Advertisement

Sailing ; ವಿಷ್ಣು ಸರವಣನ್‌ಗೆ ಒಲಿಂಪಿಕ್ಸ್‌ ಅರ್ಹತೆ

12:30 AM Feb 01, 2024 | Team Udayavani |

ಅಡಿಲೇಡ್‌: ಏಷ್ಯನ್‌ ಗೇಮ್ಸ್‌ ಕಂಚಿನ ಪದಕ ವಿಜೇತ ವಿಷ್ಣು ಸರವಣನ್‌ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಿದ ಭಾರತದ ಮೊದಲ ಸೈಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಅಡಿಲೇಡ್‌ನ‌ಲ್ಲಿ ನಡೆಯುತ್ತಿರುವ ಐಎಲ್‌ಸಿಎ-7 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 125 ನೆಟ್‌ ಸ್ಕೋರ್‌ನೊಂದಿಗೆ ಸರವಣನ್‌ ಒಲಿಂಪಿಕ್ಸ್‌ ಅರ್ಹತೆ ಗಳಿಸಿದರು. ಅವರ ಒಟ್ಟು ಸ್ಕೋರ್‌ 174 ಆಗಿತ್ತು. ನಿಯಮಾವಳಿಯಂತೆ ಇದರಲ್ಲಿ ಕನಿಷ್ಠ ಅಂಕವನ್ನು ಕಳೆಯಬೇಕಿದೆ. ಸರವಣನ್‌ ಗಳಿಸಿದ ಕನಿಷ್ಠ ಅಂಕ 49. ಹೀಗೆ ಒಟ್ಟು 125 ನೆಟ್‌ ಸ್ಕೋರ್‌ನೊಂದಿಗೆ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಿದರು. ಏಷ್ಯನ್‌ ಸ್ಪರ್ಧಿಗಳಲ್ಲಿ ಸರವಣನ್‌ ಅಗ್ರ ಶ್ರೇಯಾಂಕ ಪಡೆದಿದ್ದರು.

24 ವರ್ಷದ, ಮುಂಬಯಿಯ “ಆರ್ಮಿ ಯಾಚಿಂಗ್‌ ನೋಡ್‌’ನಲ್ಲಿ ಸುಬೇದಾರ್‌ ಆಗಿರುವ ವಿಷ್ಣು ಸರವಣನ್‌ಗೆ ಒಲಿದ ಸತತ 2ನೇ ಒಲಿಂಪಿಕ್ಸ್‌ ಟಿಕೆಟ್‌ ಇದಾಗಿದೆ. 2019ರ ಅಂಡರ್‌-21 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಇವರದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next