Advertisement

“ಸೈಕಲ್‌’ಗಾಗಿ 1.5 ಲಕ್ಷ ಪುಟಗಳ ದಾಖಲೆ ಸಲ್ಲಿಕೆ!

03:45 AM Jan 08, 2017 | |

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಗಳ ಬಣಗಳಲ್ಲಿ ಸೈಕಲ್‌ ಚಿಹ್ನೆ ಪಡೆಯುವ ಪ್ರಬಲ ಕಸರತ್ತು ಮುಂದುವರಿದಿದೆ.

Advertisement

ಅಖೀಲೇಶ್‌ ಯಾದವ್‌ ಅವರ ಬಣವು ನಿಜವಾದ ಸಮಾಜವಾದಿ ಪಕ್ಷವಾಗಿದೆ. ಈ ಬಣದಲ್ಲಿ 205 ಶಾಸಕರು, 15 ಸಂಸದರು ಹಾಗೂ ಹಲವು ವಿಧಾನ ಪರಿಷತ್‌ ಸದಸ್ಯರು, ಶೇ.90 ಮುಖಂಡರ ಬೆಂಬಲವಿದೆ ಎಂದು ಅಖೀಲೇಶ್‌ ಬಣದಲ್ಲಿ ತಂತ್ರಗಾರಿಕೆ ರೂಪಿಸುತ್ತಿರುವ ರಾಮ್‌ಗೊಪಾಲ್‌ ಯಾದವ್‌, ಚುನಾವಣಾ ಆಯೋಗಕ್ಕೆ ದಾಖಲೆಗಳು ಮತ್ತು ಶಾಸಕರ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ.

ಚಿಹ್ನೆ ಪಡೆಯುವ ಸಂಬಂಧ ದಾಖಲೆಗಳನ್ನು ಸಲ್ಲಿಸಲು ಚುನಾವಣಾ ಆಯೋಗವು ಸೋಮವಾರವರೆಗೆ ಕಾಲಾವಕಾಶ ನೀಡಿತ್ತು. ಆದರೆ  1.5 ಲಕ್ಷ ಕ್ಕೂ ಅಧಿಕ ಪುಟಗಳ ದಾಖಲೆಗಳನ್ನು ಸಲ್ಲಿಸಲಾಗಿದೆ. ಈ ದಾಖಲೆಗಳನ್ನು ಏಳು ದೊಡ್ಡ ರಟ್ಟಿನ ಬಾಕ್ಸ್‌ ಗಳಲ್ಲಿ ತುಂಬಿಕೊಡಲಾಗಿದೆ ಎಂದು ರಾಮಗೋಪಾಲ್‌ ಹೇಳಿದ್ದಾರೆ.

ಅಖೀಲೇಶ್‌ರಿಂದ ಜ. 11ರಂದು ಎಸ್ಪಿ ಪ್ರಣಾಳಿಕೆ?: ಸಮಾಜವಾದಿ ಪಕ್ಷದಲ್ಲಿ ಉಂಟಾಗಿರುವ ಎರಡು ಬಣಗಳ ನಡುವೆ ಸಮನ್ವಯತೆ ಮೂಡುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಜ. 11ರ ನಂತರ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಪಕ್ಷದ ಮುಖಂಡ, ಘಟಕ ಅಧ್ಯಕ್ಷ ನರೇಶ್‌ ಉತ್ತಮ್‌ ತಿಳಿಸಿದ್ದಾರೆ.

ಈ ನಡುವೆ, ಲಕ್ನೋದ ನಿವಾಸದಲ್ಲಿದ್ದ ಮುಲಾಯಂ ಶನಿವಾರ ಶಿವಪಾಲ್‌ ಯಾದವ್‌, ಆಜಂ ಖಾನ್‌, ಮತ್ತಿರರರ ಜತೆ ಮಾತುಕತೆ ನಡೆಸಿದರು. ಆದರೆ ಸಂಧಾನ ಯತ್ನ ಈ ದಿನವೂ ಮುಂದಡಿ ಇಡಲಿಲ್ಲ.

Advertisement

ನಾಳೆ ಸಿಧು ಕಾಂಗ್ರೆಸ್‌ ಸೇರ್ಪಡೆ?
ಹೊಸದಿಲ್ಲಿ:
ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆದಿರುವ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು, ಸೋಮವಾರ ಕಾಂಗ್ರೆಸ್‌ ಸೇರ್ಪಡೆಯಾಗುವ ಸಾಧ್ಯತೆ ಇದೆ. ಕಳೆದ 10 ವರ್ಷಗಳಿಂದ ಬಿಜೆಪಿಯಿಂದ ಪ್ರತಿನಿಧಿಸುತ್ತಿರುವ ಅವರು ಅಮೃತಸರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಯಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಪಂಜಾಬ್‌ ವಿಧಾನಸಭೆಗೆ ಫೆ.4ರಂದು ಮತದಾನ ನಡೆಯಲಿದೆ. ಆಮ್‌ ಆದ್ಮಿ ಪಕ್ಷ ಸೇರಲು ಸಿಧು ವಿಫ‌ಲ ಯತ್ನ ನಡೆಸಿ, ಕೊನೆಗೆ ಕಾಂಗ್ರೆಸ್‌ ಸೇರಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next