Advertisement
40 ನಿಮಿಷಗಳ ಹೋರಾಟದಲ್ಲಿ ಸೈನಾ ಚೀನದ ಗಾವೊ ಫ್ಯಾಂಗ್‌ಝಿ ಅವರನ್ನು 21-18, 21-18 ಗೇಮ್‌ಗಳಿಂದ ಕೆಡಹಿದರು. ಮುಂದಿನ ಸುತ್ತಿನಲ್ಲಿ ಸೈನಾ ಶ್ರೇಯಾಂಕರಹಿತ ಆಟಗಾರ್ತಿ ಕೊರಿಯದ ಲೀ ಜಂಗ್ ಮಿ ಅವರನ್ನು ಎದುರಿಸಲಿದ್ದಾರೆ. ಜಂಗ್ ಮಿ ಇನ್ನೊಂದು ಪಂದ್ಯದಲ್ಲಿ ಥಾçಲಂಡಿನ ರಚನಾಕ್ ಇಂತನಾನ್ ಅವರನ್ನು ಸೋಲಿಸಿದ್ದರು.
ಮೂರನೇ ಶ್ರೇಯಾಂಕದ ಸಿಂಧು ಚೀನದ ಇನ್ನೋರ್ವ ತಾರೆ ಚೆನ್ ಕ್ಸಿಯೊಕ್ಸಿನ್ ಅವರನ್ನು 21-12, 21-15 ಗೇಮ್‌ಗಳಿಂದ ಕೆಡಹಿದರು. ಪುರುಷರಲ್ಲಿ ಶ್ರೀಕಾಂತ್ ಸುಲಭವಾಗಿ ಕ್ವಾರ್ಟರ್‌ಫೈನಲ್ ತಲುಪಿದರು. ಅವರ ಎದುರಾಳಿ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್ ಅವರು ಮೊದಲ ಗೇಮ್‌ನಲ್ಲಿ 2-7ರಿಂದ ಹಿನ್ನಡೆಯಲ್ಲಿದ್ದಾಗ ಗಾಯಗೊಂಡು ಪಂದ್ಯ ತ್ಯಜಿಸಿದ್ದರು. ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಮೂರು ಬಾರಿಯ ಒಲಿಂಪಿಕ್ ಬೆಳ್ಳಿ ವಿಜೇತ ಲೀ ಚಾಂಗ್ ವೆಯಿ ಅವರನ್ನು ಎದುರಿಸಲಿದ್ದಾರೆ. ಪ್ರಣಯ್‌ಗೆ ಕಠಿನ ಜಯ
ಮೊದಲ ಗೇಮ್ ಸೋತರೂ ವಿಚಲಿತರಾಗದೆ ಹೋರಾಡಿದ ಪ್ರಣಯ್ ಚೈನೀಸ್ ತೈಪೆಯ ವಾಂಗ್ ಜು ವೆಯಿ ಅವರನ್ನು 16-21, 21-14-21-12 ಗೇಮ್‌ಗಳಿಂದ ಸೋಲಿಸಲು ಯಶಸ್ವಿಯಾದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ ಪ್ರಣಯ್ ಮುಂದಿನ ಸುತ್ತಿನಲ್ಲಿ ಕೊರಿಯದ ದ್ವಿತೀಯ ಶ್ರೇಯಾಂಕದ ಸನ್ ವಾನ್ ಹೊ ಅವರನ್ನು ಎದುರಿಸಲಿದ್ದಾರೆ.