Advertisement

MBSS: ಅ. 1ರಿಂದ ಶೈಕ್ಷಣಿಕ ವರ್ಷ

01:48 AM Sep 15, 2024 | Team Udayavani |

ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಎಂಬಿಬಿಎಸ್‌ ಪದವಿಯ ನೀಟ್‌ ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅ. 1ರಂದು ಶೈಕ್ಷಣಿಕ ಅವಧಿ ಆರಂಭಿಸಬೇಕೆಂದು ವೈದ್ಯಕೀಯ ಕಾಲೇಜುಗಳಿಗೆ ಸೂಚಿಸಿದೆ.

Advertisement

ಅಖಿಲ ಭಾರತ ಕೋಟಾದ 2ನೇ ಸುತ್ತಿನ ಕೌನ್ಸೆಲಿಂಗ್‌ ಅನ್ನು ಸೆ. 19ರೊಳಗೆ ಮುಗಿಸಬೇಕು. ಸೆ. 28ರಿಂದ 30ರೊಳಗೆ ಅಭ್ಯರ್ಥಿಗಳ ಮಾಹಿತಿ ಯನ್ನು ಮೆಡಿಕಲ್‌ ಕೌನ್ಸೆಲಿಂಗ್‌ ಕಮಿಟಿಗೆ ಕಳುಹಿಸಬೇಕು. ರಾಜ್ಯ ಮಟ್ಟದಲ್ಲಿ ಸೆ. 27ರೊಳಗೆ ಕೌನ್ಸೆಲಿಂಗ್‌ ಮುಗಿಸಿ ಅ. 6ರಿಂದ 8ರೊಳಗೆ ಮಾಹಿತಿ ಕಳುಹಿಸ ಬೇಕು. ಈ ಸುತ್ತಿನಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಸೆ. 27 ಹಾಗೂ ರಾಜ್ಯಮಟ್ಟದಲ್ಲಿ ಅ. 5ರೊಳಗೆ ಪ್ರವೇಶ ಪಡೆಯಬೇಕು. ಇನ್ನು ರಾಜ್ಯ ಮಟ್ಟದಲ್ಲಿ ಅ. 9ರಿಂದ 18ರೊಳಗೆ 3ನೇ ಸುತ್ತಿನ ಕೌನ್ಸೆಲಿಂಗ್‌ ನಡೆಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಅ. 23ರೊಳಗೆ ಪ್ರವೇಶ ಪಡೆಯಬೇಕು. 3ನೇ ಸುತ್ತಿನ ಬಳಿಕವೂ ಉಳಿಕೆಯಾಗುವ ಸೀಟುಗಳನ್ನು ಭರ್ತಿ ಮಾಡಲು ನಡೆಸುವ ಮುಂದುವರಿದ ಕೌನ್ಸೆಲಿಂಗ್‌ ಅನ್ನು ಅ. 25ರಿಂದ 29ರ ಒಳಗೆ ನಡೆಸಿ ನ. 5ರೊಳಗೆ ಅಭ್ಯರ್ಥಿಗಳು ಪ್ರವೇಶ ಪಡೆಯಬೇಕಿದೆ ಎಂದು ಎನ್‌ಎಂಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next