Advertisement

ಕಾರವಾರ ಮೆಡಿಕಲ್ ಕಾಲೇಜು ಮುಖ್ಯ ಆಡಳಿತಾಧಿಕಾರಿಯಾಗಿ ಸಾಜಿದ್ ಮುಲ್ಲಾ ನೇಮಕ

07:07 PM Apr 30, 2021 | Team Udayavani |

ಕಾರವಾರ : ಸಾಜಿದ್ ಅಹಮದ್ ಮುಲ್ಲಾ ಅವರನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ( ಮೆಡಿಕಲ್ ಕಾಲೇಜಿನ ) ಮುಖ್ಯ ಆಡಳಿತಾಧಿಕಾರಿಯನ್ನಾಗಿ ರಾಜ್ಯ ಸರಕಾರ ನೇಮಕ ಮಾಡಿದೆ.

Advertisement

ಕೆಎಎಸ್ ಅಧಿಕಾರಿಯಾಗಿರುವ ಸಾಜಿದ್ ಅಹಮದ್ ಮುಲ್ಲಾ ಅವರು ಸರಕಾರದ ಮುಂದಿನ ಆದೇಶದವರೆಗೆ ಮುಖ್ಯ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದು, ಏ. 30ರಂದು ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಗಜಾನನ ನಾಯ್ಕ ಅವರು ತಿಳಿಸಿದ್ದಾರೆ.

ಸಾಜಿದ್ ಮುಲ್ಲಾ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊನ್ನಾವರ ವಿಭಾಗದ ವಿಶೇಷ ಭೂಸ್ವಾಧೀನಾಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಕರ್ತವ್ಯದ ಜೊತೆಗೆ ಮೆಡಿಕಲ್ ಕಾಲೇಜು , ಅದರ ಅಧೀನ ಆಸ್ಪತ್ರೆಯ ಆಡಳಿತ ನೋಡಿಕೊಳ್ಳಲಿದ್ದಾರೆ.

ಇದನ್ನೂ ಓದಿ :ಕೋವಿಡ್ ಬಿಕ್ಕಟ್ಟು : ಭಾರತದ ಪರಿಸ್ಥಿತಿ ಎಲ್ಲಿ ಬೇಕಾದರೂ ಆಗಬಹುದು :  WHO ಎಚ್ಚರಿಕೆ

Advertisement

Udayavani is now on Telegram. Click here to join our channel and stay updated with the latest news.

Next