Advertisement

ಕ್ರಿಕೆಟಿನತ್ತ ಸೈಫ್ ಅಲಿಖಾನ್‌ ಮಗನ ಒಲವು

12:30 AM Jul 23, 2019 | Sriram |

ಮುಂಬಯಿ: ಬಾಲಿವುಡ್‌ ನಟ ಸೈಫ್ ಅಲಿಖಾನ್‌ ಮಗಳು ಸಾರಾ ಅಲಿಖಾನ್‌ ತಂದೆಯ ಹಾದಿಯಲ್ಲೇ ಹೋಗಿ ಯಶಸ್ವಿ ಹೀರೊಯಿನ್‌ ಆಗಿರಬಹುದು, ಆದರೆ ಮಗ ಇಬ್ರಾಹಿಂ ಅಲಿಖಾನ್‌ ತಂದೆಯ ಬದಲು ಅಜ್ಜನ ಹಾದಿಯಲ್ಲಿ ನಡೆಯಲು ಉತ್ಸುಕರಾಗಿದ್ದಾರೆ.

Advertisement

ಸೈಫ್ ತಂದೆ ಮನ್ಸೂರ್‌ ಅಲಿಖಾನ್‌ ಪಟೌಡಿ ಯಶಸ್ವಿ ಕ್ರಿಕೆಟ್‌ ಆಟಗಾರ. ಅವರು ಮದುವೆಯಾಗಿರುವುದು ಬಾಲಿ ವುಡ್‌ ನಟಿ ಶರ್ಮಿಳಾ ಠಾಗೋರ್‌ ಅವರನ್ನು. ಹೀಗಾಗಿ ಮಗ ಸೈಫ್ ಅಲಿಖಾನ್‌ ತಾಯಿಯ ಹಾದಿಯಲ್ಲಿ ಸಾಗಿ ಸಿನೆಮಾ ಕ್ಷೇತ್ರವನ್ನು ಆರಿಸಿಕೊಂಡರು. ಆದರೆ ಸೈಫ್ ಮಗನಿಗೆ ಸಿನೆಮಾಕ್ಕಿಂತಲೂ ಕ್ರಿಕೆಟ್‌ ಹೆಚ್ಚು ಇಷ್ಟವಂತೆ. ಅಜ್ಜನ ಸಾಧನೆಯನ್ನು ನೋಡಿದ ಬಳಿಕ ತಾನೂ ಅವರಂತೆಯೇ ಆಗಬೇಕೆಂದು ಕನಸು ಕಾಣುತ್ತಿರುವ ಈ 18ರ ಹರೆಯದ ಚಿಗುರು ಮೀಸೆಯ ಹುಡುಗನಿಗೆ ತಂದೆ ಸೈಫ್-ತಾಯಿ ಅಮೃತಾ ಸಿಂಗ್‌ ಈಗಾಗಲೇ ಕ್ರಿಕೆಟಿ ಗನಾಗಲು ಅನುಮತಿ ನೀಡಿದ್ದಾರೆ.

ಮುಂಬಯಿಯಲ್ಲಿ ಕ್ರಿಕೆಟ್‌ ಅಭ್ಯಾಸ
“ಕ್ರಿಕೆಟಿನಲ್ಲಿ ಒಂದು ಕೈ ನೋಡುವುದು, ಒಂದು ವೇಳೆ ಅದರಲ್ಲಿ ವಿಫ‌ಲವಾದರೆ ಹೇಗೂ ಸಿನೆಮಾ ಕ್ಷೇತ್ರ ಇದೆಯಲ್ಲ. ಕ್ರಿಕೆಟಿನಲ್ಲಿ ಉನ್ನತವಾದುದ್ದೇನಾದರೂ ಸಾಧಿಸಲು ಸಾಧ್ಯವಾದರೆ ಅಲ್ಲಿಯೇ ಮುಂದುವರಿಯ ಬಹುದು’ ಎಂದು ಸೈಫ್ ಅಲಿ ಖಾನ್‌ ಹೇಳಿದ್ದಾರಂತೆ. ಇಬ್ರಾಹಿಂ ಮುಂಬಯಿ ಜಿಮಾVನದಲ್ಲಿ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದಾರೆ. ಮನ್ಸೂರ್‌ ಅಲಿಖಾನ್‌ ಪಟೌಡಿ ಭಾರತದ ಪರವಾಗಿ 46 ಟೆಸ್ಟ್‌ಗಳನ್ನು ಆಡಿದ್ದರು. ಈ ಪೈಕಿ 40 ಟೆಸ್ಟ್‌ಗಳಿಗೆ ಅವರೇ ನಾಯಕರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next