Advertisement
ಅಭಿಮಾನಿ ಬಳಗದಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ಹಂಪನಗೌಡ ಬಾದರ್ಲಿಯವರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಾಮಾಜಿಕ ಜೀವನಮುಳ್ಳಿನ ಹಾಸಿಗೆ ಇದ್ದಂತೆ. ಜಗತ್ತಿಗೆ ಬೆಳಕು ಚೆಲ್ಲಿದ ಯೇಸು ಕ್ರೀಸ್ತನನ್ನು ಸಮಾಜ ಶಿಲುಬೆಗೇರಿರೆಸಿದೆ. ಸಮಾಜದಲ್ಲಿ
ಸಮಾನತೆ ತರಲು ಹೊರಟ ಬಸವಣ್ಣನನ್ನು ಸಮಾಜದಿಂದ ದೂರ ಮಾಡಿತು ಎಂದರು.
ಕೊಡುವ ಕೆಲಸವನ್ನು ಮಾಡಬೇಕು ಎಂದು ಪುಟ್ಟರಾಜ ಗವಾಯಿಗಳು ಹೇಳಿದ್ದನ್ನು ಸ್ಮರಿಸಿದ ಪೂಜ್ಯರು, ಕುದುರೆ, ಆನೆ, ಬಂಡೆ, ಬಂಗಾರವಿದ್ದರೇನು? ನಾನು ತಿನ್ನುವುದು ಮುಡಿ ಅಕ್ಕಿ ಮಾತ್ರ, ಜಗತ್ತನ್ನೆ ಬದಲಾವಣೆ ಮಾಡುವಂತ ಸಾಮರ್ಥ್ಯವಿರುವ ಮನುಷ್ಯ ಮನೆಯ ಟಿವಿ ಚಾನೆಲ್ ಬದಲಾವಣೆ ಮಾಡಲಾರದಂತಹ ಹೀನಾಯ ಸ್ಥಿತಿಗೆ ಬಂದು
ನಿಂತಿದ್ದಾನೆ. ಆರೋಗ್ಯ ಸಚಿವ ರಮೇಶಕುಮಾರ್ ಮಾತನಾಡಿ, ಶಾಸಕ ಹಂಪನಗೌಡ ಬಾದರ್ಲಿ ಸರ್ಕಾರದಿಂದ ನೂರಾರು ಕೋಟಿ
ರೂ. ಅನುದಾನ ತಂದು ಸಿಂಧನೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ರಾಜಕಾರಣಿಗಳಿಗೆ ಸಂಸಾರವಿದ್ದು, ಸ್ವಾಮಿಗಳಿಗೆ ಸಂಸಾರವಿರುವುದಿಲ್ಲ. ಸುಮಾರು 30 ವರ್ಷಗಳ ರಾಜಕೀಯ ಜೀವನದಲ್ಲಿ ಅವರು ಸಂಸಾರ ಮತ್ತು ಸಾಮಾಜಿಕ ಜೀವನವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.
Related Articles
Advertisement
ರಾಜಕಾರಣಿಗಳ ಬದುಕು ಕೆಸರು ಗದ್ದೆಯಾಗಿದ್ದು ಕಮಲದಂತೆ ಎದ್ದು ಬಂದು ನಿಸ್ವಾರ್ಥದಿಂದ ಸೇವೆ ಮಾಡುವವನೇ ನಿಜವಾದ ಸಮಾಜ ಸೇವಕ, ಜನನಾಯಕ. ಯಾವ ರಾಜಕಾರಣಿ ಕೋಪ ಮಾಡಿಕೊಳ್ಳುತ್ತಾನೆ ಅವನಲ್ಲಿನೈಜತೆ ಇರುವುದೆಂದು ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದರು. ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ತಂದೆ-ತಾಯಿ, ಸಹೋದರರ, ಸಹಾಯ, ಸಹಕಾರ, ಮೂವತ್ತು ವರ್ಷಗಳಿಂದ ರಾಜಕೀಯದಲ್ಲಿ ಮೇಲೆ ಬರುವಂತೆ ಮಾಡಿದ ಕ್ಷೇತ್ರದ ಜನತೆಯನ್ನು ಎಂದಿಗೂ ಮರೆಯಲಾರೆ ಎಂದರು. ರಾಯಚೂರು ಸಂಸದ ಬಿ.ವಿ. ನಾಯಕ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಮಾನ್ವಿ ಶಾಸಕ ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರು, ಬಸವರಾಜ ಇಟಗಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ವಸಂತಕುಮಾರ್, ನಿವೃತ್ತ ಪ್ರಾಂಶುಪಾಲ ಶಾಶ್ವತಯ್ಯ ಸ್ವಾಮಿ ಮುಕ್ಕುಂದಿ ಮಠ, ನಗರಸಭೆ ಅಧ್ಯಕ್ಷೆ ಮಂಜುಳಾ ಪಾಟೀಲ್, ಜಿಪಂ ಸದಸ್ಯರಾದ ಬಾಬುಗೌಡ ಬಾದರ್ಲಿ, ಬಸವರಾಜ ಹಿರೇಗೌಡ್ರ ಇತರರು ಇದ್ದರು.