Advertisement

ಸೈನಾ-ಕಶ್ಯಪ್‌ ಮದುವೆ ದಿನ ಫಿಕ್ಸ್‌

12:06 PM Oct 09, 2018 | |

ಹೈದರಾಬಾದ್‌: ಬ್ಯಾಡ್ಮಿಂಟನ್‌ ತಾರೆಗಳಾದ ಸೈನಾ ನೆಹ್ವಾಲ್‌ ಹಾಗೂ ಪಾರುಪಳ್ಳಿ ಕಶ್ಯಪ್‌ ಹಸೆ ಮಣೆ ಏರಲಿದ್ದಾರೆ ಎಂಬ ವಿಚಾರ ಈಗಾಗಲೇ ತಿಳಿದಿದೆ. ಆದರೆ ಮದುವೆ ದಿನಾಂಕ ನಿಗದಿಯಾಗಿರಲಿಲ್ಲ. ಇದನ್ನೀಗ ಸೈನಾ ಬಹಿರಂಗ ಪಡಿಸಿದ್ದಾರೆ. ಡಿ. 16ರಂದು ತಾವಿಬ್ಬರು ವಿವಾಹ ಬಂಧಕ್ಕೊಳಗಾಗಲಿದ್ದೇವೆ ಎಂದಿದ್ದಾರೆ.

Advertisement

“ಡಿ. 20 ಬಳಿಕ ಬ್ಯಾಡ್ಮಿಂಟನ್‌ ಪ್ರಿಮಿಯರ್‌ ಲೀಗ್‌ ಆರಂಭವಾಗಲಿದೆ. ಅದಾದ ಬಳಿಕ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತಾ ಸುತ್ತು ಪ್ರಾರಂಭವಾಗಲಿದೆ. ಇದರಲ್ಲಿ ಪಾಲ್ಗೊಳ್ಳಬೇಕು. ಡಿ. 16 ಸೂಕ್ತವೆಂದು ನಿರ್ಧರಿಸದ್ದು, ಅಂದು ನಾನು ಕಶ್ಯಪ್‌ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೇವೆ’ ಎಂದು ಸೈನಾ ನೆಹ್ವಾಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next