Advertisement

Kannada ಖ್ಯಾತ ನಟ ಕಿರಣ್ ರಾಜ್ ಕಾರು ಅಪಘಾತ: ಐಸಿಯುನಲ್ಲಿ ಚಿಕಿತ್ಸೆ

03:04 PM Sep 11, 2024 | Team Udayavani |

ಬೆಂಗಳೂರು: ಉದಯೋನ್ಮುಖ ಖ್ಯಾತ ಯುವನಟ ಕಿರಣ್ ರಾಜ್(Kiran raj) ಅವರು ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಘಟನೆ ಕೆಂಗೇರಿ ಬಳಿ ಮಂಗಳವಾರ ರಾತ್ರಿ (ಸೆ 10) ರಂದು ನಡೆದಿದೆ.

Advertisement

ಕಿರಣ್ ರಾಜ್‌ ಅವರೊಂದಿಗೆ ಬೆಂಜ್ ಕಾರಿನಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಇದ್ದಿದ್ದು ಅವರು ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್​ಗೆ ಡಿಕ್ಕಿಯಾದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನ ಮುಂದಿನ ಚಕ್ರ ಕಳಚಿ ಬಿದ್ದಿರುವುದು ಅಪಘಾತದ ತೀವ್ರತೆಗೆ ಸಾಕ್ಷಿಯಾಗಿದೆ.
31 ರ ಹರೆಯದ ಕಿರಣ್ ರಾಜ್ ಅವರನ್ನು ಆಸ್ಪತೆಗೆ ದಾಖಲಿಸಲಾಗಿದ್ದು ಅವರ ಎದೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

content-img

ಗುಟ್ಟಯ್ಯನ ಪಾಳ್ಯದ ಸಿದ್ದೇಶ್ವರ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ ವಾಪಾಸಾಗುತ್ತಿದ್ದ ವೇಳೆ ಅವಘಡ ನಡೆದಿದೆ ಎನ್ನಲಾಗಿದೆ. ಪ್ರತಿವಾರವೂ ಅಲ್ಲಿಗೆ ಭೇಟಿ ನೀಡಿ ಊಟ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.

”ಕನ್ನಡತಿ” ಧಾರಾವಾಹಿಯ ಹರ್ಷ ಪಾತ್ರದ ಮೂಲಕ ಜನಪ್ರಿಯರಾಗಿದ್ದರು. ಚಿತ್ರರಂಗಕ್ಕೂ ಕಾಲಿಟ್ಟಿದ್ದ ಕಿರಣ್ ರಾಜ್ ಅಭಿನಯದ ರಾನಿ ಸಿನಿಮಾ ನಾಳೆ(ಗುರುವಾರ-ಸೆ.12)ಬಿಡುಗಡೆಯಾಗುತ್ತಿದೆ. ಟೀಸರ್‌, ಟ್ರೇಲರ್‌ ಬಿಡುಗಡೆಯಾಗಿದ್ದು ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ.

Advertisement

ಕಿರಣ್ ರಾಜ್ ಕನ್ನಡ ಕನ್ನಡ ಕಿರುತೆರೆ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿಯಲ್ಲೂ ಧಾರವಾಹಿ ಮತ್ತು ಚಿತ್ರಗಳಲ್ಲಿ ನಟಿಸಿದ್ದಾರೆ.ಹಿಂದಿಯ ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್ ಮೊದಲಾದ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.

ದೇವತೆ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಾಗೇ ಮಾರ್ಚ್ 22 ,ಅಸತೋಮ ಸದ್ಗಮಯ, ಜೀವ್ನಾನೇ ನಾಟ್ಕ ಸ್ವಾಮಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗಿನ ನುವ್ವೇ ನಾ ಪ್ರಾಣಂ, ವಿಕ್ರಮ್ ಗೌಡ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿಯನ್ನೂ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.