Advertisement

ಮಹಿಳೆಯರ ಪಾತ್ರ ಹಿರಿದು: ರಾಘವೇಂದ್ರ

11:03 AM Jul 22, 2019 | Naveen |

ಸೈದಾಪುರ: ಮಹಿಳೆಯರು ಪುರಷರಕ್ಕಿಂತ ಯಾವುದರಲ್ಲಿಯೂ ಕಡಿಮೆ ಇಲ್ಲದಂತೆ ಇರುವ ಈ ಕಾಲದಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೆ ಆರ್ಥಿಕವಾಗಿ ಸಭಲರಾಗಲು ವಿವಿಧ ರೀತಿಯ ಒಕ್ಕೂಟಗಳ ನಾಯಕತ್ವದ ಅಭಿವೃದ್ಧಿ ಪಡಿಸುವುದರಿಂದ ಆ ಗ್ರಾಮದ ಮಹಿಳೆಯರು ಸದೃಢವಾಗಲು ಸಾಧ್ಯವಿದೆ ಎಂದು ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಹೇಳಿದರು.

Advertisement

ಪಟ್ಟಣದ ಎಪಿಎಂಸಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕೇಂದ್ರದಿಂದ ಏರ್ಪಡಿಸಿದ್ದ ಮಹಿಳಾ ಒಕ್ಕೂಟಗಳ ನಾಯಕತ್ವದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕುಟುಂಬವನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಹೊಗುವಲ್ಲಿ ಮಹಿಳೆಯರ ಪಾತ್ರ ಹಿರಿದು. ಈ ದಿಸೆಯಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯು ಅನೇಕ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ನಿರ್ಮಾಣ ಮಾಡಿ ಅವರಿಗೆ ವಿವಿಧ ಕೌಶಲ್ಯಗಳನ್ನು ತರಬೇತಿ, ಮಾರ್ಗದರ್ಶನ, ನಾಯಕತ್ವ ತರಬೇತಿ ಹಾಗೂ ಆರ್ಥಿಕವಾಗಿ ಸಹಾಯ ಮಾಡುವುದರ ಮೂಲಕ ಮಹಿಳೆಯರಿಗೆ ಆತ್ಮಸ್ಥೈರ್ಯವನ್ನು ನೀಡಿ ಆರ್ಥಿಕವಾಗಿ ಸದೃಢವಾಗಲು ಸಹಾಯ ನೀಡುತ್ತಿದೆ. ಅದೆ ರೀತಿಯಾಗಿ ಈ ತರಬೇತಿಯಲ್ಲಿ ಒಕ್ಕೂಟಗಳ ನಿರ್ವಹಣೆ ಮತ್ತು ಸಭೆಗಳ ಮಾರ್ಗಸೂಚಿಗಳ ಬಗ್ಗೆ ಅರಿತು. ನಿಮ್ಮ ಒಕ್ಕೂಟಗಳನ್ನು ಆರ್ಥಿಕವಾಗಿ ಸದೃಢವಾಗಲು ಪ್ರತಿಯೊಬ್ಬ ಸದಸ್ಯರು ಸಹಕರಿಸಬೇಕು ಎಂದು ತಿಳಿಸಿದರು.

ನಂತರ ಮಾತನಾಡಿದ ಯೋಜನೆಯ ಜಿಲ್ಲಾ ಪ್ರಬಂಧಕ ಪುನೀತ ಮಾತನಾಡಿದರು.

ಸೈದಾಪುರ ವಲಯ ಮೇಲ್ವಚಾರಕ ದಾದಾಖಲಂದರ್‌, ಸೇವಾ ಪ್ರತಿನಿಧಿ ಶರಣು ನಾಚವರ್‌, ರಡ್ಡೆಪ್ಪ, ಭಾಗ್ಯಶ್ರೀ ಸಜ್ಜನ್‌, ರೇಣುಕಾ, ಲಕ್ಷೀ, ಪಾರ್ವತಿ ಸೇರಿದಂತೆ ಸೈದಾಪುರ, ಬಾಡಿಯಾಲ, ಕಡೇಚೂರ, ದುಪ್ಪಲ್ಲಿ, ಮಾಧ್ವಾರ, ಕಣೇಕಲ್, ನೀಲಹಳ್ಳಿ, ಕೂಡಲೂರ, ಗ್ರಾಮದ ಸ್ವ-ಸಹಾಯ ಗುಂಪುಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next