Advertisement

ಸೈನಾ, ಕಶ್ಯಪ್‌, ಸಮೀರ್‌ ಕ್ವಾರ್ಟರ್‌ ಫೈನಲ್‌ಗೆ

06:00 AM Nov 23, 2018 | Team Udayavani |

ಲಕ್ನೊ: “ಸಯ್ಯದ್‌ ಮೋದಿ’ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಸಮೀರ್‌ ವರ್ಮ, ಮಾಜಿ ಚಾಂಪಿಯನ್‌ಗಳಾದ ಸೈನಾ ನೆಹ್ವಾಲ್‌ ಹಾಗೂ ಪಾರುಪಳ್ಳಿ ಕಶ್ಯಪ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

Advertisement

ವನಿತಾ ವಿಭಾಗದ ಪಂದ್ಯದಲ್ಲಿ 3 ಬಾರಿಯ ಚಾಂಪಿಯನ್‌ ಸೈನಾ ನೆಹ್ವಾಲ್‌ ಭಾರತದವರೇ ಆದ ಅಮೋಲಿಕಾ ಸಿಂಗ್‌ ಸಿಸೋದಿಯಾ ಅವರನ್ನು 21-14, 21-9 ನೇರ ಗೇಮ್‌ಗಳಿಂದ ಸೋಲಿಸಿದರು. ಕ್ವಾರ್ಟರ್‌ ಪೈನಲ್‌ನಲ್ಲಿ ಸೈನಾ ಋತುಪರ್ಣ ದಾಸ್‌ ಅವರನ್ನು ಎದುರಿಸಲಿದ್ದಾರೆ. ಋತುಪರ್ಣ ದ್ವಿತೀಯ ಸುತ್ತಿನಲ್ಲಿ ಶೃತಿ ಮಂಡಾಡ ವಿರುದ್ಧ 21-11, 21-15 ಅಂತರದಿಂದ ಗೆದ್ದರು.

ವನಿತೆಯರ ವಿಭಾದ ಮತ್ತೂಂದು ಪಂದ್ಯದಲ್ಲಿ ಸಾಯಿ ಉತ್ತೇಜಿತಾ ರಾವ್‌ 21-12, 21-15 ರೇಷ್ಮಾ ಕಾರ್ತಿಕ್‌ ಅವರನ್ನು ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಉತ್ತೇಜಿತಾ ಮಾಜಿ ಒಲಿಂಪಿಕ್‌ ಚಾಂಪಿಯನ್‌ ಲಿ ಕ್ಸುರುಯಿ ವಿರುದ್ಧ ಆಡಲಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪಿ. ಕಶ್ಯಪ್‌ ಇಂಡೋನೇಶ್ಯದ ಫ್ರಿಮನ್‌ ಅಬ್ದುಲ್‌ ಖೊಲಿಕ್‌ ವಿರುದ್ಧ 9-21, 22-20, 21-8 ಗೇಮ್‌ಗಳಿಂದ ಜಯಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಕಶ್ಯಪ್‌ ಥಾಯ್ಲೆಂಡ್‌ನ‌ ಸಿಟ್ಟಿಕೊಮ್‌ ತಮ್ಮಾಸಿನ್‌ ಅವರನ್ನು ಎದುರಿಸಲಿದ್ದಾರೆ.

ಮತ್ತೂಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸಮೀರ್‌ ವರ್ಮ ಚೀನದ ಝಹೊ ಜುಪೆಂಗ್‌ ವಿರುದ್ಧ 22-20, 21-17 ಗೇಮ್‌ಗಳ ಜಯ ದಾಖಲಿಸಿದರು. ಮುಮದಿನ ಪಂದ್ಯದಲ್ಲಿ ಚೀನ ಝಹು ಕ್ಸುಕಿ ವಿರುದ್ಧ ಆಡಲಿದ್ದಾರೆ. ಬಿ. ಸಾಯಿ ಪ್ರಣೀತ್‌ ಇಂಡೋನೇಶ್ಯದ ಶೆಸರ್‌ ಹಿರೆನ್‌ ರಹುಸ್ಟಾವಿಟೊ ಅವರನ್ನು 21-12, 21-10 ಅಂತರದಿಂದ ಸೋಲಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ  ಚೀನದ ಲು ಗುಂಗ್‌ಜು ಅವರನ್ನು ಎದುರಿಸಲಿದ್ದಾರೆ.

Advertisement

ಮಿಶ್ರ ಡಬಲ್ಸ್‌ನಲ್ಲಿ ಜಯ
ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಅಶ್ವಿ‌ನಿ ಪೊನ್ನಪ್ಪ ಜೋಡಿ ಶಿಮಂ ಶರ್ಮ-ಪೂರ್ವಿಶಾ ಎಸ್‌. ರಾಮ್‌ ಜೋಡಿ ವಿರುದ್ಧ 12-21, 21-14, 21-15 ಗೇಮ್‌ಗಳಿಂದ ಗೆದ್ದು ಎಂಟರ ಘಟ್ಟ ಪ್ರವೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next