Advertisement
ಈ ಹಿಂದಿನ ಮಿಸಸ್ ಇಂಡಿಯಾ ಸ್ಪರ್ಧೆಯ ರನ್ನರ್ ಆಪ್ ಆಗಿದ್ದ ರಾಜ್ಯಶ್ರೀ ಘಟನೆ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ರಾಜ್ಯಶ್ರೀ, ನೈಸ್ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಎಚ್ಚರದಿಂದಿರಲು ಸೂಚಿಸಿದ್ದಾರೆ. ನೈಸ್ ಸಹಾಯವಾಣಿಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸಲಿಲ್ಲ ಎಂದೂ ಅವರು ಆರೋಪಿಸಿದ್ದಾರೆ.
ಆ.6ರಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಪತಿಯ ಜತೆ ಮೈಸೂರಿನಿಂದ ಬನ್ನೇರುಘಟ್ಟ ರಸ್ತೆ ಮೂಲಕ ನಗರಕ್ಕೆ ಬೈಕ್‌ನಲ್ಲಿ ಬರುವಾಗ ನೈಸ್‌ರಸ್ತೆಯಲ್ಲಿ ಬೈಕ್ ಕೆಟ್ಟು ನಿಂತಿತ್ತು. ಬಳಿಕ ಪತಿ ಮತ್ತೂಂದು ವಾಹನದ ನೆರವು ಪಡೆದು ಮೆಕಾನಿಕ್ ಕರೆತರಲು ತೆರಳಿದರು. ಇದೇ ವೇಳೆ ಅಲ್ಲಿದ್ದ ಸೈಕೋ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸುತ್ತಿದ್ದ. ಅಲ್ಲದೇ ನನ್ನ ಬಳಿ ಬರುತ್ತಿದ್ದಂತೆ ತನ್ನ ಶರ್ಟ್ ಕಳಚಿ ಮಹಿಳೆಯರು ಧರಿಸುವ ಒಳ ಉಡುಪನ್ನು ಪ್ರದರ್ಶಿಸಿದ. ಈ ಜಾಗಗಳಲ್ಲಿ ಹತ್ತಿಯ ಉಂಡೆಗಳನ್ನು ಇಟ್ಟಿರುವುದು ಕಾಣುತ್ತಿತ್ತು. ಅಲ್ಲದೇ ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಂಡಿದ್ದ. ಮಹಿಳೆಯರಂತೆ ಮೇಕಪ್ ಮಾಡಿ ಕೊಂಡಿದ್ದ. ಆತನ ಹಾವಭಾವ ನೋಡಿದರೆ ಮಂಗಳಮುಖೀಯಂತೆ ಕಾಣುತ್ತಿರಲಿಲ್ಲ.
Related Articles
Advertisement
ಇದನ್ನು ಕೇಳಿ ತಟಸ್ಥನಾಗಿ ನಿಂತು ಗಾಬರಿಗೊಂಡವನಂತೆ ನನ್ನನ್ನು ದಿಟ್ಟಿಸುತ್ತಿದ್ದ. ಮೊಬೈಲ್ ತೆಗೆದ ನಾನು ಆತನ ಫೋಟೋ ಕ್ಲಿಕ್ಕಿಸಲು ಮುಂದಾದೆ. ಜತೆಗೆ ಕೆಲ ವಾಹನ ಸವಾರರು ನೋಡಿಯೂ ನೋಡದಂತೆ ನಿಧಾನವಾಗಿ ಹೋಗುತ್ತಿದ್ದರು. ಇದನ್ನು ಕಂಡ ಆತ ಅಲ್ಲಿಂದ ಬೈಕ್‌ನಲ್ಲಿ ಪರಾರಿಯಾದ. ಬಿಳಿ ಹೆಲ್ಮೆಟ್ ಧರಿಸಿದ್ದ ಆತ ಓರ್ವ ಸೈಕೋ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇಂತಹ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಹೀಗೆ ಓಡಾಡಲು ಬಿಟ್ಟರೆ ಅಪಾಯ ತಪ್ಪಿದ್ದಲ್ಲ. ಈ ರಸ್ತೆಯಲ್ಲಿ ಓಡಾಡುವಾಗ ಯಾವುದೇ ವ್ಯಕ್ತಿಗೂ ಇಂತಹ ಕೆಟ್ಟ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ ಇದನ್ನು ಯಾರು ಕಡೆಗಣಿಸದಿರಿ. ಈ ಮಾರ್ಗದಲ್ಲಿ ಓಡಾಡುವರರು ಎಚ್ಚರಿಕೆಯಿಂದ ಇರುವಂತೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರಕಟಿಸಿ, ಪ್ರಕಟಣೆಯನ್ನು ಬೆಂಗಳೂರು ಸಿಟಿ ಪೊಲೀಸ್ ಪೇಜ್‌ಗೆ ಟ್ಯಾಗ್ ಮಾಡಿದ್ದಾರೆ.
ಸಹಾಯವಾಣಿ ಅಧಿಕಾರಿಗಳ ನಿರ್ಲಕ್ಷ್ಯಸೈಕೋ ವ್ಯಕ್ತಿ ಸ್ಥಳದಿಂದ ಪರಾರಿಯಾಗುತ್ತಿದ್ದಂತೆ ಕೂಡಲೇ ನೈಸ್ ರಸ್ತೆಯಲ್ಲಿರುವ ಫಲಕದಲ್ಲಿ ಸೂಚಿಸಿದ ಸಹಾಯವಾಣಿಗೆ ಕರೆ ಮಾಡಲು ಪ್ರಯತ್ನಿಸಿದೆ. ಆದರೆ, ಯಾರೊಬ್ಬರೂ ಸ್ಪಂದಿಸಲಿಲ್ಲ. ಎರಡು ತಾಸಿಗೂ ಹೆಚ್ಚಿನ ಸಮಯ ನಾನು ಸಹಾಯದ ನಿರೀಕ್ಷೆಯಿಂದ ಅಲ್ಲಿ ಕಾಯುತ್ತಿದ್ದೆ. ಆದರೆ ಅಧಿಕಾರಿಗಳಿಂದ ಯಾವುದೇ ಸಹಾಯ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.