Advertisement
ಬುಧವಾರ ನಡೆದ ವನಿತಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ 8ನೇ ಶ್ರೇಯಾಂಕಿತೆ ಸೈನಾ ಸ್ಥಳೀಯ ಆಟಗಾರ್ತಿ ದಿನಾರ್ ಯಾಹ್ ಅಯುಸ್ಟಿನ್ ವಿರುದ್ಧ 7-21, 21-16, 21-11 ಗೇಮ್‌ಗಳಿಂದ ಗೆಲುವು ದಾಖಲಿಸಿದರು. ಅಯುಸ್ಟಿನ್ ವಿರುದ್ಧ ಸೈನಾ ಸಾಧಿಸಿದ 3ನೇ ಗೆಲುವಾಗಿದೆ. ಮುಂದಿನ ಪಂದ್ಯದಲ್ಲಿ ಸೈನಾ ಮತ್ತೋರ್ವ ಸ್ಥಳೀಯ ಆಟಗಾರ್ತಿ ಫಿಟ್ರಿಯಾನಿ ಫಿಟ್ರಿಯಾನಿ ವಿರುದ್ಧ ಆಡಲಿದ್ದಾರೆ. ಇವರ ವಿರುದ್ಧ ಸೈನಾ 4-0 ಗೆಲುವಿನ ದಾಖಲೆ ಹೊಂದಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪಂದ್ಯದಲ್ಲಿ ಪಾರುಪಳ್ಳಿ ಕಶ್ಯಪ್ ಸ್ಥಳೀಯ ಆಟಗಾರ ಆ್ಯಂಟನಿ ಸಿನಿಸುಕ ವಿರುದ್ಧ 12-21, 16-21 ಗೇಮ್‌ಗಳಿಂದ ಸೋತರು. ಕಳೆದ ವಾರವಷ್ಟೇ ಮುಕ್ತಾಯಗೊಂಡ ಮಲೇಶ್ಯ ಮಾಸ್ಟರ್ ಕೂಟದ ದ್ವಿತೀಯ ಸುತ್ತಿನಲ್ಲೂ ಕಶ್ಯಪ್ ಆ್ಯಂಟನಿಗೆ ಸೋತಿದ್ದರು.ಪುರುಷರ ಮತ್ತೂಂದು ಪಂದ್ಯದಲ್ಲಿ ಬಿ. ಸಾಯಿ ಪ್ರಣೀತ್ 12-21, 16-21 ಗೇಮ್‌ಗಳಿಂದ ಒಲಿಂಪಿಕ್ ಚಾಂಪಿಯನ್, ಚೀನದ ಚೆನ್ ಲಾಂಗ್ ವಿರುದ್ಧ ಎಡವಿದರು. ಸೋಮವಾರವಷ್ಟೇ ಪ್ರಧಾನ ಸುತ್ತಿಗೆ ಅರ್ಹತೆ ಪಡೆದ ಶುಭಂಕರ್ ಡೇ ಮಾಜಿ ವಿಶ್ವ ಚಾಂಪಿಯನ್, ಡೆನ್ಮಾರ್ಕ್‌ನ ವಿಕ್ಟರ್ ಎಕ್ಸೆಲ್‌ಸನ್ ಅವರಿಗೆ ತೀವ್ರ ಪೈಪೋಟಿ ನೀಡಿಯೂ 14-21, 21-19, 15-17 ಗೇಮ್‌ಗಳಿಂದ ಸೋಲು ಕಾಣಬೇಕಾಯಿತು.
Related Articles
ಡಬಲ್ಸ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಮನು ಅತ್ರಿ-ಬಿ. ಸುಮೀತ್ ರೆಡ್ಡಿ ಜೋಡಿ ಡೆನ್ಮಾರ್ಕ್‌ನ ಮಾಡ್ಸ್ ಪೀಲರ್ ಕೊಲ್ಡಿಂಗ್-ನಿಕ್ಲಾಸ್ ನೊಹ್ ಜೋಡಿ ವಿರುದ್ಧ 14-21, 21-19, 21-15 ಗೇಮ್‌ಗಳಿಂದ ಜಯ ಸಾಧಿಸಿತು.
Advertisement
ವನಿತಾ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಅವರನ್ನು ಥಾಯ್ಲೆಂಡ್‌ನ ಜಾಂಗ್‌ಕೊಲ್ಫಾನ್ ಕಿಟಿಥರಕುಲ್-ರವಿಂದಾ ಪ್ರಜೋಂಗ್‌ಜಾಯ್ ಜೋಡಿ 21-14, 19-21, 21-15 ಗೇಮ್‌ಗಳಿಂದ ಸೋಲಿಸಿತು.
ಸಿಂಧು, ಶ್ರೀಕಾಂತ್ ಗೆಲುವಿನ ಆಟರಾತ್ರಿ ನಡೆದ ವನಿತಾ ಸಿಂಗಲ್ಸ್ ಪಂದ್ಯದಲ್ಲಿ ಪಿ.ವಿ. ಸಿಂಧು 3 ಗೇಮ್‌ಗಳ ಕಾದಾಟದ ಬಳಿಕ ಚೀನದ ಲೀ ಕ್ಸುರುಯಿ ವಿರುದ್ಧ 22-24, 21-8, 21-17 ಅಂತರದ ಗೆಲುವು ಸಾಧಿಸಿ ದ್ವಿತೀಯ ಸುತ್ತು ಪ್ರವೇಶಿಸಿದರು. ಇದೇ ವೇಳೆ ನಡೆದ ಪುರುಷರ ಸಿಂಗಲ್ಸ್ ಮುಖಾಮುಖೀಯಲ್ಲಿ ಕೆ. ಶ್ರೀಕಾಂತ್ ಮಲೇಶ್ಯದ ಚೆಂಗ್ ವೀ ಫೆಂಗ್ ಅವರನ್ನು 21-12, 21-8 ನೇರ ಗೇಮ್‌ಗಳಲ್ಲಿ ಮಣಿಸಿ ಶುಭಾರಂಭ ಮಾಡಿದರು.