Advertisement

ನಗರದಲ್ಲಿ ಮಾಜಿ ಸೈನಿಕರಿಂದ ಸೈನಿಕ್‌ ಪಾಡ್‌ ಸೇವೆ

01:32 PM Feb 05, 2022 | Team Udayavani |

ಬೆಂಗಳೂರು: ಆಟೋ, ಕ್ಯಾಬ್‌ಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಓಡಾಡಿರುತ್ತಾರೆ. ಆದರೆ,ಇಲ್ಲೊಂದು ಚಿಕ್ಕ-ಚೊಕ್ಕದಾದ ವಿದ್ಯುತ್‌ ಚಾಲಿತ ಟಾಟಾ ನ್ಯಾನೋ ರೂಪದ ನಿಯೋ ಕಾರುಗಳು ಸೈನಿಕ್‌ ಪಾಡ್‌ ಹೆಸರಿನಲ್ಲಿ ಸೇವೆ ಸಲ್ಲಿಸುತ್ತಿವೆ.

Advertisement

ಈ ಸೇವೆಯನ್ನು ನೀವು ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಕಾಣ ಬಹುದು. ಈಗಾಗಲೇ 25 ವಿದ್ಯುತ್‌ ಚಾಲಿತ ನಿಯೋ ಸೈನಿಕ್‌ ಪಾಡ್‌ಗಳು ತನ್ನ ಸೇವೆಯನ್ನು ಆರಂಭಿಸಿವೆ.

ಏನಿದು ಸೈನಿಕ್‌ ಪಾಡ್‌?: ನಿವೃತ್ತಿ ಹೊಂದಿದ ಭಾರತೀಯ ಸೈನಿಕರು, ಈ ಸೇವೆಯನ್ನು ಪ್ರಾರಂಭಿಸಿದ್ದು, ಪರಿಸರ ಪ್ರೇಮಿ, ಕಾರ್ಬನ್‌ ಹೊಗೆ ರಹಿತವಾಗಿರುವ ವಿದ್ಯುತ್‌ ಚಾಲಿತ ವಾಹನ ಸೈನಿಕ್‌ ಪಾಡ್‌ ಸಿಟ್‌ ಅಂಡ್‌ ಗೋ ಎಂಬ ವಿಶೇಷ ಶೀರ್ಷಿಕೆಯಡಿ ಸಂಚರಿಸಲು ಸಿದ್ಧಗೊಂಡಿವೆ.

ಒಮ್ಮೆ ಕಾರಿನ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡಿದರೆ ಸಾಕು, 160 ಕಿ.ಮೀ ಸಲೀಸಾಗಿ ಸಂಚರಿಸುತ್ತವೆ ಮತ್ತು ಜನ ಸಾಮಾನ್ಯರಿಗೂ ಹತ್ತಿರವಾಗುವಂತೆ ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ. ಮೊದಲ ಒಂದು ಕಿ.ಮೀ.ಗೆ 30ರೂ. ನಿಗದಿಯಾಗಿದ್ದು, ನಂತರದ ಪ್ರತಿ ಕಿ.ಮೀಗೆ ತಲಾ 15 ರೂ.ನಂತೆ ನೀಡಬೇಕಾಗುತ್ತದೆ. ಇದಲ್ಲದೇ, ಒಮ್ಮೆ ಪ್ರಯಾಣಿಕರನ್ನು ಕೂರಿಸಿ ಕೊಂಡು ಮತ್ತೂಂದು ಸ್ಥಳಕ್ಕೆ ತಲುಪಿಸಿದ ತಕ್ಷಣವೇ ಮತ್ತೂಂದು ಬುಕ್‌ ಮಾಡಿಕೊಳ್ಳುವುದಿಲ್ಲ. ಏಕೆಂದರೆ, ಕೊರೊನಾವನ್ನು ತಡೆಗಟ್ಟುವ ನಿಟ್ಟಿನಲ್ಲಿ, ಪ್ರಯಾಣಿಕರನ್ನು ಅವರ ಪ್ರದೇಶಕ್ಕೆ ತಲುಪಿಸಿದ ನಂತರ ಕಾರನ್ನು ಸಂಪೂರ್ಣವಾಗಿ ಸ್ಯಾನಿಟೈಸರ್‌ ನಿಂದ ಸ್ವಚ್ಛಗೊಳಿಸಿದ ಹತ್ತು ನಿಮಿಷದ ನಂತರವೇ ಮತ್ತೂಂದು ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತದೆ.

ಏನಿದರ ಉದ್ದೇಶ: ಇತ್ತೀಚೆಗೆ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ನಿವೃತ್ತ ಸೈನಿಕರು ಈ ಸೇವೆಯನ್ನು ಆರಂಭಿಸಿದ್ದಾರೆ.

Advertisement

ಸೈನಿಕ್‌ ಪಾಡ್‌ ಆಪರೇಟರ್: 2020ರಲ್ಲಿ ಆರಂಭವಾದ ಸೈನಿಕ್‌ ಪಾಡ್‌ ಇತ್ತೀಚೆಗೆ ಬೆಳಕಿಗೆ ಬಂದಿದೆ. ಕೆಲವು ಪ್ರದೇಶದಲ್ಲಿ ಈ ಸೇವೆಯ ಬಗ್ಗೆ ಕಾರ್ಯಗಾರಗಳನ್ನು ಹಾಗೂ ಪ್ರಚಾರವನ್ನು ಮಾಡಿದ ನಂತರ ತಮಿಳುನಾಡು, ಆಂಧ್ರಪ್ರದೇಶ, ಕೇರಳಸೇರಿದಂತೆ ನೆರೆ ರಾಜ್ಯದ ಮಾಜಿ ಸೈನಿಕರು ಸೇರಿ ದಂತೆ ಒಟ್ಟು 20ರಿಂದ 25 ಜನ ಸೇವೆ ಸಲ್ಲಿಸುತ್ತಿದ್ದಾರೆ.

ಕೊರೊನಾ ಸಮಯದಲ್ಲಿ ಉತ್ತಮ ಸೇವೆ: ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿ ಅನೇಕ ಕ್ಯಾಬ್‌, ಆಟೋ ಚಾಲಕರು ಭಯಪಟ್ಟು,ಸೇವೆಯಿಂದ ದೂರ ಉಳಿದಿದ್ದರು. ಆಗವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಗೆ, ಸಿಬ್ಬಂದಿಗೆ,ರೋಗಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಆದಕಾರಣ, ಅವರಿಗೆ ನೆರವಾಗುವ ಉದ್ದೇಶದಿಂದ ಸೈನಿಕ್‌ ಫಾರ್‌ ಡಾಕ್ಟರ್‌ ಎಂದು ಕಾರ್ಯಾರಂಭಿಸಲಾಗಿತ್ತು.

ಪ್ರಯಾಣಿಕರಿಂದ ಉತ್ತಮ ಸ್ಪಂದನೆ: ಸಾಮಾನ್ಯವಾಗಿ ಆಟೋ, ಕ್ಯಾಬ್‌ಗಳಿಗಿಂತ ಸುರಕ್ಷಿತವಾಗಿದ್ದು, ಗ್ರಾಹಕ ಸ್ನೇಹಿ ಪ್ರಯಾಣ ದರವನ್ನು ಹೊಂದಿದೆ.ಆದ್ದರಿಂದ ಪ್ರಯಾಣಿಕರಿಂದಲೂ ಉತ್ತಮಪ್ರತಿಕ್ರಿಯೆ ದೊರೆತಿದ್ದು, ಸೈನಿಕ್‌ ಪಾಡ್‌ಗಳಿಗಾಗಿಕಾದು ನಿಂತಿರುತ್ತಾರೆ. ಸಾಕಷ್ಟು ಮಂದಿ ಸುರಕ್ಷಿತವಾಗಿ ಪ್ರಯಾಣಿಸಲು ಇಚ್ಛಿಸುತ್ತಾರೆ.

ನಗರಾದ್ಯಂತ ಸೇವೆ ಗುರಿ :

ಒಟ್ಟು 100 ಸೈನಿಕ್‌ ಪಾಡ್‌ ನಿಯೋ ಕಾರುಗಳಿವೆ. ಕೊರೊನಾ ಹಾಗೂ ಆಪರೇಟರ್ ಕೊರತೆಯ ಕಾರಣದಿಂದಾಗಿ ಪ್ರಸ್ತುತ 20ರಿಂದ 25 ಸೈನಿಕ್‌ ಪಾಡ್‌ಗಳು ರಸ್ತೆಗಿಳಿದು ಸೇವೆ ಸಲ್ಲಿಸುತ್ತಿವೆ. ಒಂದು ತಿಂಗಳ ಒಳಗಾಗಿ, ಸೈನಿಕ್‌ ಪಾಡ್‌ಗೆ ಸಂಬಂಧಿಸಿದಆ್ಯಪ್‌ ಪ್ಲೇಸ್ಟೋರ್‌ನಲ್ಲಿ ದೊರೆಯಲಿದ್ದು,ಪ್ರಯಾಣಿಕರಿಗೆ ಕಾಯ್ದಿರಿಸಲು ಸುಲಭ ಮಾರ್ಗ ಕಲ್ಪಿಸಲಾಗುವುದು.

ದೇಶದ ಗಡಿ ಭಾಗಗಳಲ್ಲಿ ಸೇವೆ ಸಲ್ಲಿಸಿದ ಸೈನಿಕರಿಗೆ ನಾಡಿನ ಜನತೆಗೆ ಸೇವೆಸಲ್ಲಿಸಲು ಸಿಕ್ಕಿರುವ ಒಂದು ಉತ್ತಮ ಅವಕಾಶ. ನಾವು ಯಾವುದೇ ಲಾಭ ನಷ್ಟವನ್ನುನೋಡದೇ, ನಾಡಿನ ಜನರನ್ನು ಸುರಕ್ಷಿತವಾಗಿರಿಸಲು ಅದರಲ್ಲೂ ಮಹಿಳೆಯರನ್ನುರಕ್ಷಿಸುವುದು ನಮ್ಮ ಮೂಲಕ ಉದ್ದೇಶ. ಬೋಪಣ್ಣ, ಮೆಟ್ರೋ ಸೈನಿಕ್‌ ಪಾಡ್‌ ಮೇಲ್ವಿಚಾರಕ

-ಭಾರತಿ ಸಜ್ಜನ್

Advertisement

Udayavani is now on Telegram. Click here to join our channel and stay updated with the latest news.

Next