Advertisement

ಸೈನಾ ಸೆಮಿ ಪ್ರವೇಶ, ಶ್ರೀಕಾಂತ್‌ ಪರಾಭವ

12:30 AM Jan 19, 2019 | |

ಕೌಲಾಲಂಪುರ: ಜಪಾನಿನ ಪ್ರಬಲ ಆಟಗಾರ್ತಿ ನೊಜೊಮಿ ಒಕುಹಾರಾ ಅವರನ್ನು ಪರಾಭವಗೊಳಿಸುವ ಮೂಲಕ ಭಾರತದ ಸ್ಟಾರ್‌ ಆಟಗಾರ್ತಿ ಸೈನಾ ನೆಹ್ವಾಲ್‌ “ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್‌ ಟೂರ್ನಿ’ಯ ಸೆಮಿಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್‌ ಪರಾಭವಗೊಂಡಿದ್ದಾರೆ.

Advertisement

7ನೇ ಶ್ರೇಯಾಂಕದ ಸೈನಾ ನೆಹ್ವಾಲ್‌ ಭಾರೀ ಹೋರಾಟ ನಡೆಸಿ 21-18, 23-21 ನೇರ ಗೇಮ್‌ಗಳಿಂದ ಒಕುಹಾರಾ ಅವರನ್ನು ಹಿಮ್ಮೆಟ್ಟಿಸಿದರು. “ಅಕ್ಸಿಯಾಟಾ ಅರೆನಾ’ದಲ್ಲಿ ಇವರಿಬ್ಬರ ಹೋರಾಟ 48 ನಿಮಿಷಗಳ ತನಕ ಸಾಗಿತು.

ಈ ಪಂದ್ಯಕ್ಕೂ ಮುನ್ನ ಒಕುಹಾರಾ ವಿರುದ್ಧ ಸೈನಾ ನೆಹ್ವಾಲ್‌ 8-4 ಅಂತರದ ಗೆಲುವಿನ ದಾಖಲೆ ಹೊಂದಿದ್ದರು. ಸೈನಾ ಇಲ್ಲಿ 2017ರ ಚಾಂಪಿಯನ್‌ ಆಗಿದ್ದು, 2011ರಲ್ಲಿ ರನ್ನರ್ ಅಪ್‌ ಸಾಧನೆ ಮಾಡಿದ್ದಾರೆ. ಶನಿವಾರದ ಸೆಮಿ ಸೆಣಸಾಟದಲ್ಲಿ 3 ಬಾರಿಯ ವಿಶ್ವ ಚಾಂಪಿಯನ್‌, ಸ್ಪೇನ್‌ನ ಕ್ಯಾರೋಲಿನ್‌ ಮರಿನ್‌ ವಿರುದ್ಧ ಸೆಣಸಲಿದ್ದಾರೆ. ಇವರಿಬ್ಬರು ಈವರೆಗೆ 10 ಸಲ ಮುಖಾಮುಖೀಯಾಗಿದ್ದು, 5 ಗೆಲುವು-5 ಸೋಲುಗಳ ಸಮಾನ ದಾಖಲೆ ಹೊಂದಿದ್ದಾರೆ.

ಶ್ರೀಕಾಂತ್‌ಗೆ ಸೋಲು
ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ 7ನೇ ಶ್ರೇಯಾಂಕದ ಕೆ. ಶ್ರೀಕಾಂತ್‌ ಅವರನ್ನು ಕೊರಿಯಾದ ಸನ್‌ ವಾನ್‌ ಹೊ 21-23, 21-16, 21-17 ಅಂತರದಿಂದ ಪರಾಭವಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next