Advertisement
ಗುರುವಾರದ ಮುಖಾಮುಖೀಯಲ್ಲಿ 6ನೇ ಶ್ರೇಯಾಂಕದ ಸಿಂಧು ಜಪಾನಿನ ಅಯಾ ಒಹೊರಿ ಅವರನ್ನು 21-10, 21-15 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ಇವರ ಕಾದಾಟ 34 ನಿಮಿಷಗಳ ತನಕ ಸಾಗಿತು. ಇದು ಒಹೊರಿ ವಿರುದ್ಧ ಸಿಂಧು ಸಾಧಿಸಿದ ಸತತ 9ನೇ ಗೆಲುವು. ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ವಿಶ್ವದ ನಂಬರ್ ವನ್ ಆಟಗಾರ್ತಿ, ಚೈನೀಸ್ ತೈಪೆಯ ತೈ ಜು ಯಿಂಗ್ ಅವರನ್ನು ಎದುರಿಸಬೇಕಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಯಿಂಗ್ ದಕ್ಷಿಣ ಕೊರಿಯಾದ ಸುಂಗ್ ಜಿ ಹ್ಯುನ್ ಅವರನ್ನು 21-18, 16-21, 21-10 ಅಂತರದಿಂದ ಪರಾಭವಗೊಳಿಸಿದರು.
ಸೈನಾ ನೆಹ್ವಾಲ್ ಅವರ ಕ್ವಾರ್ಟರ್ ಫೈನಲ್ ಎದುರಾಳಿ ಒಲಿಂಪಿಕ್ ಚಾಂಪಿಯನ್ ಖ್ಯಾತಿಯ ಸ್ಪೇನ್ ಆಟಗಾರ್ತಿ ಕ್ಯಾರೋಲಿನಾ ಮರಿನ್. ಪುರುಷರಿಗೆ ಸೋಲು
ಈ ಕೂಟದಲ್ಲಿ ಭಾರತದ ಪುರುಷರ ಸವಾಲು ಅಂತ್ಯಗೊಂಡಿದೆ. ಸಮೀರ್ ವರ್ಮ, ಎಚ್.ಎಸ್. ಪ್ರಣಯ್ ಇಬ್ಬರೂ ದ್ವಿತೀಯ ಸುತ್ತಿನಲ್ಲಿ ಪರಾಭವಗೊಂಡರು. ಸಮೀರ್ ಅವರನ್ನು ಮಲೇಶ್ಯದ ಲೀ ಜೀ ಜಿಯ 21-19, 22-20 ಅಂತರದಿಂದ ಪರಾಭವಗೊಳಿಸಿದರೆ, ಪ್ರಣಯ್ ಅವರನ್ನು ಕೆಂಟೊ ಮೊಮೊಟ 21-14, 21-16 ಅಂಕಗಳಿಂದ ಹಿಮ್ಮೆಟ್ಟಿಸಿದರು.