ಚಿತ್ತಾಪುರ: ತಮ್ಮ ಜೀವನಕ್ಕಿಂತ ಇಡೀ ವಿಶ್ವವನ್ನೆ ಉದ್ಧಾರ ಮಾಡಲು ಬದುಕಿದ ಸಂತರಲ್ಲಿ ಸೇವಾಲಾಲರು ಒಬ್ಬರಾಗಿದ್ದಾರೆ ಎಂದು ಕಂಬಳೇಶ್ವರ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರು ಹೇಳಿದರು.
ಪಟ್ಟಣದ ತಹಶೀಲ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವ ಸಮಾಜಗಳ ಹಾಗೂ ಲೋಕ ಕಲ್ಯಾಣಕ್ಕಾಗಿ ಹಗಲಿರಳು ಅವರು ಶ್ರಮಿಸಿದ್ದರು. ಇಂದು ಬಂಜಾರ ಸಮಾಜದವರು ಪರಿವರ್ತನೆಯಾಗಿ ಉತ್ತಮ ಹಾದಿಯತ್ತ ಹೆಜ್ಜೆ ಹಾಕಿದ್ದಾರೆ ಎಂದರು.
ತಾಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಜಿಪಂ ಸದಸ್ಯ ಶಿವರುದ್ರ ಭೀಣಿ, ಶಂಕರ ಚವ್ಹಾಣ ಮಾತನಾಡಿದರು. ಗ್ರೇಡ್-2 ತಹಶೀಲ್ದಾರ್ ರವೀಂದ್ರ ದಾಮಾ ಉದ್ಘಾಟಿಸಿದರು. ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಪ್ರಕಾಶ ರಾಠೊಡ ಉಪನ್ಯಾಸ ನೀಡಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೊತಿನಮಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ತಾಪಂ ಉಪಾಧ್ಯಕ್ಷ ಹರಿನಾಥ ಚವ್ಹಾಣ, ಮುಖಂಡರಾದ ಗೋಪಾಲ ರಾಠೊಡ, ರಾಮದಾಸ ಚವ್ಹಾಣ, ತುಕಾರಾಮ ನಾಯಕ, ಸಾಬಣ್ಣ ಕಾಶಿ, ಅಶ್ವಥ ರಾಠೊಡ, ಶಂಕರ ಚವ್ಹಾಣ, ಭೀಮಸಿಂಗ್ ಚವ್ಹಾಣ, ನೀಲಕಂಠ ಪವಾರ, ಕಾಶಿನಾಥ ಗುತ್ತೇದಾರ, ಶೇಖ ಬಬ್ಲು, ಬಸವರಾಜ ಚಿಮನಳ್ಳಿ, ರಾಮು ರಾಠೊಡ, ನಾಮದೇವ ರಾಠೊಡ, ವಿನೋದ ಪವಾರ್, ನಾಗರಾಜ ಕಡಬೂರ, ಹೀರು ರಾಠೊಡ, ಭೀಮು ಚವ್ಹಾಣ, ಗೋವಿಂದ ನಾಯಕ್, ಪ್ರಕಾಶ ರಾಠೊಡ, ಸೀತಾಬಾಯಿ, ಸಾಬಣ್ಣ, ವೆಂಕಟೇಶ ಕುಲಕರ್ಣಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಾಲೇಂದ್ರ ಗುಂಡಪ್ಪ ಇದ್ದರು. ಪೋಮು ರಾಠೊಡ ಸ್ವಾಗತಿಸಿದರು. ಪಿ.ಆರ್. ಪಾಂಡು ನಿರೂಪಿಸಿ, ವಂದಿಸಿದರು.
ಮೆರವಣಿಗೆ
ಸಂತ ಸೇವಾಲಾಲರ ಭಾವಚಿತ್ರದ ಮೆರವಣಿಗೆಯು ತಹಶೀಲ್ ಕಚೇರಿಯಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶೀಲ್ ಕಚೇರಿಗೆ ತಲುಪಿತು. ತಹಶೀಲ್ದಾರ್ ಮಲ್ಲೇಶಾ ತಂಗಾ ಮೆರವಣಿಗೆಗೆ ಚಾಲನೆ ನೀಡಿದರು. ಸುಮಂಗಲೆಯರಿಂದ ಕುಂಭ ಮೇಳ, ಮಹಿಳೆಯರಿಂದ ಲಂಬಾಣಿ ನೃತ್ಯ, ಲೇಜಿಮ ಜನಮನ ಸೆಳೆಯಿತು.