Advertisement

ಸೈನಾ ಸಿನಿಮಾ: ನಟಿ ಶ್ರದ್ಧಾಗೆ ಬ್ಯಾಡ್ಮಿಂಟನ್‌ ತರಬೇತಿ

07:15 AM Sep 09, 2017 | |

ಹೊಸದಿಲ್ಲಿ: ಭಾರತದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಜೀವನಾಧಾರಿತ ಚಲನಚಿತ್ರಕ್ಕೆ ಸಿದ್ಧತೆ ಶುರುವಾಗಿರುವುದು ಈಗ ಹಳೇ ಸುದ್ದಿ. ಬ್ಯಾಡ್ಮಿಂಟನ್‌ ಕೋಚ್‌ ಗೋಪಿಚಂದ್‌ ಮತ್ತು ಸೈನಾ ಒಟ್ಟಾಗಿದ್ದೂ ಹಳೇ ಸುದ್ದಿ. ಹೊಸ ಸುದ್ದಿಯೇನೆಂದರೆ ಗೋಪಿಚಂದ್‌ ಮತ್ತು ಸೈನಾ ನೆಹ್ವಾಲ್‌ ಒಟ್ಟಾಗಿ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ಗೆ ಬ್ಯಾಡ್ಮಿಂಟನ್‌  ತರಬೇತಿ ನೀಡುತ್ತಿರುವುದು; ಅದೂ ಸೈನಾ ನೆಹ್ವಾಲ್‌ ಜೀವನಾಧಾರಿತ ಚಲನಚಿತ್ರಕ್ಕೆ!

Advertisement

ಇದಕ್ಕೆ ಸಂಬಂಧಿಸಿದ ಚಿತ್ರವೊಂದನ್ನು ಸೈನಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಇದೇ ವೇಳೆ ಶ್ರದ್ಧಾ ಕೂಡ ತಮ್ಮ ಪಾತ್ರಕ್ಕಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ. “ಪ್ರತಿಯೊಬ್ಬರೂ ಒಮ್ಮೆಯಾದರೂ ಬ್ಯಾಡ್ಮಿಂಟನ್‌ ಆಡಿರುತ್ತಾರೆ. ಆದರೆ ನಾನು ಮಾಜಿ ವಿಶ್ವ ನಂ.1 ಸೈನಾ ಪಾತ್ರವನ್ನೇ ಮಾಡುತ್ತಿದ್ದೇನೆ. ಸೈನಾ ಬರೀ ಶ್ರೇಷ್ಠ ಆಟಗಾರ್ತಿಯಲ್ಲ, ಅವರು ಯುವಜನತೆಗೆ ಮಾದರಿ’ ಎಂದು ಶ್ರದ್ಧಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next