿದಂತೆ ಇನ್ನು ಹಲವು ಬೇಡಿಕೆಗಳು ಇಲ್ಲಿದ್ದು, ಅಗತ್ಯಕ್ಕೆ ತಕ್ಕಂತೆ ಕಟ್ಟಡದ ವಿಸ್ತೀರ್ಣ ಸಾಕಾ ಗಾದ ಹಿನ್ನೆಲೆಯಲ್ಲಿ ಅಂತಸ್ತಿನಲ್ಲಿ ಕಟ್ಟಡ ವಿಸ್ತರಣೆ ಮಾಡಲು ಯೋಜಿಸಲಾಗಿದೆ. ಈಗಾಗಲೇ ಹಾಸನ ತಾಲೂಕಿನ ಮಿನಿವಿಧಾನಸೌಧ ಕಟ್ಟಡ ವಿಸ್ತರಣೆಗೆ ಸರ್ಕಾರ ಹಣ ಬಿಡುಗಡೆ ಮಾಡಿದ್ದು ಸಕಲೇಶಪುರ ಹಾಗೂ ಆಲೂರಿನಲ್ಲಿ ಎರಡನೇ ಹಂತದ ಕಟ್ಟಡವನ್ನು ವಿಸ್ತರಣೆ ಮಾಡಲು ಸರ್ಕಾರಕ್ಕೆ ನೀಲನಕ್ಷೆ ಕಳುಹಿಸ ಲಾಗಿದೆ. ಸರ್ಕಾರದಿಂದ ಅನುಮತಿ ಹಾಗೂ ಅನು ದಾನ ಬಿಡುಗಡೆಯಾದ ನಂತರ ಎರಡನೇ ಹಂತದ ಕಟ್ಟಡವನ್ನು ಆರಂಭಿಸಲಾಗುವುದು. ಉಪವಿಭಾಗಾ ಧಿಕಾರಿ ಕಚೇರಿ ಹಾಗೂ ಪುರಸಭಾ ಕಟ್ಟಡಕ್ಕೂ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಭೂ ಮಂಜೂರಾತಿ ಅಕ್ರಮ ತನಿಖೆ: ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಪ್ರಕರಣ ನ್ಯಾಯಾಲಯ ದಲ್ಲಿದ್ದು ನ್ಯಾಯಾಲಯದ ತೀರ್ಪಿನಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಎಚ್.ಆರ್.ಪಿ ಭೂ ಮಂಜೂರಾತಿಯ ಅಕ್ರಮದ ಕುರಿತು ತನಿಖಾ ಸಮಿತಿ ವತಿಯಿಂದ ತನಿಖೆ ಮಾಡಿಸಲಾಗಿದ್ದು ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ವರ್ತಕರಿಗೆ ನಿರಾಸೆ: ಪಟ್ಟಣದ ಮುಖ್ಯರಸ್ತೆ ಅಗಲೀಕರಣದ ಕುರಿತು ವರ್ತಕರು ಜಿಲ್ಲಾಧಿಕಾರಿ ಗಳನ್ನು ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ಭೇಟಿ ಮಾಡಲು ಕಾದು ಕುಳಿತಿದ್ದರು. ಆದರೆ ಪ್ರಕರಣ ನ್ಯಾಯಾಲಯದಲ್ಲಿದ್ದು ಜಿಲ್ಲಾಧಿಕಾರಿಗಳು ಭೇಟಿಗೆ ನಿರಾಕರಿಸಿದ ಕಾರಣ ವರ್ತಕರು ನಿರಾಸೆಯಿಂದ ಹಿಂತಿರುಗಿದರು.
ಮನವಿ ಸ್ವೀಕಾರ: ಪಟ್ಟಣದ ಮಿನಿವಿಧಾನಸೌಧದಲ್ಲಿ ನಿವೃತ್ತ ಮಾಜಿ ಸೈನಿಕರ ಸಂಘ ಹಾಗೂ ಹಾಸನ ಜಿಲ್ಲಾ ಬೆಳೆಗಾರರ ಸಂಘದ ವತಿಯಿಂದ ನೀಡಿದ ಮನವಿ ಯನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ, ತಹಶೀಲ್ದಾರ್ ರಕ್ಷಿತ್, ಪುರಸಭಾ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಪುರಸಭಾ ಮುಖ್ಯಾಧಿಕಾರಿ ವಿಲ್ಸನ್, ಶಿರಸ್ತೇದಾರ್ ರಮೇಶ್ ಹಾಜರಿದ್ದರು.